ಒಡಿಶಾ/ಕೋಲ್ಕತ್ತಾ: ಯಾಸ್ ಚಂಡಮಾರುತ ಪಶ್ಚಿಮ ಬಂಗಾಳದ ಕೆಲ ಭಾಗ ಹಾಗೂ ಒಡಿಶಾದಲ್ಲಿ ತೀವ್ರ ಸ್ವರೂಪದ ಪರಿಣಾಮ ಬೀರಬಹುದೆಂದು ಅಂದಾಜಿಸಲಾಗಿದ್ದು, ಈಗಾಗಲೇ ಒಡಿಶಾದ ಕಡಲತೀರಕ್ಕೆ ಚಂಡಮಾರುತ ಬಂದಪ್ಪಳಿಸಲಾರಂಭಿಸಿದೆ. ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಯಾಸ್ ಚಂಡಮಾರುತ ಒಡಿಶಾದ ಭದ್ರಕ್ ಜಿಲ್ಲೆಯ ಧಾಮ್ರ ಬಂದರು ಬಳಿ ಭೂಪ್ರದೇಶಕ್ಕೆ ಅಪ್ಪಳಿಸಬಹುದೆಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ. ಈ ಚಂಡಮಾರುತವು ಕಡಲತೀರಕ್ಕೆ ಅಪ್ಪಳಿಸುವ ಪ್ರಕ್ರಿಯೆ ನಾಲ್ಕು ಗಂಟೆ ಕಾಲ ಮುಂದುವರೆಯಲಿದ್ದು, ಇಂದು ಮಧ್ಯಾಹ್ನದವರೆಗೂ ಭೂಮಿಗೆ ಅಪ್ಪಳಿಸುವ ಪ್ರಕ್ರಿಯೆ ನಡೆಯಲಿದೆ. ಒಡಿಶಾದ ಬಾಲಸೋರ್ – ದಾಮ್ರಾ ಬಂದರು ಬಳಿ ಯಾಸ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಬಾಲಸೋರ್ ಸಮುದ್ರದ ಬಳಿ ಆರು ಅಡಿ ಎತ್ತರದವರೆಗೂ ಸಮುದ್ರದ ಅಲೆಗಳು ಏಳುತ್ತಿರುವುದು ಯಾಸ್ ತೀವ್ರತೆಗೆ ಸಾಕ್ಷಿಯಾಗಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಬೆಳಗ್ಗೆ 8.30ರ ಸುಮಾರಿಗೆ ಚಂಡಮಾರುತ ಭೂಮಿಗೆ ಬಂದಪ್ಪಳಿಸಲಾರಂಭಿಸಿದ್ದು ಸದ್ಯ ಬಾಲಾಸೋರ್ ಪ್ರದೇಶದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಮಿದ್ನಾಪುರ್ ಸಮೀಪ ಕೆಲವೆಡೆ ಸಮುದ್ರದ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದ್ದು, ಕೆಲವೇ ಹೊತ್ತಲ್ಲಿ ಇದು ಇನ್ನೂ ತೀವ್ರಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇನ್ನು ಕೆಲ ಗಂಟೆಗಳಲ್ಲಿ ಸಮುದ್ರ ತೀರಕ್ಕೆ ಯಾಸ್ ಚಂಡಮಾರುತ ಅಪ್ಪಳಿಸಲಿದ್ದು, ಈ ವೇಳೆ 130-140ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಭಾರೀ ಮಳೆಯೂ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
#WATCH | Some fishermen seen near the sea, even as it turns turbulent in Gopalpur of Ganjam district in wake of #CycloneYaas. Meteorological Department, Gopalpur has announced a Yellow alert in the district. pic.twitter.com/Tp5ButvwjX
— ANI (@ANI) May 26, 2021
ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ ಬೆಳಿಗ್ಗೆ 5 ಗಂಟೆವರೆಗೆ ಒಡಿಶಾದ ಭುವನೇಶ್ವರ್ ವಿಮಾನ ನಿಲ್ದಾಣ ಹಾಗೂ ಪಶ್ಚಿಮ ಬಂಗಾಳದ ಕೋಲ್ಕತಾ, ದುರ್ಗಾಪುರ ವಿಮಾನ ನಿಲ್ದಾಣ ಬಂದ್ ಆಗಿದ್ದು, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ NDRF ನ 115 ತಂಡಗಳು ರಕ್ಷಣಾ ಕಾರ್ಯಾಚರಣೆಗೆ ನಿಯೋಜನೆಗೊಂಡಿವೆ.
Karnataka Rain: ಯಾಸ್ ಚಂಡಮಾರುತದ ಪ್ರಭಾವ; ಕರ್ನಾಟಕದಲ್ಲಿ ಇಂದಿನಿಂದ ಮೇ 29ರವರೆಗೂ ವ್ಯಾಪಕ ಮಳೆ