ಡಿಕೆಶಿ, ಸಿದ್ದರಾಮಯ್ಯ ಭಂಡಾಸುರ, ಮಂಡಾಸುರರು: ಶ್ರೀರಾಮುಲು ವಾಗ್ದಾಳಿ
ಪ್ರಧಾನಿ ಮೋದಿ ಹೀಯಾಳಿಸಿ ದೊಡ್ಡವರಾಗುವ ಭಾವನೆ ಅವರದು. ಭಂಡಾಸುರ, ಮಂಡಾಸುರರು ದೊಡ್ಡದೊಡ್ಡ ಮಾತಾಡ್ತಿದ್ದಾರೆ. ಬಿಟ್ ಕಾಯಿನ್ ಬಗ್ಗೆ ಅವರ ಬಳಿ ಯಾವುದೇ ದಾಖಲೆ ಇಲ್ಲ ಎಂದು ಚಿತ್ರದುರ್ಗದಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗ: ಕಾಂಗ್ರೆಸ್ನ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಭಂಡಾಸುರ, ಮಂಡಾಸುರರು. ಲೋಕಸಭೆಯಲ್ಲಿ 400 ಇದ್ದ ಕಾಂಗ್ರೆಸ್ ಸದಸ್ಯರ ಸಂಖ್ಯೆ, ಈಗ 50ಕ್ಕೆ ಬಂದು ತಲುಪಿದೆ. ಬಿಜೆಪಿ ಮುಳುಗುತ್ತಿರುವ ಹಡಗು ಎಂದು ಭಂಡಾಸುರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪ್ರಧಾನಿ ಮೋದಿ ಹೀಯಾಳಿಸಿ ದೊಡ್ಡವರಾಗುವ ಭಾವನೆ ಅವರದು. ಭಂಡಾಸುರ, ಮಂಡಾಸುರರು ದೊಡ್ಡದೊಡ್ಡ ಮಾತಾಡ್ತಿದ್ದಾರೆ. ಬಿಟ್ ಕಾಯಿನ್ ಬಗ್ಗೆ ಅವರ ಬಳಿ ಯಾವುದೇ ದಾಖಲೆ ಇಲ್ಲ ಎಂದು ಚಿತ್ರದುರ್ಗದಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಹಿಂದುಳಿದವರು, ದಲಿತರನ್ನು ಕಾಂಗ್ರೆಸ್ ಮರೆತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಇದೆ ಎಂದು ಬಡಿದಾಡ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಡಿದಾಡುತ್ತಿದ್ದಾರೆ. ಇಬ್ಬರೂ ಮುಖ್ಯಮಂತ್ರಿ ಆಗುವ ಕನಸಿನಲ್ಲಿದ್ದಾರೆ. ಸಿಎಂ ಸ್ಥಾನವೇನು ಅವರ ಅಪ್ಪನ ಮನೆ ಆಸ್ತಿಯಾ? ಸಿದ್ದರಾಮಯ್ಯಗೆ ಬುದ್ಧಿ ಇಲ್ಲ, ಉಳಿದ ಎಲ್ಲರಿಗೂ ಬುದ್ಧಿ ಇದೆ. ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಭ್ಯರ್ಥಿಗಳು ಸಿಕ್ಕಿಲ್ಲ. ದುಡ್ಡಿದ್ದ ಕೆಲವರನ್ನು ಕರೆತಂದು ಟಿಕೆಟ್ ನೀಡಿದ್ದಾರೆ. ಸಿದ್ದರಾಮಯ್ಯ ದೇವೇಗೌಡರಿಗೆ ಟೋಪಿ ಹಾಕಿದರು. ಹೊಟ್ಟೆ ಪಾಡಿಗೆ ಕಾಂಗ್ರೆಸ್ಗೆ ಬಂದಿದ್ದು ಸಿದ್ದರಾಮಯ್ಯ. ದಲಿತರು, ಹಿಂದುಳಿದ ವರ್ಗಗಳ ಕ್ಷಮೆ ಕೇಳಬೇಕು ಎಂದು ಕಲಬುರಗಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಈಶ್ವರಪ್ಪ ಕಾಂಗ್ರೆಸ್ನ್ನು ಟೀಕಿಸಿದ್ದಾರೆ.
ಸಿಎಂ ಆಗುವ ತಿರುಕನ ಕನಸು ಯಾರೂ ಕಾಣಬಾರದು ಎಂದು ಸಚಿವ ಅಶೋಕ್ ಹೇಳಿಕೆಗೆ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸಿಎಂ ಆಗಬೇಕೆಂದು ಯಾವತ್ತೂ ಕನಸು ಕಂಡಿಲ್ಲ. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಅಶೋಕ್ ಹೇಳಿದ್ದು ಬಿಜೆಪಿಯವರಿಗಲ್ಲ, ಕಾಂಗ್ರೆಸ್ನವರಿಗೆ. ಕಾಂಗ್ರೆಸ್ನಲ್ಲಿ ಪಂಚ ಕೌರವರು ಸಿಎಂ ಕನಸು ಕಾಣ್ತಿದ್ದಾರೆ. ಎಲ್ಲರೂ ನಾನೇ ಸಿಎಂ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ. ನಾನು ನಿರಾಣಿ ಸಿಎಂ ಆಗಬೇಕು ಅಂದಿದ್ದು ಈ ಅವಧಿಗಲ್ಲ. ಮುಂದಿನ ದಿನದಲ್ಲಿ ನಿರಾಣಿ ಸಿಎಂ ಆಗಬೇಕು ಅಂದಿದ್ದೇನೆ. ಈ ಅವಧಿ ಮುಗಿಯೋವರೆಗೆ ಬೊಮ್ಮಾಯಿಯೇ ಸಿಎಂ ಎಂದು ಸಚಿವ ಅಶೋಕ್ ಹೇಳಿಕೆಗೆ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ, ದಲಿತರು ಹೊಟ್ಟೆಪಾಡಿಗೆ ಬಿಜೆಪಿಗೆ ಸೇರುತ್ತಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿದ್ದಾರೆ. ಕಾಂಗ್ರೆಸ್ ನಿರ್ನಾಮ ಮಾಡೋವರಗೂ ಬರುತ್ತಿರುತ್ತಾರೆ. ಕಾಂಗ್ರೆಸ್ ನಿರ್ನಾಮ ಮಾಡೋವರೆಗೂ BJPಗೆ ಬರ್ತಾರೆ. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಉದ್ಧಾರಕ ಅಂತಾರೆ. ಆದ್ರೆ ಸಿದ್ದರಾಮಯ್ಯ ಏನ ಕಡಿದು ಗುಡ್ಡೆ ಹಾಕಿದ್ದಾನೆ ಹೇಳಲಿ. ಸಿದ್ದರಾಮಯ್ಯ ಬಗ್ಗೆ ನಾನು ಇನ್ನು ಏಕವಚನ ಬಳಸಿಲ್ಲ. ಮುಂದಿನ ದಿನದಲ್ಲಿ ಮಾತನಾಡುತ್ತೇನೆ. ಮೋದಿ ಬಗ್ಗೆ ಏಕವಚನದಲ್ಲಿ ಸಿದ್ದರಾಮಯ್ಯ ಮಾತಾಡ್ತಾರೆ. ಸಿದ್ದರಾಮಯ್ಯಗೆ ಕೊಬ್ಬು, ಧಿಮಾಕು ಎಷ್ಟಿರಬೇಕು? ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಕೆ.ಎಸ್.ಈಶ್ವರಪ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ಕುಡುಕ, ಕುಡಿಯದೇ ಇದ್ದಾಗ ಒಂದು ಕುಡಿದಾಗಲೇ ಮತ್ತೊಂದು ಮಾತಾಡ್ತಾರೆ; ಕೆಎಸ್ ಈಶ್ವರಪ್ಪ ಗರಂ
ಇದನ್ನೂ ಓದಿ: ಆಪರೇಷನ್ ಕಮಲಕ್ಕೆ ದುಡ್ಡುಕೊಡಬೇಕು ಎಂದ ಕೆಎಸ್ ಈಶ್ವರಪ್ಪ; ಭಾಷಣದ ವೇಳೆ ಪರೋಕ್ಷ ಹೇಳಿಕೆ
Published On - 3:51 pm, Tue, 30 November 21