ದಕ್ಷಿಣ ಅಂಡಮಾನ್ ಸಾಗರದಲ್ಲಿ ವಾಯುಭಾರ ಕುಸಿತವಾಗಲಿದ್ದು, ಚಂಡಮಾರುತ ಏಳುವ ಸಾಧ್ಯತೆ ಇದೆ. ಈ ಚಂಡಮಾರುತ ಸ್ವರೂಪದ ಗಾಳಿಯು ಒಡಿಶಾ ಮತ್ತು ಆಂಧ್ರಪ್ರದೇಶದ ಮೇಲೆ ಪರಿಣಾಮ ಬೀರಲಿದ್ದು, ತತ್ಪರಿಣಾಮ ನವೆಂಬರ್ 30ರಿಂದ (ಇಂದಿನಿಂದ) ಡಿಸೆಂಬರ್ 2ರವರೆಗೆ ಆಂಧ್ರಪ್ರದೇಶ, ಒಡಿಶಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ. ಇಂದು ದಕ್ಷಿಣ ಅಂಡಮಾನ್ ಸಾಗರದಲ್ಲಿ ವಾಯುಭಾರ ಕುಸಿತವಾಗಿ ಚಂಡಮಾರುತ ಏಳುವ ಸಾಧ್ಯತೆಯಿದೆ. ಗಾಳಿ ಪಶ್ಚಿಮ-ವಾಯುವ್ಯದತ್ತ ಚಲಿಸಲಿದೆ. ನಂತರ ಇದು ಇನ್ನು 24 ಗಂಟೆಯಲ್ಲಿ ಆಗ್ನೇಯ ಮತ್ತು ಬಂಗಾಳಕೊಲ್ಲಿಯ ವಾಯುಭಾರ ಕುಸಿತಕ್ಕೆ ಕಾರಣವಾಗಲಿದೆ ಡಿಸೆಂಬರ್ ಎಂದೂ ಹವಾಮಾನ ಇಲಾಖೆ ತಿಳಿಸಿದೆ.
ಡಿಸೆಂಬರ್ ಮೊದಲವಾರದಲ್ಲಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಏಳುವ ಸಾಧ್ಯತೆ ಹೆಚ್ಚಾಗಿದೆ. ಒಡಿಶಾದಲ್ಲಿ ಡಿಸೆಂಬರ್ 2ರಿಂದ 5ರವರೆಗೆ ಭಾರಿ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರಾ ತಿಳಿಸಿದ್ದಾರೆ. ಹಾಗೇ, ರಾಜಸ್ಥಾನ, ದೆಹಲಿ, ಹರ್ಯಾಣ, ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ, ಉತ್ತರಾಖಂಡ್ಗಳಲ್ಲಿ ಕೂಡ ಮಳೆಯಾಗಬಹುದು. ಹವಾಮಾನದಲ್ಲಿ ಸಂಪೂರ್ಣ ಬದಲಾವಣೆ ಆಗಬಹುದು ಎಂದು ಐಎಂಸಿ ಸೈಂಟಿಸ್ಟ್ ಆರ್.ಕೆ.ಜೆನಮಣಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯ ಭಂಡಾಸುರ, ಮಂಡಾಸುರರು: ಶ್ರೀರಾಮುಲು ವಾಗ್ದಾಳಿ