ಆಪರೇಷನ್​ ಕಮಲಕ್ಕೆ ದುಡ್ಡುಕೊಡಬೇಕು ಎಂದ ಕೆಎಸ್ ಈಶ್ವರಪ್ಪ; ಭಾಷಣದ ವೇಳೆ ಪರೋಕ್ಷ ಹೇಳಿಕೆ

TV9 Digital Desk

| Edited By: ganapathi bhat

Updated on:Nov 29, 2021 | 6:54 PM

KS Eshwarappa: ನಾಲ್ಕು ಬಾರಿಯೂ ಅವನ್ಯಾವನ್ನೋ ಕರೆದುಕೊಂಡು ಬಾ. ಅವನಿಗೆ ದುಡ್ಡು ಕೊಡು ಹೀಗೆ ಇದೇ ಆಯ್ತು ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ಧಾರೆ. ಭಾಷಣದ ನಡುವೆ ಕೆ.ಎಸ್. ಈಶ್ವರಪ್ಪ ಆಪರೇಷನ್ ಕಮಲಕ್ಕೆ ದುಡ್ಡು ಕೊಡಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಆಪರೇಷನ್​ ಕಮಲಕ್ಕೆ ದುಡ್ಡುಕೊಡಬೇಕು ಎಂದ ಕೆಎಸ್ ಈಶ್ವರಪ್ಪ; ಭಾಷಣದ ವೇಳೆ ಪರೋಕ್ಷ ಹೇಳಿಕೆ
ಸಚಿವ ಕೆ.ಎಸ್.ಈಶ್ವರಪ್ಪ (ಸಂಗ್ರಹ ಚಿತ್ರ)

ಕೊಪ್ಪಳ: ಕರ್ನಾಟಕ ರಾಜ್ಯದಲ್ಲಿ 4 ಬಾರಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಆದ್ರೆ ನಮ್ಮ ಗ್ರಹಚಾರ ಸರಿ ಇಲ್ಲ, ಪೂರ್ಣ ಬಹುಮತ ಸಿಗಲಿಲ್ಲ. ನಾಲ್ಕು ಬಾರಿಯೂ ನಮಗೆ ಪೂರ್ಣ ಬಹುಮತ ಸಿಗಲೇ ಇಲ್ಲ. ಜನ ಆಡಳಿತ ಮಾಡಿ ಅಂತಾರೆ, ಆದ್ರೆ ಒಂದು ಸ್ಥಾನ ಕಡಿಮೆ, ನಾಲ್ಕು ಸ್ಥಾನ ಕಡಿಮೆ ಬರುತ್ತೆ, 4 ಬಾರಿಯೂ ಹಾಗೇ ಆಯ್ತು. ನಾಲ್ಕು ಬಾರಿಯೂ ಅವನ್ಯಾವನ್ನೋ ಕರೆದುಕೊಂಡು ಬಾ. ಅವನಿಗೆ ದುಡ್ಡು ಕೊಡು ಹೀಗೆ ಇದೇ ಆಯ್ತು ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ಧಾರೆ. ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಭಾಷಣದ ನಡುವೆ ಕೆ.ಎಸ್. ಈಶ್ವರಪ್ಪ ಆಪರೇಷನ್ ಕಮಲಕ್ಕೆ ದುಡ್ಡು ಕೊಡಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಪರಿಷತ್ ಚುನಾವಣೆಯಲ್ಲಿ ಭಾರಿ ದುಡ್ಡಿನ ವ್ಯವಹಾರ ಆಗುತ್ತೆ. ಪರಿಷತ್​ ಚುನಾವಣೆಯಲ್ಲಿ ನಡೆದಷ್ಟು ಬೇರೆ ಚುನಾವಣೆಯಲ್ಲೂ ಎಲ್ಲೂ ನಡೆಯಲ್ಲ. ಮುಕ್ಕಾಲು ಪಾಲು ಚುನಾವಣೆಯಲ್ಲಿ ದುಡ್ಡಿನದೇ ವ್ಯವಹಾರ. ನಿಮಗೆ ದುಡ್ಡು ಕೊಟ್ರೆ ತಗೋರಿ, ನಮ್ಮ ಹಣ ನಮಗೆ ಕೊಡ್ತಾರೆ. ಆದರೆ ಮತ ಹಾಕೋದು ನಿಮಗೆ ಬಿಟ್ಟಿದ್ದು ಎಂದು ಕಾರಟಗಿಯಲ್ಲಿ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಪರಿಷತ್ ಚುನಾವಣೆ ದಿಕ್ಸೂಚಿ ಅಂದ್ರೆ ಒಪ್ಪಲು ತಯಾರಿದ್ದೀವಿ. ಮುಂದಿನ ಚುನಾವಣೆಗೆ ಇದು ದಿಕ್ಸೂಚಿ ಅಂದರೆ ಒಪ್ಪಬಹುದು. ಈ ಬಾರಿ ನಮ್ಮದೇ ಮೆಜಾರಿಟಿಯಿದೆ. ಶಾಸಕರು, ಸಂಸದರು, ಗ್ರಾ.ಪಂ. ಸದಸ್ಯರು ನಮ್ಮವರೇ ಇದ್ದಾರೆ. ಹಾಗಾಗಿ ಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್​ ಪಕ್ಷವನ್ನು ವಿರೋಧ ಪಕ್ಷವೆಂದು ಕರೆಯಲು ಆಗಲ್ಲ. ಇದೀಗ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷವಾಗಿದೆ ಎಂದು ಈಶ್ವರಪ್ಪ ಟೀಕಿಸಿದ್ದಾರೆ.

ಕಾಂಗ್ರೆಸ್​ ಪಕ್ಷದವರಿಗೆ ರಾಷ್ಟ್ರೀಯವಾದ ಅನ್ನುವುದೇ ಗೊತ್ತಿಲ್ಲ. ಗಾಂಧಿವಾದವನ್ನೇ ರಾಷ್ಟ್ರೀಯವಾದ ಅಂದ್ಕೊಂಡಿದ್ದಾರೆ ಇವರು. ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರನ್ನೇ ಬೈತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 45 ವರ್ಷಗಳಲ್ಲೇ ಅತಿ ಹೆಚ್ಚು ಮಳೆಯಿಂದ ಹಾನಿಯಾಗಿದೆ. ರಾಜ್ಯ ಸರ್ಕಾರ ಎಲ್ಲಾ ಪರಿಹಾರ ಕಾರ್ಯವನ್ನು ಕೈಗೊಂಡಿದೆ ಎಂದು ಕಾರಟಗಿಯಲ್ಲಿ ಈಶ್ವರಪ್ಪ ತಿಳಿಸಿದ್ದಾರೆ.

ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಈಶ್ವರಪ್ಪ ಯು ಟರ್ನ್ ಹೊಡೆದಿದ್ದಾರೆ. ಚುನಾವಣೆವರೆಗೂ ಬೊಮ್ಮಾಯಿರವರೇ ಸಿಎಂ ಆಗಿರುತ್ತಾರೆ. ಮುಂದಿನ ಚುನಾವಣೆಯವರೆಗೂ ಬೊಮ್ಮಾಯಿರವರೇ ಸಿಎಂ. ನಾನು ಬದಲಾಗಬಹುದು ಅಂತಾ ಹೇಳಿದ್ದೇನೆ ಅಷ್ಟೇ ಎಂದು ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಬಿಜೆಪಿ ಪ್ರಚಾರ ಸಭೆ ನಡೆದಿದೆ. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಸಿದೆ. ಆದರೆ, ಕಾರ್ಯಕ್ರಮದಲ್ಲಿ ಸಾವಿರಾರು ಕುರ್ಚಿ ಹಾಕಿದ್ರೂ ಕೇವಲ 30 ಜನ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ. ಶಾಸಕ ಬಸವರಾಜ ದಡೇಸುಗೂರು ಪ್ರತಿನಿಧಿಸುವ ಕ್ಷೇತ್ರ, ಹಾಲಿ ಶಾಸಕರಿರುವ ಕ್ಷೇತ್ರದಲ್ಲೇ ಬಿಜೆಪಿ ಕಾರ್ಯಕ್ರಮದಲ್ಲಿ ಜನರು ಭಾಗಿಯಾಗಿಲ್ಲ.

ಇದನ್ನೂ ಓದಿ: ನಮ್ಮ ನಾಯಕ ಮುರುಗೇಶ್ ನಿರಾಣಿ ಆದಷ್ಟು ಬೇಗ ಸಿಎಂ ಆಗುತ್ತಾರೆ: ಕೆಎಸ್ ಈಶ್ವರಪ್ಪ ಹೇಳಿಕೆ

ಇದನ್ನೂ ಓದಿ: ಸಿಎಂ ಆಗ್ತಾರೆ ಎಂದ ಈಶ್ವರಪ್ಪ ಅಭಿಮಾನಕ್ಕೆ ಋಣಿ: ಸಚಿವ ಮುರುಗೇಶ್ ನಿರಾಣಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada