ಅಪ್ಪಳಿಸಲಿದೆ ನಿಸರ್ಗಾ ಸೈಕ್ಲೋನ್! ಮಹಾರಾಷ್ಟ್ರದ ಅಲಿಬಾಗ್ ತೀರದಲ್ಲಿ ತೀವ್ರ ಕಟ್ಟೆಚ್ಚರ
ದೆಹಲಿ: ಕೆಲ ದಿನಗಳ ಹಿಂದೆ ಅಂಫಾನ್ ಕೊಟ್ಟಿದ್ದ ಏಟಿಗೆ ಪಶ್ಚಿಮ ಭಾರತ ಅಲುಗಾಡಿತ್ತು. ಇದೀಗ ಪೂರ್ವ ಭಾರತಕ್ಕೂ ಇದೇ ಪರಿಸ್ಥಿತಿ ಎದುರಾಗಿದೆ. ‘ಅಂಫಾನ್’ ಅಬ್ಬರ ತಗ್ಗುತ್ತಿದ್ದಂತೆ, ಅರಬ್ಬಿ ಸಮುದ್ರದಲ್ಲಿ ರಾಕ್ಷಸ ಸುಳಿ ನಿರ್ಮಾಣವಾಗಿದೆ. ಈ ಸುಳಿಗಾಳಿ ಇಂದು ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಲಿದ್ದು, ಭಾರಿ ಆತಂಕ ಎದುರಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಅಪ್ಪಳಿಸಲಿದೆ ಸೈಕ್ಲೋನ್! ನಿಸರ್ಗಾ ಸೈಕ್ಲೋನ್ ಟೆನ್ಷನ್ ಕ್ಷಣಕ್ಷಣಕ್ಕೂ ಹೆಚ್ಚಾಗ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಈ ರಾಕ್ಷಸ ಸುಳಿಗಾಳಿ ಭಾರತದ ಕಡಲ ತೀರಕ್ಕೆ ಅಪ್ಪಳಿಸಲಿದೆ. […]
ದೆಹಲಿ: ಕೆಲ ದಿನಗಳ ಹಿಂದೆ ಅಂಫಾನ್ ಕೊಟ್ಟಿದ್ದ ಏಟಿಗೆ ಪಶ್ಚಿಮ ಭಾರತ ಅಲುಗಾಡಿತ್ತು. ಇದೀಗ ಪೂರ್ವ ಭಾರತಕ್ಕೂ ಇದೇ ಪರಿಸ್ಥಿತಿ ಎದುರಾಗಿದೆ. ‘ಅಂಫಾನ್’ ಅಬ್ಬರ ತಗ್ಗುತ್ತಿದ್ದಂತೆ, ಅರಬ್ಬಿ ಸಮುದ್ರದಲ್ಲಿ ರಾಕ್ಷಸ ಸುಳಿ ನಿರ್ಮಾಣವಾಗಿದೆ. ಈ ಸುಳಿಗಾಳಿ ಇಂದು ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಲಿದ್ದು, ಭಾರಿ ಆತಂಕ ಎದುರಾಗಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ಅಪ್ಪಳಿಸಲಿದೆ ಸೈಕ್ಲೋನ್! ನಿಸರ್ಗಾ ಸೈಕ್ಲೋನ್ ಟೆನ್ಷನ್ ಕ್ಷಣಕ್ಷಣಕ್ಕೂ ಹೆಚ್ಚಾಗ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಈ ರಾಕ್ಷಸ ಸುಳಿಗಾಳಿ ಭಾರತದ ಕಡಲ ತೀರಕ್ಕೆ ಅಪ್ಪಳಿಸಲಿದೆ. ಅರಬ್ಬಿ ಸಮುದ್ರದಲ್ಲಿ ವಾತಾವರಣ ಬದಲಾವಣೆ ಪರಿಣಾಮ, ಈ ಸೈಕ್ಲೋನ್ ಉದ್ಭವವಾಗಿದ್ದು, ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ ಸೇರಿದಂತೆ ಗುಜರಾತ್ ಮೇಲೆ ಸೈಕ್ಲೋನ್ ಪರಿಣಾಮ ಘೋರವಾಗಿರಲಿದೆ.
ಈಗಾಗ್ಲೇ ಪೂರ್ವ ಕರಾವಳಿ ಭಾಗದ ಹಲವು ರಾಜ್ಯಗಳಲ್ಲಿ ಭಾರಿ ಪ್ರಮಾಣದ ಮಳೆ ಆಗುತ್ತಿದ್ದು, ಇಂದು ಮಧ್ಯಾಹ್ನ 12 ಕ್ಕೆ ಮಹಾರಾಷ್ಟ್ರದ ಅಲಿಬಾಗ್ ತೀರಕ್ಕೆ ನಿಸರ್ಗಾ ಸೈಕ್ಲೋನ್ ಅಪ್ಪಳಿಸಲಿದೆ. ಇನ್ನೂ ವಾಣಿಜ್ಯ ನಗರಿ ಮುಂಬೈಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು, ‘ಕೊರೊನಾ’ ವಕ್ಕರಿಸಿರುವ ಸಂದರ್ಭದಲ್ಲೇ ಮತ್ತೊಂದು ಆಘಾತ ಎದುರಾಗಿದೆ. ಹೀಗಾಗಿ ಮುಂಬೈನ ನಿಷೇಧಾಜ್ಞೆ ಜಾರಿಗೊಳಿಸಿ, ಭಾರಿ ಕಟ್ಟೆಚ್ಚರ ವಹಿಸಲಾಗಿದೆ.
ಒಟ್ನಲ್ಲಿ ಕೊರೊನಾ ಕಂಟಕದ ನಡುವೆಯೇ ಭಾರತದ ಮೇಲೆ ಪ್ರಕೃತಿ ಮುನಿಸಿಕೊಂಡಂತೆ ಕಾಣುತ್ತಿದೆ. ಕೆಲವೇ ಕೆಲವು ದಿನಗಳ ಹಿಂದೆ ಅಂಫಾನ್ ಅಬ್ಬರಿಸಿ, ಬೊಬ್ಬಿರಿದಿತ್ತು. ಇದೆಲ್ಲಾ ಮಾಸುವ ಮುನ್ನವೇ ಮತ್ತೆ ಹಾವಳಿ ಎಬ್ಬಿಸಲು ನಿಸರ್ಗಾ ಎಂಟ್ರಿ ಕೊಟ್ಟಿದೆ. ಪರಿಸ್ಥಿತಿ ನಿಭಾಯಿಸಲು ಭಾರತೀಯ ಪಡೆಗಳು ಕೂಡ ಸಜ್ಜಾಗಿ ನಿಂತಿವೆ.
Light to moderate rainfall at most places with heavy to very heavy falls at a few places and extremely heavy falls at isolated places very likely over north Konkan (Mumbai, Palghar, Thane, Raigad districts) and north MadhyaMaharashtra on 3rd June: IMD #CycloneNisarga https://t.co/VcjfDmjGi2
— ANI (@ANI) June 2, 2020
Published On - 6:47 am, Wed, 3 June 20