ಚಿತ್ರದುರ್ಗದಲ್ಲಿ ಮಗನಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆಗೆ ಯತ್ನ! ಮಗು ಸಾವು, ಬದುಕುಳಿದ ತಾಯಿ

ಪತಿ ವಕೀಲ ಲೋಕೇಶ್ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ವಿಷ ಸೇವನೆ ಬಳಿಕ ವನಿತಾ ತವರೂರಾದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮಕ್ಕೆ ಹೊರಟಿದ್ದರು.

ಚಿತ್ರದುರ್ಗದಲ್ಲಿ ಮಗನಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆಗೆ ಯತ್ನ! ಮಗು ಸಾವು, ಬದುಕುಳಿದ ತಾಯಿ
ಮೃತ ಮಗು, ತಾಯಿ ವನಿತಾ

ಚಿತ್ರದುರ್ಗ: ಮಗನಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರು ನಗರದ ಬಸವೇಶ್ವರ ನಗರದಲ್ಲಿ ನಡೆದಿದೆ. ವಿಷ ಸೇವಿಸಿದ ನಾಲ್ಕು ವರ್ಷದ ಮಗು ಚಿತ್ರದುರ್ಗದಲ್ಲಿರುವ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ತಾಯಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿ ಕಿರುಕುಳದಿಂದ ಬೇಸತ್ತು ವನಿತಾ ಎಂಬ ಮಹಿಳೆ ತನ್ನ ನಾಲ್ಕು ವರ್ಷದ ಕಂದಮ್ಮಗೆ ವಿಷವುಣಿಸಿ ತಾನೂ ವಿಷ ಸೇವಿಸಿದ್ದಾರೆ. ಆದರೆ ಮಗು ಮೃತಪಟ್ಟಿದ್ದು, ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪತಿ ವಕೀಲ ಲೋಕೇಶ್ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ವಿಷ ಸೇವನೆ ಬಳಿಕ ವನಿತಾ ತವರೂರಾದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮಕ್ಕೆ ಹೊರಟಿದ್ದರು. ಚಿತ್ರದುರ್ಗಕ್ಕೆ ಬಂದು ಆಸ್ಪತ್ರೆಗೆ ತೆರಳಿದಾಗ ಮಗು ಚಾರ್ವಿತ್(04) ಸಾವನ್ನಪ್ಪಿದೆ. ಸದ್ಯ ಬಸವೇಶ್ವರ ಆಸ್ಪತ್ರೆಯಲ್ಲಿ ತಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಟೈರ್ ಸ್ಫೋಟಗೊಂಡು ಪ್ರಯಾಣಿಕ ಸಾವು ಟೈರ್ ಸ್ಫೋಟಗೊಂಡು ಆಟೋ ಪಲ್ಟಿಯಾಗಿದ್ದು, ಪ್ರಯಾಣಿಕ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಸಂಭವಿಸಿದೆ. ಬೇಡರೆಡ್ಡಿಹಳ್ಳಿಯ ನಾಗರಾಜ್(35) ಮೃತ ದುರ್ದೈವಿ. ಆಟೋದಲ್ಲಿ ಶೇಂಗಾ ಚೀಲ ಸಾಗಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ

Political Analysis: ಉತ್ತರ ಪ್ರದೇಶದಲ್ಲೀಗ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯದ್ದೇ ಮಾತು, ಇದರ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿಗೆ ಸಾಧ್ಯವಾಗುವುದೇ?

ಕಲ್ಪತರು ನಾಡಲ್ಲಿ ಅಚ್ಚರಿ ಘಟನೆ; 3 ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ, ತಿಥಿ ಕಾರ್ಯ ಮುಗಿಸಿ ಸುಮ್ಮನಿಂದ ಕುಟುಂಬಸ್ಥರಲ್ಲಿ ಸಂತೋಷ, ಆತಂಕ

Click on your DTH Provider to Add TV9 Kannada