ಮುಂಬೈಗೆ ‘ತೇಜ್ ಚಂಡಮಾರುತ’ (Tej Cyclone)ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದ್ದು, ಇನ್ನೆರಡು-ಮೂರು ದಿನಗಳಲ್ಲಿ ಪ್ರಬಲ ಚಂಡಮಾರುತವಾಗಿ ಬದಲಾಗುವ ನಿರೀಕ್ಷಿಯಿದೆ. ಈ ಚಂಡಮಾರುತವು ಯಾವ ತೀವ್ರತೆಯೊಂದಿಗೆ ಬರಬಹುದೆಂದು ಇನ್ನೂ ಊಹಿಸಲು ಸಾಧ್ಯವಿಲ್ಲ, ಆದರೆ ಭಾರತೀಯ ಹವಾಮಾನ ಇಲಾಖೆ (IMD) ಇದು ಕ್ರಮೇಣ ಬಲಗೊಳ್ಳಬಹುದು ಎಂದು ಹೇಳಿದೆ.
ಸದ್ಯ ಹವಾಮಾನ ಇಲಾಖೆ ಈ ಬಗ್ಗೆ ನಿರಂತರ ನಿಗಾ ಇರಿಸಿದೆ. ಅದೇ ಸಮಯದಲ್ಲಿ, ಅರಬ್ಬಿ ಸಮುದ್ರದಲ್ಲಿನ ಪರಿಸ್ಥಿತಿಗಳು ಚಂಡಮಾರುತವಾಗಿ ಮಾರ್ಪಟ್ಟರೆ, ಗಾಳಿಯು ಗಂಟೆಗೆ 60 ಕಿಮೀ ವೇಗದಲ್ಲಿ ಬೀಸಲಿದೆ. ಅಕ್ಟೋಬರ್ 20ರ ವೇಳೆಗೆ ಕಡಿಮೆ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಮೀನುಗಾರರು ದಡಕ್ಕೆ ಮರಳುವಂತೆ ಐಎಂಡಿ ಎಚ್ಚರಿಕೆ ನೀಡಿದೆ. ಮುಂದಿನ ಐದು ದಿನಗಳ ಕಾಲ ಬಹುತೇಕ ಭಾಗಗಳಲ್ಲಿ ಮಳೆಯ ವಾತಾವರಣ ಮುಂದುವರಿಯಬಹುದು.
ಮತ್ತಷ್ಟು ಓದಿ: Karnataka Rain: ಕರ್ನಾಟಕದ ಕರಾವಳಿಯಲ್ಲಿ ಅ.25ರವರೆಗೂ ಮಳೆ, ಈ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ಹೆಚ್ಚಳ
ಕಡಿಮೆ ಒತ್ತಡದ ಪ್ರದೇಶವು ಇನ್ನೂ ಚಂಡಮಾರುತವಾಗಿ ಬದಲಾಗಿಲ್ಲ ಆದರೆ ಮುಂದಿನ 48 ಗಂಟೆ ನಿರ್ಣಾಯಕ ಎಂದು ಪರಿಗಣಿಸಲಾಗಿದೆ. ಒಂದು ವೇಳೆ ಚಂಡಮಾರುತ ತೇಜ್ ರೂಪುಗೊಂಡರೆ ಅದು ಕರಾವಳಿಯಿಂದ ಗುಜರಾತ್ ಕಡೆಗೆ ಚಲಿಸಬಹುದು, ಚಂಡಮಾರುತವು ಮುಂಬೈ, ಪುಣೆಯಲ್ಲಿ ಬಿರುಗಾಳಿ ಸಹಿತ ಮಳೆಯನ್ನು ತರಬಹುದು ಎಂದು ಅಂದಾಜಿಸಲಾಗಿದೆ.
ಚಂಡಮಾರುತ ಪ್ರಭಾವದಿಂದಾಗಿ ಮುಂಬೈನಲ್ಲಿ ರಾತ್ರಿ ಉಷ್ಣಾಂಶ 22-23 ಡಿಗ್ರಿ ಸೆಲ್ಸಿಯಸ್ ಇತ್ತು. ಚಂಡಮಾರುತದಿಂದಾಗಿ ದಕ್ಷಿಣ ಕೊಂಕಣದಲ್ಲಿ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ