Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi: ನರೇಂದ್ರ ಮೋದಿಯವರ ಒಪ್ಪಿಗೆ ಸೂಚ್ಯಂಕ ಶೇ 66, ವಿಶ್ವ ನಾಯಕರಲ್ಲಿ ಪ್ರಧಾನಿಗೆ ಅಗ್ರಸ್ಥಾನ

Global Leader Approval: 13 ದೇಶಗಳ ಚುನಾಯಿತ ನಾಯಕರ ರಾಷ್ಟ್ರೀಯ ರೇಟಿಂಗ್‌ಗಳನ್ನು ಪತ್ತೆಹಚ್ಚುವ ಮಾರ್ನಿಂಗ್‌ ಕನ್ಸಲ್ಟ್, ಕಳೆದ ವರ್ಷದಲ್ಲಿ ಮೋದಿಯವರನ್ನು ಅನುಮೋದಿಸುವ ಭಾರತೀಯರ ಅನುಪಾತದಲ್ಲಿ 20-ಪಾಯಿಂಟ್ ಇಳಿಕೆ ತೋರಿಸುತ್ತದೆ. ಜೂನ್ ಆರಂಭದಲ್ಲಿ ಶೇ 66 ರಷ್ಟಿದ್ದರೂ, ಉಳಿದವರಿಗಿಂತ ಮೋದಿ ಮುಂದೆ ಇದ್ದಾರೆ ಎಂದು ಸಂಸ್ಥೆ ಟ್ವೀಟ್ ಮಾಡಿದೆ.

PM Modi: ನರೇಂದ್ರ ಮೋದಿಯವರ ಒಪ್ಪಿಗೆ ಸೂಚ್ಯಂಕ ಶೇ 66, ವಿಶ್ವ ನಾಯಕರಲ್ಲಿ ಪ್ರಧಾನಿಗೆ ಅಗ್ರಸ್ಥಾನ
ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 18, 2021 | 12:32 PM

ದೆಹಲಿ: ಅಮೆರಿಕದ ದತ್ತಾಂಶ ಗುಪ್ತಚರ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರ ಒಪ್ಪಿಗೆ ಸೂಚ್ಯಂಕ (approval rating) ಶೇಕಡಾ 66 ರಷ್ಟಿದೆ. ಇತರ ಜಾಗತಿಕ ಮುಖಂಡರಿಗಿಂತ ದೇಶದ ಪ್ರಧಾನಿ ಮುಂದೆ ಇದ್ದಾರೆ. ಅಮೆರಿಕ, ಬ್ರಿಟನ್, ರಷ್ಯಾ, ಆಸ್ಟ್ರೇಲಿಯಾ, ಕೆನಡಾ, ಬ್ರೆಜಿಲ್, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ 13 ದೇಶಗಳ ಇತರ ವಿಶ್ವ ನಾಯಕರಲ್ಲಿ ಪ್ರಧಾನಿ ಮೋದಿ ಮುಂದಿದ್ದಾರೆ ಎಂದು ಮಾರ್ನಿಂಗ್ ಕನ್ಸಲ್ಟ್ ಹೇಳಿದೆ. 13 ದೇಶಗಳ ಚುನಾಯಿತ ನಾಯಕರ ರಾಷ್ಟ್ರೀಯ ರೇಟಿಂಗ್‌ಗಳನ್ನು ಪತ್ತೆಹಚ್ಚುವ ಮಾರ್ನಿಂಗ್‌ ಕನ್ಸಲ್ಟ್, ಕಳೆದ ವರ್ಷದಲ್ಲಿ ಮೋದಿಯವರನ್ನು ಅನುಮೋದಿಸುವ ಭಾರತೀಯರ ಅನುಪಾತದಲ್ಲಿ 20-ಪಾಯಿಂಟ್ ಇಳಿಕೆ ತೋರಿಸುತ್ತದೆ. ಜೂನ್ ಆರಂಭದಲ್ಲಿ ಶೇ 66 ರಷ್ಟಿದ್ದರೂ, ಉಳಿದವರಿಗಿಂತ ಮೋದಿ ಮುಂದೆ ಇದ್ದಾರೆ ಎಂದು ಸಂಸ್ಥೆ ಟ್ವೀಟ್ ಮಾಡಿದೆ.

ಮಾರ್ನಿಂಗ್ ಕನ್ಸಲ್ಟ್ ಗ್ಲೋಬಲ್ ಲೀಡರ್ ಒಪ್ಪಿಗೆ ಸೂಚ್ಯಂಕ ಟ್ರ್ಯಾಕರ್ ಗುರುವಾರ ಈ ಅಪ್ ಡೇಟ್ ನೀಡಿದ್ದು ಭಾರತದಲ್ಲಿ 2,126 ವಯಸ್ಕರನ್ನು ಸಮೀಕ್ಷೆಯಲ್ಲಿ ಬಳಸಲಾಗಿತ್ತು. ಆ ಪೈಕಿ ಪ್ರಧಾನಿ ಮೋದಿಯವರ ಪರವಾಗಿ ಶೇಕಡಾ 66 ರಷ್ಟು ಮಂದಿ ಇದ್ದರೆ ಸಮೀಕ್ಷೆ ನಡೆಸಿದವರಲ್ಲಿ 28 ಪ್ರತಿಶತದಷ್ಟು ಜನರು ಅವರನ್ನು ನಿರಾಕರಿಸಿದ್ದಾರೆ ಎಂದಿದೆ.

ತನ್ನ ರಾಜಕೀಯ ಗುಪ್ತಚರ ಘಟಕದ ಮೂಲಕ ದತ್ತಾಂಶವನ್ನು ಸಂಗ್ರಹಿಸುವ ಮಾರ್ನಿಂಗ್ ಕನ್ಸಲ್ಟ್, ಆಗಸ್ಟ್ 2019 ರಲ್ಲಿ ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ರದ್ದುಪಡಿಸಿದಾಗ ಅವರ ಒಪ್ಪಿಗೆ ಸೂಚ್ಯಂಕ ಶೇಕಡಾ 82 ರಷ್ಟಿದ್ದರೆ, ಅಸಮ್ಮತಿ ಸೂಚ್ಯಂಕ ಕೇವಲ 11 ಪ್ರತಿಶತದಷ್ಟಿತ್ತು.

ಮಾರ್ನಿಂಗ್ ಕನ್ಸಲ್ಟ್ ಪ್ರಕಾರ ಎರಡನೇ ಸ್ಥಾನ ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ  (65%) ಅವರಿಗಿದ್ದು, ಇನ್ನುಳಿದ ಸ್ಥಾನಗಳು ಹೀಗಿವೆ: ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (63%), ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ (54%), ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ( 53%), ಯುಎಸ್ ಅಧ್ಯಕ್ಷ ಜೋ ಬೈಡನ್ (53%), ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (48%), ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (44%), ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ (37%), ಸ್ಪ್ಯಾನಿಷ್ ಸ್ಪೇನ್ ಪೆಡ್ರೊ ಸ್ಯಾಂಚೆಸ್ ( 36%), ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ (35%), ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ (35%) ಮತ್ತು ಜಪಾನಿನ ಪ್ರಧಾನಿ ಯೋಶಿಹೈಡ್ ಸುಗಾ (29%).

ವಯಸ್ಕರ ರಾಷ್ಟ್ರೀಯ ಪ್ರತಿನಿಧಿ ಮಾದರಿಗಳ ನಡುವೆ ಎಲ್ಲಾ ಸಂದರ್ಶನಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. (ಭಾರತದಲ್ಲಿ, ಮಾದರಿಯು ಸಾಕ್ಷರ ಜನಸಂಖ್ಯೆಯ ಪ್ರತಿನಿಧಿಯಾಗಿದೆ)” ಎಂದು ಮಾರ್ನಿಂಗ್ ಕನ್ಸಲ್ಟ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಸರ್ಕಾರಿ ಅಧಿಕೃತ ಮೂಲಗಳ ಆಧಾರದ ಮೇಲೆ ಕೆಲವು ದೇಶಗಳಲ್ಲಿ ವಯಸ್ಸು, ಲಿಂಗ, ಪ್ರದೇಶ ಮತ್ತು ಶಿಕ್ಷಣದ ಕುಸಿತಗಳ ಪ್ರಕಾರ ಸಮೀಕ್ಷೆಗಳನ್ನು ಪ್ರತಿ ದೇಶದಲ್ಲಿ ಅಳೆಯಲಾಗುತ್ತದೆ ಎಂದು ಮಾರ್ನಿಂಗ್ ಕನ್ಸಲ್ಟ್ ಹೇಳಿದೆ. “ಅಮೆರಿಕದಲ್ಲಿ ಸಮೀಕ್ಷೆಗಳು ಜನಾಂಗ ಮತ್ತು ಜನಾಂಗೀಯತೆಯಿಂದ ಕೂಡ ಅಳೆಯಲ್ಪಡುತ್ತದೆ. ಸಮೀಕ್ಷೆಗೆ ಪ್ರತಿಕ್ರಿಯಿಸುವವರು ತಮ್ಮ ದೇಶಗಳಿಗೆ ಸೂಕ್ತವಾದ ಭಾಷೆಗಳಲ್ಲಿ ಈ ಸಮೀಕ್ಷೆಗಳನ್ನು ಪೂರ್ಣಗೊಳಿಸುತ್ತಾರೆ” ಎಂದು ಅದು ಹೇಳಿದೆ.

ಇದನ್ನೂ ಓದಿ:  PM Narendra Modi ಕೊವಿಡ್-19 ಮುಂಚೂಣಿ ಕಾರ್ಯಕರ್ತರ ಸಮಗ್ರ ತರಬೇತಿ ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಚಾಲನೆ

(The Morning Consult show PM Narendra Modi’s approval ratings stand at 66 per cent continue to be ahead of other global heads)

ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ