ದೆಹಲಿ: ಗುಜರಾತಿಗೆ ಜೂ.15ರಂದು ಬಿಪೋರ್ಜಾಯ್ ಚಂಡಮಾರುತ (Cyclone Biparjoy) ಅಪ್ಪಳಿಸಿದ್ದು, ಇದೀಗ ಭಾರೀ ಪ್ರಮಾಣದ ಹಾನಿಗಳಿಗೆ ಕಾರಣವಾಗಿದೆ. ನಾಲ್ಕು ದಿನಗಳಿಂದ ಈ ಚಂಡಮಾರುತ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಿದೆ. ಇದೀಗ ಗುಜರಾತ್‌ನ ಬರ್ದಾ ಡುಂಗರ್‌ನಲ್ಲಿ ಬಿಪೋರ್ಜಾಯ್ ಚಂಡಮಾರುತಕ್ಕೆ ತುತ್ತಾಗಿದ್ದ ಮಗು ಮತ್ತು ತಾಯಿಯನ್ನು ಇಂದು ರಾಜ್ಯ ಪೊಲೀಸರು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.
ಗುಜರಾತ್‌ನ ಅರಣ್ಯ ಮತ್ತು ಪರಿಸರ ಸಚಿವ ಮುಲು ಅಯರ್ ಬೇರಾ ಅವರು ಸ್ಥಳೀಯ ಸುದ್ದಿ ವಾಹಿನಿಯೊಂದರಿಂದ ಈ ಬಗ್ಗೆ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ, ಮಹಿಳಾ ಪೊಲೀಸ್ ಸಿಬ್ಬಂದಿ ತನ್ನ ತೋಳುಗಳಲ್ಲಿ ನವಜಾತ ಶಿಶುವನ್ನು ಹೊತ್ತುಕೊಂಡು ಹೋಗುತ್ತಿರುವಾಗ ತಾಯಿ ಮತ್ತು ಅನೇಕ ಮಹಿಳೆಯರು ಸುರಕ್ಷಿತ ಪ್ರದೇಶಗಳಿಗೆ ಹೋಗುತ್ತಿರುವುದನ್ನು ಕಾಣಬಹುದು.
If you are with #GujaratPolice, you are in absolutely safe hands. @CMOGuj @sanghaviharsh @GujaratPolice https://t.co/EodeDt6iPD
— DGP Gujarat (@dgpgujarat) June 15, 2023
ಭನ್ವಾಡ್ ಆಡಳಿತವು ಸೇವೆಯ ಮೂಲಕ ಮಗು ಮತ್ತು ತಾಯಿಗೆ ಭದ್ರತೆಯನ್ನು ನೀಡಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮುಲು ಅಯರ್ ಬೇರಾ ಅವರು ವೀಡಿಯೊದೊಂದಿಗೆ ಟ್ವೀಟ್ ಮಾಡಿದ್ದಾರೆ. ನಿಮ್ಮ ಜತೆಗೆ ಗುಜರಾತ್ ಪೋಲೀಸರು ಜೊತೆಗಿದ್ದರೆ, ನೀವು ಸಂಪೂರ್ಣವಾಗಿ ಸುರಕ್ಷಿತ ಕೈಯಲ್ಲಿರುತ್ತೀರಿ ಎಂದು ವೀಡಿಯೊವನ್ನು ಮರುಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Cyclone Biparjoy: ಗುಜರಾತ್‌ನಲ್ಲಿ ಬಿಪೋರ್ಜಾಯ್ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿ
ಗುರುವಾರ ಗುಜರಾತ್‌ನಲ್ಲಿ ಬಿಪೋರ್ಜಾಯ್ ಚಂಡಮಾರುತ ಅಪ್ಪಳಿಸಿದ್ದರಿಂದ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 22 ಮಂದಿ ಗಾಯಗೊಂಡಿದ್ದಾರೆ, ಜತೆಗೆ ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳಿವೆ. ಚಂಡಮಾರುತದಿಂದ ಇಂದು ಸಂಜೆ ರಾಜಸ್ಥಾನದಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಬಿಪರ್‌ಜೋಯ್ ಚಂಡಮಾರುತ ತುಂಬಾ ನಿಧಾನವಾಗಿ ಚಲಿಸುತ್ತಿದೆ, ಇದು ಅತ್ಯಂತ ಅತಿ ಉದ್ದವಾದ ಚಂಡಮಾರುತವಾಗಿ ಮಾರ್ಪಟ್ಟಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:41 am, Fri, 16 June 23