ಚೆನ್ನೈ: ಮಾಜಿ ವಿದ್ಯಾರ್ಥಿಯೊಬ್ಬರು ನೀಡಿದ ಲೈಂಗಿಕ ಕಿರುಕುಳದ (sexual harassment) ದೂರಿನ ಆಧಾರದ ಮೇಲೆ ತಮಿಳುನಾಡಿನ (Tamilnadu) ಶಾಸ್ತ್ರೀಯ ಕಲೆಗಳ ಪ್ರತಿಷ್ಠಿತ ಸಂಸ್ಥೆಯೊಂದರ ಸಹಾಯಕ ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲಾಕ್ಷೇತ್ರ ಫೌಂಡೇಶನ್‌ನ (Kalakshetra Foundation)ರುಕ್ಮಿಣಿ ದೇವಿ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನಲ್ಲಿ ನೃತ್ಯ ಕಲಿಸುತ್ತಿರುವ ಹರಿ ಪದ್ಮನ್ ಎಂಬವರನ್ನು ನಗರ ಪೊಲೀಸರು ಸೋಮವಾರ ಬೆಳಗ್ಗೆ ಬಂಧಿಸಿದ್ದಾರೆ.ಪ್ರೊಫೆಸರ್‌ನಿಂದ ಲೈಂಗಿಕ ಕಿರುಕುಳಕ್ಕೊಳಗಾಗಿ ಕೆಲವು ವರ್ಷಗಳ ಹಿಂದೆ ಇನ್‌ಸ್ಟಿಟ್ಯೂಟ್‌ನಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಅರ್ಧಕ್ಕೆ ಕೈಬಿಟ್ಟಿದ್ದ ಮಾಜಿ ವಿದ್ಯಾರ್ಥಿನಿ ಪ್ರೊಫೆಸರ್ ದೂರಿನ ಆಧಾರದಲ್ಲಿ ಈ ಬಂಧನ ನಡೆದಿದೆ. ಪ್ರೊಫೆಸರ್, ಒಮ್ಮೆ ನನ್ನಲ್ಲಿ ಲೈಂಗಿಕ ಕ್ರಿಯೆಗಾಗಿ ಬಯಸಿರುವುದಾಗಿ ಹೇಳಿದ್ದರು. ಯಾರಿಗೂ ತಿಳಿಯುವುದಿಲ್ಲ ನೀನು ನನ್ನ ಮನೆಗೆ ಬಾ ಎಂದು ಹೇಳಿದ್ದರು ಎಂದು ವಿದ್ಯಾರ್ಥಿನಿ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ನಾನು No ಎಂದು ಹೇಳಿದ್ದಕ್ಕಾಗಿ ಅವರು ನನ್ನನು ದೂರವಿರಿಸಿದರು.ಅವರು ನನ್ನನ್ನು ನೃತ್ಯದಲ್ಲಿ ಪ್ರಮುಖ ಪಾತ್ರದಿಂದ ದೂರವಿಟ್ಟರು ಎಂದು ವಿದ್ಯಾರ್ಥಿನಿ ದೂರಿದ್ದಾರೆ.
ಕಳೆದ ವಾರ, ತಮಿಳುನಾಡು ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆ ಎಆರ್ ಕುಮಾರಿ ಅವರಿಗೆ ನೀಡಿದ ದೂರಿನಲ್ಲಿ ಸುಮಾರು ತೊಂಬತ್ತು ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ, ಬಾಡಿ ಶೇಮಿಂಗ್ ಮತ್ತು ಬೈಗುಳದ ಆರೋಪ ಹೊರಿಸಿದ್ದು, ಇತರ ಮೂವರು ಕಲಾವಿದರ ವಿರುದ್ಧವೂ ದೂರು ನೀಡಿದ್ದಾರೆ.
ಸಿಬ್ಬಂದಿ ಮತ್ತು ಮೂವರು ರೆಪರ್ಟರಿ ಕಲಾವಿದರು ಮಹಿಳಾ ಮತ್ತು ಪುರುಷ ವಿದ್ಯಾರ್ಥಿನಿಯರ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ನಿಂದನೆ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ದೂರು ನೀಡಿರುವುದಾಗಿ ಎಆರ್ ಕುಮಾರಿ ಹೇಳಿದ್ದಾರೆ.ತಮ್ಮ ದೂರುಗಳಿಗೆ ಆಡಳಿತ ಮಂಡಳಿ ಉದಾಸೀನ ಧೋರಣೆ ತಾಳಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ನಾವು ಅವರಿಂದ ಅಶ್ಲೀಲ ಪಠ್ಯ ಸಂದೇಶಗಳನ್ನು ಪಡೆಯುತ್ತಿದ್ದೆವು. ಅವರು ಕಡಿಮೆ ಅಂಕಗಳನ್ನು ನೀಡಿದರು ಮತ್ತು ನಮಗೆ ಅವಕಾಶಗಳನ್ನು ನಿರಾಕರಿಸಿದರು ಎಂದು ಪದವಿಪೂರ್ವ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Most Popular Global Leader: ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಮೊದಲ ಸ್ಥಾನ
ಸಂಸ್ಥೆಯನ್ನು ನಡೆಸುತ್ತಿರುವ ಕಲಾಕ್ಷೇತ್ರ ಫೌಂಡೇಶನ್ ಈ ಹಿಂದೆ ಆರೋಪಗಳನ್ನು ನಿರಾಕರಿಸಿದ್ದು, ಇದುನ್ನು ಅಪಪ್ರಚಾರ ಅಭಿಯಾನ ಎಂದು ಕರೆದಿತ್ತು.
ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ಗೆ ವಿದ್ಯಾರ್ಥಿಗಳು ಪತ್ರ ಬರೆದು, ನಿರ್ದೇಶಕಿ ರೇವತಿ ರಾಮಚಂದ್ರನ್ ಅವರನ್ನು ವಜಾಗೊಳಿಸುವಂತೆ ಮತ್ತು ಆಂತರಿಕ ದೂರುಗಳ ಸಮಿತಿಯನ್ನು ಪುನರ್ರಚಿಸಬೇಕು ಎಂದು ಕೋರಿದ್ದಾರೆ.
ಯಾವುದೇ ಲಿಖಿತ ದೂರುಗಳು ಇನ್ನೂ ಬಂದಿಲ್ಲ, ಆದರೆ ಕಂದಾಯ ಮತ್ತು ಪೊಲೀಸ್ ಇಲಾಖೆಗಳು ಈ ಬಗ್ಗೆ ತನಿಖೆ ನಡೆಸುತ್ತಿವೆ ಎಂದು ಸ್ಟಾಲಿನ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ವಿಷಯದ ಬಗ್ಗೆ ಮೊದಲು ಕ್ರಮ ಕೈಗೊಳ್ಳಲು ಮತ್ತು ನಂತರ ಅದಕ್ಕೆ ಬ್ರೇಕ್ ಹಾಕಲು ರಾಷ್ಟ್ರೀಯ ಮಹಿಳಾ ಆಯೋಗ ಮುಂದೆ ಬರಬೇಕು ಎಂದು ತಮಿಳುನಾಡು ಸಿಎಂ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ