Shashi Tharoor: ಸಂಸದೆಯರೊಂದಿಗಿನ ಸೆಲ್ಫೀ ವಿವಾದದ ಬೆನ್ನಲ್ಲೇ ಮತ್ತೊಂದು ಫೋಟೋ ಟ್ವೀಟ್ ಮಾಡಿದ ಶಶಿ ತರೂರ್

ಸಂಸದೆಯರೊಂದಿಗೆ ತೆಗೆಸಿಕೊಂಡಿದ್ದ ಸೆಲ್ಫೀ ವೈರಲ್ ಆದ ಬೆನ್ನಲ್ಲೇ ಇಂದು ಸಂಸದರೊಂದಿಗೆ ಫೋಟೋ ತೆಗೆಸಿಕೊಂಡು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಈ ಫೋಟೋಗಳು ನಿನ್ನೆಯ ಫೋಟೋದಂತೆ ವೈರಲ್ ಆಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Shashi Tharoor: ಸಂಸದೆಯರೊಂದಿಗಿನ ಸೆಲ್ಫೀ ವಿವಾದದ ಬೆನ್ನಲ್ಲೇ ಮತ್ತೊಂದು ಫೋಟೋ ಟ್ವೀಟ್ ಮಾಡಿದ ಶಶಿ ತರೂರ್
ಸಂಸದರ ಜೊತೆ ಶಶಿ ತರೂರ್ ಸೆಲ್ಫೀ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 30, 2021 | 4:32 PM

ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಮಹಿಳಾ ಸಂಸದರೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಸೆಲ್ಫೀಯನ್ನು ಟ್ವೀಟ್ ಮಾಡಿದ್ದರು. ಆ ಟ್ವೀಟ್ ಜೊತೆಗೆ ಹಾಕಿದ್ದ ಕ್ಯಾಪ್ಷನ್ ಭಾರೀ ವಿವಾದಕ್ಕೀಡಾಗಿತ್ತು. ಸಂಸದೆಯರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದ ಶಶಿ ತರೂರ್ ಕೆಲಸ ಮಾಡಲು ಲೋಕಸಭೆ ಆಕರ್ಷಣೀಯವಾದ ಸ್ಥಳವಲ್ಲ ಎಂದು ಹೇಳಿದವರಾರು? ಎಂದು ಟ್ವೀಟ್ ಮಾಡಿದ್ದರು. ಶಶಿ ತರೂರ್ ಅವರ ಮನಸ್ಥಿತಿಗೆ ಟ್ವಿಟ್ಟಿಗರು ಲೇವಡಿ ಮಾಡಿದ್ದರು. ಅದರ ಬೆನ್ನಲ್ಲೇ ಇಂದು ಪುರುಷ ಸಂಸದರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ಫೋಟೋಗಳು ವೈರಲ್ ಆಗುವುದಿಲ್ಲ ಎಂದು ಕೂಡ ಟ್ವೀಟ್ ಮಾಡುವ ಮೂಲಕ ತಮ್ಮನ್ನು ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಶಶಿ ತರೂರ್ ಸಂಸತ್ ಆವರಣದಲ್ಲಿ ಮಹಿಳಾ ಸಂಸದರೊಂದಿಗೆ ತೆಗೆದುಕೊಂಡು ಸೆಲ್ಫೀಯನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಶಶಿ ತರೂರ್ ಈ ಫೋಟೋಗೆ ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಹೇಳಿದವರು ಯಾರು? ಎಂದು ಕ್ಯಾಪ್ಷನ್ ನೀಡಿದ್ದರು. ಮಹಿಳಾ ಸಂಸದರಾದ ಸುಪ್ರಿಯಾ ಸುಳೆ, ಪ್ರೀನೀತ್ ಕೌರ್, ತಮಿಳಚಿ ತಂಗಪಾಂಡಿಯನ್, ಮಿಮಿ ಚಕ್ರವರ್ತಿ, ನುಸ್ರತ್ ಜಹಾನ್ ರೂಹಿ ಮತ್ತು ಜ್ಯೋತಿಮಣಿ ಅವರೊಂದಿಗಿನ ಸೆಲ್ಫೀಯನ್ನು ಶಶಿ ತರೂರ್ ಟ್ವೀಟ್ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿ ಅನೇಕ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು.

ತಮ್ಮ ಟ್ವೀಟ್ ವಿವಾದಕ್ಕೀಡಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದ ಶಶಿ ತರೂರ್, ನನ್ನ ಟ್ವೀಟ್ ಹಿಂದೆ ಯಾವುದೇ ಕೆಟ್ಟ ಉದ್ದೇಶಗಳಿರಲಿಲ್ಲ. ಈ ಟ್ವೀಟ್ ಅನ್ನು ಒಳ್ಳೆಯ ರೀತಿಯಲ್ಲಿ ಮಾಡಲಾಗಿದ್ದು, ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದರು.

ಸಂಸದೆಯರೊಂದಿಗೆ ತೆಗೆಸಿಕೊಂಡಿದ್ದ ಸೆಲ್ಫೀ ವೈರಲ್ ಆದ ಬೆನ್ನಲ್ಲೇ ಇಂದು ಸಂಸದರೊಂದಿಗೆ ಫೋಟೋ ತೆಗೆಸಿಕೊಂಡು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಈ ಫೋಟೋಗಳು ನಿನ್ನೆಯ ಫೋಟೋದಂತೆ ವೈರಲ್ ಆಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಹೂವಿನ ಹಾರ ಹಾಕಿ ಗಣಹೋಮ; ವಿಡಿಯೋ ವೈರಲ್

ಮಹಿಳಾ ಸಂಸದರೊಂದಿಗೆ ಸೆಲ್ಫಿ; ಲೋಕಸಭೆ ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಹೇಳಿದವರಾರು ಎಂದ ಶಶಿ ತರೂರ್ ಟ್ವೀಟ್‌ಗೆ ಆಕ್ಷೇಪ