ಮಹಿಳಾ ಸಂಸದರೊಂದಿಗೆ ಸೆಲ್ಫಿ; ಲೋಕಸಭೆ ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಹೇಳಿದವರಾರು ಎಂದ ಶಶಿ ತರೂರ್ ಟ್ವೀಟ್‌ಗೆ ಆಕ್ಷೇಪ
ಮಹಿಳಾ ಸಂಸದರು ಬಯಸಿ ತೆಗೆದ ಸೆಲ್ಫಿಯನ್ನು ತಮಾಷೆಯ ರೀತಿಯಲ್ಲಿ ಟ್ಟೀಟ್ ಮಾಡಲು ಅವರೇ ಹೇಳಿದ್ದರು.ಕೆಲವರಿಗೆ ಇದರಿಂದ ನೋವಾಗಿದೆ, ಕ್ಷಮಿಸಿ. ಕೆಲಸದ ಸ್ಥಳವನ್ನು ಸೌಹಾರ್ದತೆಯ ಸ್ಥಳ ಮಾಡಿದ ಬಗ್ಗೆ ನನಗೆ ಖುಷಿಯಿದೆ. ವಿಷಯ ಅಷ್ಟೇ ಎಂದು ತಿರುವನಂತಪುರಂ ಸಂಸದ ಶಶಿ ತರೂರ್ ಮತ್ತೊಂದು ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ(Winter Session of Parliament) ಮಂಚೆ ಆರು ಮಹಿಳಾ ಸಂಸದರೊಂದಿಗೆ ಇರುವ ಸೆಲ್ಫಿಯನ್ನು ಟ್ವೀಟ್ ಮಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor), ಲೋಕಸಭೆ ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಹೇಳಿದವರಾರು? ಎಂಬ ಟ್ವೀಟ್ ಹೆಚ್ಚಿನವರಿಗೆ ರುಚಿಸಲಿಲ್ಲ. ಲೋಕಸಭೆ ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಹೇಳಿದವರಾರು? ಇಂದು ಬೆಳಿಗ್ಗೆ ನನ್ನ ಆರು ಮಂದಿ ಸಹೋದ್ಯೋಗಿಗಳ ಜೊತೆಗೆ ಸೆಲ್ಪಿ ತೆಗೆದುಕೊಂಡೆವು ಎಂದು ಸಂಸದರಾದ ಸುಪ್ರಿಯಾ ಸುಳೆ, ಪ್ರಣೀತ್ ಕೌರ್,ತಮಳಿಚಿ ತಂಗಪಾಂಡ್ಯನ್, ನುಸ್ರತ್ ಜಹಾನ್ ಮತ್ತು ಜೋತಿಮಣಿ ಜತೆಗಿರುವ ಸೆಲ್ಫಿಯನ್ನು ತರೂರ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಬಗ್ಗೆ ಹಲವರು ನಕಾರಾತ್ಮವಾಗಿ ಕಾಮೆಂಟ್ ಮಾಡಿದ್ದರಿಂದ ಇನ್ನೊಂದು ಟ್ವೀಟ್‌ನಲ್ಲಿ ಶಶಿ ತರೂರ್ ಕ್ಷಮೆಯಾಚಿಸಿದ್ದಾರೆ. “ಮಹಿಳಾ ಸಂಸದರು ಬಯಸಿ ತೆಗೆದ ಸೆಲ್ಫಿಯನ್ನು ತಮಾಷೆಯ ರೀತಿಯಲ್ಲಿ ಟ್ಟೀಟ್ ಮಾಡಲು ಅವರೇ ಹೇಳಿದ್ದರು.ಕೆಲವರಿಗೆ ಇದರಿಂದ ನೋವಾಗಿದೆ, ಕ್ಷಮಿಸಿ. ಕೆಲಸದ ಸ್ಥಳವನ್ನು ಸೌಹಾರ್ದತೆಯ ಸ್ಥಳ ಮಾಡಿದ ಬಗ್ಗೆ ನನಗೆ ಖುಷಿಯಿದೆ. ವಿಷಯ ಅಷ್ಟೇ ಎಂದು ತಿರುವನಂತಪುರಂ ಸಂಸದರು ಮತ್ತೊಂದು ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಮಹಿಳಾ ಸಂಸದರು, ಪಕ್ಷದ ಗಡಿಗಳನ್ನು ದಾಟಿ ತರೂರ್ ಅವರೊಂದಿಗೆ ನಗುತ್ತಾ ಸೆಲ್ಫಿ ಕ್ಲಿಕ್ ಮಾಡಿದ್ದರು. ತೃಣಮೂಲದ ನುಸ್ರತ್ ಜಹಾನ್ ಮತ್ತು ಮಿಮಿ ಚಕ್ರವರ್ತಿ, ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್, ಎನ್‌ಸಿಪಿಯ ಸುಪ್ರಿಯಾ ಸುಳೆ, ಕಾಂಗ್ರೆಸ್‌ನ ಜೋತಿಮಣಿ ಮತ್ತು ತಮಿಳಚಿ ತಂಗಪಾಂಡ್ಯ ಅವರು ತರೂರ್ ಅವರೊಂದಿಗೆ ಪೋಸ್ ನೀಡಿದ್ದರು. ಈ ಟ್ವೀಟ್ ಸಂವೇದನಾರಹಿತವಾಗಿದೆ ಎಂದು ಕೆಲವರು ಟೀಕಿಸಿದ್ದಾರೆ.
The whole selfie thing was done (at the women MPs’ initiative) in great good humour & it was they who asked me to tweet it in the same spirit. I am sorry some people are offended but i was happy to be roped in to this show of workplace camaraderie. That’s all this is. https://t.co/MfpcilPmSB
— Shashi Tharoor (@ShashiTharoor) November 29, 2021
ಶಶಿತರೂರ್ ಅವರಂತೆ ಸಮಾನತೆಯ ಭಾಷಣಕ್ಕೆ ತೆರೆದುಕೊಳ್ಳುವ ಯಾರಾದರೂ ಚುನಾಯಿತ ರಾಜಕೀಯ ನಾಯಕರನ್ನು ಅವರ ನೋಟಕ್ಕೆ ತಗ್ಗಿಸಲು ಪ್ರಯತ್ನಿಸುತ್ತಾರೆ ಮತ್ತು ಅದನ್ನು ಕಾಮೆಂಟ್‌ನಲ್ಲಿ ಪ್ರೇರಿಸುವಂತೆ ಮಾಡುವುದನ್ನು ನಂಬಲಾಗದು. ಇದು2021ಎಂದು ಸುಪ್ರೀಂಕೋರ್ಟ್ ವಕೀಲರಾದ ಕರುಣಾ ನಂದಿ ಪ್ರತಿಕ್ರಿಯಿಸಿದ್ದಾರೆ .
Incredible that someone as exposed to equality discourse as @ShashiTharoor would attempt to reduce elected political leaders to their looks, and centre himself in the comment to boot. This is 2021, folks. https://t.co/aPJ3NK4sCW
— Karuna Nundy (@karunanundy) November 29, 2021
“ಕೆಲಸ ಮಾಡಲು ಆಕರ್ಷಕ ಸ್ಥಳವೇ? ಇದು 2021 ಅಂಕಲ್?” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. “ಈ ಸಮಯದಲ್ಲಿ, ನೀವು ಹೆಚ್ಚಿನ ಮೀಮ್‌ಗಳನ್ನು ಕೇಳುತ್ತಿದ್ದೀರಿ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ , ಸಂಸತ್ ಅಧಿವೇಶನದ ಮುನ್ನಾದಿನದಂದು ಪಕ್ಷದ ಸದಸ್ಯರನ್ನು ಒಳಗೊಂಡ ಮತ್ತೊಂದು ಚಿತ್ರವನ್ನು ತರೂರ್ ಟ್ವೀಟ್ ಮಾಡಿದ್ದರು.
Great to catch up with some @INCIndia MP colleagues gathering in Delhi in advance of tomorrow’s Parliament session. Tea, coffee, pakoras & conversation were on the menu and effective action on the agenda! @ManishTewari @pradyutbordoloi @KartiPC pic.twitter.com/XjgIjvhGZs
— Shashi Tharoor (@ShashiTharoor) November 28, 2021
ನಾಳೆಯ ಸಂಸತ್ತಿನ ಅಧಿವೇಶನಕ್ಕೆ ಮುಂಚಿತವಾಗಿ ದೆಹಲಿಯಲ್ಲಿ ಕೆಲವು ಕಾಂಗ್ರೆಸ್ ಸಂಸದ ಸಹೋದ್ಯೋಗಿಗಳನ್ನು ಭೇಟಿಯಾಗಲು ಸಂತೋಷವಾಗಿದೆ. ಚಹಾ, ಕಾಫಿ, ಪಕೋಡಾಗಳು ಸಂಭಾಷಣೆಯು ಮೆನುವಿನಲ್ಲಿತ್ತು ಮತ್ತು ಕಾರ್ಯಸೂಚಿಯಲ್ಲಿ ಪರಿಣಾಮಕಾರಿ ಕ್ರಮ ಎಂದು ತರೂರ್ ಮನೀಶ್ ತಿವಾರಿ ಪ್ರದ್ಯುತ್ ಮತ್ತು ಕಾರ್ತಿ ಚಿದಂಬರಂ ಜತೆಗಿರುವ ಫೋಟೋ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: Farm Laws Repeal Bill 2021 ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲದ ನಡುವೆ ಕೃಷಿ ಕಾನೂನುಗಳ ರದ್ದತಿ ಮಸೂದೆ 2021ಗೆ ಅಂಗೀಕಾರ