ತೆಲಂಗಾಣದ ಫಾರ್ಮ್ ಹೌಸ್ ಮೇಲೆ ಪೊಲೀಸ್ ದಾಳಿ: ಆಪರೇಷನ್ ಕಮಲಕ್ಕೆ ತಂದಿದ್ದ ಎನ್ನಲಾದ 15 ಕೋಟಿ ರೂ. ಸೀಜ್

ತೆಲಂಗಾಣದಲ್ಲಿ ಟಿಆರ್‌ಎಸ್-ಬಿಜೆಪಿ ಜಿದ್ದಾಜಿದ್ದಿ ಬಿರುಸುಗೊಂಡಿದೆ. ಇದರ ಮಧ್ಯೆ ಪೋಲೀಸರು ಭರ್ಜರಿ ಕಾರ್ಯಚರಣೆ ಮಾಡಿ ಆಪರೇಷನ್ ಕಮಲಕ್ಕಾಗಿ ತಂದಿದ್ದ ಎನ್ನಲಾದ ಹಣವನ್ನು ಸೀಜ್ ಮಾಡಿದ್ದಾರೆ.

ತೆಲಂಗಾಣದ ಫಾರ್ಮ್ ಹೌಸ್ ಮೇಲೆ ಪೊಲೀಸ್ ದಾಳಿ: ಆಪರೇಷನ್ ಕಮಲಕ್ಕೆ ತಂದಿದ್ದ ಎನ್ನಲಾದ 15 ಕೋಟಿ ರೂ. ಸೀಜ್
Cyberabad Police conduct raids
Edited By:

Updated on: Oct 26, 2022 | 11:00 PM

ಹೈದರಾಬಾದ್‌: ತೆಲಂಗಾಣದ ಸೈಬರಾಬಾದ್  ಪೊಲೀಸರು ಅಝಿಜ್ ನಗರದ ಫಾರ್ಮ್ ಹೌಸ್ ಮೇಲೆ‌ ದಾಳಿ ಮಾಡಿದ್ದು, ಬರೋಬ್ಬರಿ 15 ಕೋಟಿ ರೂ. ಹಣವನ್ನು ಸೀಜ್ ಮಾಡಿದ್ದಾರೆ. ಹೈದರಾಬಾದ್‌ನ ಹೈದರಾಬಾದ್‌ನ ಅಜೀಜ್‌ ನಗರದ ಫಾರ್ಮ್ ಹೌಸ್ ಮೇಲೆ  ಇಂದು(ಅಕ್ಟೋಬರ್ 26) ಪೊಲೀಸರು ದಾಳಿ ಮಾಡಿದ್ದು, 15 ಕೋಟಿ ರೂಪಾಯಿ ನಗದು ಜಪ್ತಿ ಮಾಡುವುದರ ಜೊತೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹರಿಯಾಣದ ಫರಿದಾಬಾದ್ ಮೂಲದ ಪೂಜಾರಿಯಾಗಿರುವ ಸತೀಶ್ ಶರ್ಮಾ (33), ತಿರುಪತಿಯ ಶ್ರೀಮನಾಥ ರಾಜ ಪೀಠದ ಪೀಠಾಧಿಪತಿ D. ಸಿಂಹಯಾಜಿ(45), ಹಾಗೂ ಸರೂರನಗರದ ಉದ್ಯಮಿ ನಂದಕುಮಾರ್ (48) ಎನ್ನುವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹಣದ ಮೂಲದ ಬಗ್ಗೆ ತನಿಖೆ ನಡೆಸಿದ್ದಾರೆ. ಫಾರ್ಮ್‌ ಹೌಸ್‌ ಶಾಸಕ ಪೈಲಟ್ ರೋಹಿತ್‌ ರೆಡ್ಡಿಗೆ ಸೇರಿದ್ದು, ಶಾಸಕ ರೋಹಿತ್‌ ರೆಡ್ಡಿರನ್ನೂ ಖರೀದಿಸಲು ಯತ್ನಿಸಲಾಗಿದೆಯಂತೆ. ಅಲ್ಲದೇ TRS ಶಾಸಕರಾದ ಹರ್ಷವರ್ಧನ್‌ ರೆಡ್ಡಿ, ರೇಗ ಕಾಂತಾರಾವ್‌, ಗುವ್ವಲ ಬಾಲರಾಜ್‌ರನ್ನು ಖರೀದಿಸಲು ಒಬ್ಬೊಬ್ಬ ಶಾಸಕರಿಗೂ ತಲಾ 100 ಕೋಟಿ ರೂ. ಆಫರ್ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

TRSನ(ಭಾರತ್ ರಾಷ್ಟ್ರ ಸಮಿತಿ ) ನಾಲ್ಕು ಶಾಸಕರನ್ನು ಖರೀದಿಸಲು ಈ ಹಣ ತರಲಾಗಿದೆ ಎಂಬ ಮಾಹಿತಿ ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ. ಆಪರೇಷನ್ ಕಮಲಕ್ಕಾಗಿ 15 ಕೋಟಿ ರೂ. ತಂದಿದ್ದು, ಹಣದ ಜೊತೆ ದೆಹಲಿಯಿಂದ ಬಂದಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯ ಬಂಡಾಯ ಶಾಸಕರೊಂದಿಗೆ ಸರ್ಕಾರ ರಚಿಸಿದ ನಂತರ, ಬಿಜೆಪಿ ಈಗ ತೆಲಂಗಾಣದಲ್ಲಿ ಅಧಿಕಾರವನ್ನು ಆಕ್ರಮಿಸಿಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಟಿಆರ್‌ಎಸ್-ಬಿಜೆಪಿ ಜಿದ್ದಾಜಿದ್ದಿ ಬಿರುಸುಗೊಂಡಿದೆ. ಇದರ ಮಧ್ಯೆ ಆಪರೇಷನ್ ಕಮಲಕ್ಕೆ ತಂದಿದ್ದ ಎನ್ನಲಾದ 15 ಕೋಟಿ ರೂ. ಸೀಜ್ ಮಾಡಿದ್ದು, ಇದಕ್ಕೆ ಇಂಬು ನೀಡಿದಂತಾಗಿದೆ.

Published On - 9:57 pm, Wed, 26 October 22