Most Popular Global Leader: ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಮೊದಲ ಸ್ಥಾನ
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಹಿಂದಿಕ್ಕಿ ಮೋದಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಿಶ್ವದ ಜನಪ್ರಿಯ ನಾಯಕರಾಗಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರು (narendra modi) ಹೊರಹೊಮ್ಮಿದ್ದಾರೆ, ಹೌದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ನಾಯಕರಾಗಿ (Most Popular Global Leader) ಹೊರಹೊಮ್ಮಿದ್ದಾರೆ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಹಿಂದಿಕ್ಕಿ ಮೋದಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಾಗತಿಕ ನಾಯಕರ ಪ್ರಮುಖ ನಿರ್ಧಾರಗಳನ್ನು ಹಾಗೂ ಅವರ ಜನಪ್ರಿಯತೆಯ ಮೂಲಕ ನಿರ್ಧಾರಿಸುವ ಜಾಗತಿಕ ನಿರ್ಧಾರ ಗುಪ್ತಚರ ಸಂಸ್ಥೆಯಾದ ಮಾರ್ನಿಂಗ್ ಕನ್ಸಲ್ಟ್ ಈ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಈ ವಿಚಾರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಅತ್ಯಂತ ಪ್ರೀತಿಸುವ ಮತ್ತು ಮೆಚ್ಚಿದ ನಾಯಕ ಎಂದು ಹೇಳಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಪ್ರಕಾರ, ಪ್ರಧಾನಿ ಮೋದಿ ಅವರು ಶೇಕಡಾ 76ರ ಅನುಮೋದನೆ ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಎರಡನೇ ಸ್ಥಾನವನ್ನು ಗಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಪ್ರೀತಿಪಾತ್ರ, ಮೆಚ್ಚುಗೆ ಮತ್ತು ವಿಶ್ವಾಸಾರ್ಹ ಜಾಗತಿಕ ನಾಯಕರಾಗಿ ಉಳಿದಿದ್ದಾರೆ ಎಂದು ಗೋಯಲ್ ತಮ್ಮ ಟ್ವೀಟ್‌ನಲ್ಲಿ ಸಮೀಕ್ಷೆಯನ್ನು ಹಂಚಿಕೊಂಡಿದ್ದಾರೆ. ಮಾರ್ನಿಂಗ್ ಕನ್ಸಲ್ಟ್, ಇದೇ ವೇಳೆ, ಮಾರ್ಚ್ 22-28 ರವರೆಗೆ ಸಂಗ್ರಹಿಸಿದ ಡೇಟಾವನ್ನು ಆಧರಿಸಿ ಸಮೀಕ್ಷೆಯನ್ನು ಮಾಡಲಾಗಿದೆ ಎಂದು ಹೇಳಿದರು. ಈ ರೇಟಿಂಗ್‌ಗಳು ಪ್ರತಿ ದೇಶದ ವಯಸ್ಕ ನಿವಾಸಿಗಳ ಹೆಚ್ಚು ಮೆಚ್ಚಿಕೊಂಡ ಹಾಗೂ ಹೆಚ್ಚು ಸರ್ಚ್ ಮಾಡಿದ ಆಧಾರದ ಮೇಲೆ ಈ ಸಮೀಕ್ಷೆ ಆಧಾರಸಿದೆ ಎಂದು ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
22 ನಾಯಕರ ಪಟ್ಟಿಯಲ್ಲಿ ಕೊನೆಯ ಸಾಲಿನಲ್ಲಿ ನಿಲ್ಲುವವರು ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್-ಯೋಲ್, ಅವರು ಶೇಕಡಾ 19ರ ಅನುಮೋದನೆಯನ್ನು ಹೊಂದಿದ್ದಾರೆ. ಸಮೀಕ್ಷೆಗಳು ಪ್ರತಿ ದೇಶದಲ್ಲಿ ವಯಸ್ಸು, ಲಿಂಗ, ಪ್ರದೇಶ ಮತ್ತು ಕೆಲವು ದೇಶಗಳಲ್ಲಿ, ಅಧಿಕೃತ ಸರ್ಕಾರಿ ಮೂಲಗಳ ಆಧಾರದ ಮೇಲೆ ಶಿಕ್ಷಣದ ವ್ಯವಸ್ಥೆಯ ಮೂಲಕ ಈ ಸಮೀಕ್ಷೆಗೆ ಪ್ರತಿಕ್ರಿಯಿಸಲಾಗುವುದು ಮತ್ತು ತಮ್ಮ ದೇಶಗಳಿಗೆ ಸೂಕ್ತವಾದ ಭಾಷೆಗಳಲ್ಲಿ ಈ ಸಮೀಕ್ಷೆಗಳನ್ನು ಪೂರ್ಣಗೊಳಿಸುತ್ತಾರೆ ಎಂದು ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ:PM Modi: ನರೇಂದ್ರ ಮೋದಿಯವರ ಒಪ್ಪಿಗೆ ಸೂಚ್ಯಂಕ ಶೇ 66, ವಿಶ್ವ ನಾಯಕರಲ್ಲಿ ಪ್ರಧಾನಿಗೆ ಅಗ್ರಸ್ಥಾನ
ಯುಎಸ್ ಅಧ್ಯಕ್ಷ ಜೋ ಬಿಡೆನ್ ಈ ವರ್ಷ ಎಂಟನೇ ಶ್ರೇಯಾಂಕ ಹೊಂದಿದ್ದಾರೆ. 22 ದೇಶಗಳ ಪೈಕಿ, ಜೆಕ್ ಗಣರಾಜ್ಯದ ಪ್ರಧಾನಿ ಪೆಟ್ರ್ ಫಿಯಾಲಾ, ಫ್ರಾನ್ಸ್‌ನ ಎಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸಿಯೋಕ್-ಯುಲ್ ಕೊನೆಯ ಮೂರರಲ್ಲಿ ಸ್ಥಾನ ಪಡೆದಿದ್ದಾರೆ.
Published On - 1:28 pm, Mon, 3 April 23