ಮಹಾರಾಷ್ಟ್ರದಲ್ಲಿರುವ ದಾವೂದ್ ಇಬ್ರಾಹಿಂ ಬಾಲ್ಯದ ಮನೆ ಶುಕ್ರವಾರ ಹರಾಜು

|

Updated on: Jan 02, 2024 | 1:04 PM

Dawood Ibrahim: ಜನವರಿ 5 ರಂದು ಮುಂಬೈನಲ್ಲಿ ಹರಾಜು ನಡೆಯಲಿದೆ. ₹ 4.53 ಕೋಟಿಗೆ ಮಾರಾಟವಾದ ರೆಸ್ಟೋರೆಂಟ್, ₹ 3.53 ಕೋಟಿಗೆ ಆರು ಫ್ಲಾಟ್‌ಗಳು ಮತ್ತು ₹ 3.52 ಕೋಟಿಗೆ ಮಾರಾಟವಾದ ಅತಿಥಿ ಗೃಹ ಸೇರಿದಂತೆ ಕಳೆದ ಒಂಬತ್ತು ವರ್ಷಗಳಲ್ಲಿ ದಾವೂದ್ ಅಥವಾ ಆತನ ಕುಟುಂಬಕ್ಕೆ ಸೇರಿದ 11 ಆಸ್ತಿಗಳನ್ನು ಹರಾಜು ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿರುವ ದಾವೂದ್ ಇಬ್ರಾಹಿಂ ಬಾಲ್ಯದ ಮನೆ ಶುಕ್ರವಾರ ಹರಾಜು
ದಾವೂದ್ ಇಬ್ರಾಹಿಂ
Follow us on

ದೆಹಲಿ ಜನವರಿ 02: ಮಹಾರಾಷ್ಟ್ರದ (Maharashtra) ರತ್ನಗಿರಿಯಲ್ಲಿ ಭಯೋತ್ಪಾದಕ ದಾವೂದ್ ಇಬ್ರಾಹಿಂನ (Dawood Ibrahim) ಬಾಲ್ಯದ ಮನೆ ಮತ್ತು ಆತನ ಕುಟುಂಬದ ಒಡೆತನದ ಇತರ ಮೂರು ಆಸ್ತಿಗಳನ್ನು ಶುಕ್ರವಾರ ಹರಾಜು(Auction) ಮಾಡಲಾಗುತ್ತದೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ ಎಲ್ಲಾ ನಾಲ್ಕು ಜಮೀನು ಕೃಷಿಭೂಮಿ ಆಗಿದ್ದು ಇದು ಮುಂಬಾಕೆ ಗ್ರಾಮದಲ್ಲಿದೆ. ಸ್ಮಗ್ಲರ್ಸ್ ಮತ್ತು ಫಾರಿನ್ ಎಕ್ಸ್ಚೇಂಜ್ ಮ್ಯಾನಿಪ್ಯುಲೇಟರ್ಸ್ (ಆಸ್ತಿ ಮುಟ್ಟುಗೋಲು) ಕಾಯಿದೆ (SAFEMA) ಅಡಿಯಲ್ಲಿ ಅಧಿಕಾರಿಗಳು ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಜನವರಿ 5 ರಂದು ಮುಂಬೈನಲ್ಲಿ ಹರಾಜು ನಡೆಯಲಿದೆ. ₹ 4.53 ಕೋಟಿಗೆ ಮಾರಾಟವಾದ ರೆಸ್ಟೋರೆಂಟ್, ₹ 3.53 ಕೋಟಿಗೆ ಆರು ಫ್ಲಾಟ್‌ಗಳು ಮತ್ತು ₹ 3.52 ಕೋಟಿಗೆ ಮಾರಾಟವಾದ ಅತಿಥಿ ಗೃಹ ಸೇರಿದಂತೆ ಕಳೆದ ಒಂಬತ್ತು ವರ್ಷಗಳಲ್ಲಿ ದಾವೂದ್ ಅಥವಾ ಆತನ ಕುಟುಂಬಕ್ಕೆ ಸೇರಿದ 11 ಆಸ್ತಿಗಳನ್ನು ಹರಾಜು ಮಾಡಲಾಗಿದೆ.

1993 ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ 1983 ರಲ್ಲಿ ಮುಂಬೈಗೆ ತೆರಳುವ ಮೊದಲು ಮುಂಬಾಕೆ ಗ್ರಾಮದಲ್ಲಿ ವಾಸಿಸುತ್ತಿದ್ದನು. 257 ಜನರ ಸಾವಿಗೆ ಕಾರಣವಾದ ಸರಣಿ ಬಾಂಬ್ ಸ್ಫೋಟದ ನಂತರ ದಾವೂದ್ ಭಾರತ ತೊರೆದಿದ್ದ.
ಮಾರ್ಚ್ 12, 1993 ರಂದು ಮುಂಬೈ (ಆಗಿನ ಬಾಂಬೆ) ಸರಣಿ ಬಾಂಬ್ ಸ್ಫೋಟದಲ್ಲಿ 257 ಜನರು ಸಾವಿಗೀಡಾಗಿದ್ದು, 700 ಕ್ಕೂ ಹೆಚ್ಚು ಜನರಿಗೆ ಗಾಯವಾಗಿತ್ತು. ಈ ಬಾಂಬ್ ಸ್ಫೋಟದಿಂದ ಅಂದಾಜು ₹ 27 ಕೋಟಿ ಮೌಲ್ಯದ ಆಸ್ತಿಯನ್ನು ನಾಶವಾಗಿತ್ತು ಮಹಾರಾಷ್ಟ್ರ ಸರ್ಕಾರದ ಕೋರಿಕೆಯ ಮೇರೆಗೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಯಿತು.

ಜೂನ್ 16, 2017 ರಂದು ಮುಸ್ತಫಾ ದೊಸ್ಸಾ ಮತ್ತು ಅಬು ಸಲೇಂ ಸೇರಿದಂತೆ ಹಲವಾರು ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಲಾಯಿತು. ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ದಾಳಿಗಳನ್ನು ಯೋಜಿಸಿದ್ದನು.

ಇದನ್ನೂ ಓದಿ: ಮಣಿಪುರದಲ್ಲಿ ಉಗ್ರರ ದಾಳಿ: ನಾಲ್ವರು ಪೊಲೀಸ್​​​ ಕಮಾಂಡೋಗಳು, ಬಿಎಸ್‌ಎಫ್ ಯೋಧರಿಗೆ ಗಾಯ

ಈಗ ಹರಾಜಾಗಲಿರುವ ನಾಲ್ಕು ಆಸ್ತಿಗಳ ಒಟ್ಟು ಮೀಸಲು ಬೆಲೆ 19.2 ಲಕ್ಷ ರೂ. ಮೊದಲ ಆಸ್ತಿಯು 10,420.5 ಚದರ ಮೀ (9.4 ಲಕ್ಷ ರೂ ಮೀಸಲು ಬೆಲೆಯೊಂದಿಗೆ), ಎರಡನೇ ಆಸ್ತಿಯು 8,953 ಚದರ ಮೀಟರ್ (ಮೀಸಲು ಬೆಲೆ ರೂ 8 ಲಕ್ಷ), ಮೂರನೇ ಆಸ್ತಿಯು ಸರಿಸುಮಾರು 171 ಚದರ ಮೀಟರ್ ವಿಸ್ತೀರ್ಣ (ಮೀಸಲು ಬೆಲೆ ರೂ 15,440)ಮತ್ತು ನಾಲ್ಕನೇ ಆಸ್ತಿ 1,730 ಚ.ಮೀ (ಮೀಸಲು ಬೆಲೆ ರೂ 1.5 ಲಕ್ಷ) ವಿಸ್ತೀರ್ಣ ಹೊಂದಿದೆ. ಹರಾಜನ್ನು ಏಕಕಾಲದಲ್ಲಿ ಇ-ಹರಾಜು, ಸಾರ್ವಜನಿಕ ಹರಾಜು ಮತ್ತು ಮುಚ್ಚಿದ ಲಕೋಟೆಯ ಟೆಂಡರ್ ಮೂರು ವಿಧಾನಗಳ ಮೂಲಕ ನಡೆಸಲಾಗುತ್ತದೆ.

ಅಧಿಕಾರಿಗಳು ಹಲವು ವರ್ಷಗಳ ಹಿಂದೆ ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಸಫೇಮಾ ಪ್ರಕಾರ, ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸುವುದು ಬಿಡ್ ಹೊಂದಿದವರ ಜವಾಬ್ದಾರಿಯಾಗಿದೆ. ಹರಾಜಿನಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಹರಾಜಿನ ಪ್ರತಿಯೊಂದು ವಿಧಾನಕ್ಕೂ ಹಣದ ಠೇವಣಿ ಸಲ್ಲಿಸಬೇಕು, ಭಾಗವಹಿಸುವಿಕೆಯ ನಮೂನೆಯನ್ನು ಸಲ್ಲಿಸುವ ಗಡುವು ಬುಧವಾರವಾಗಿರುತ್ತದೆ. ಎರಡು ವಾರಗಳ ಹಿಂದೆಯಷ್ಟೇ ದಾವೂದ್‌ಗೆ ಪಾಕಿಸ್ತಾನದಲ್ಲಿ ವಿಷಪ್ರಾಶನವಾಗಿದೆ ಎಂಬ ವರದಿಗಳು ಬಂದಿದ್ದವು. ಆದರೆ, ಅವರ ಆಪ್ತ ಸಹಾಯಕ ಛೋಟಾ ಶಕೀಲ್ ಈ ವರದಿಗಳನ್ನು ತಳ್ಳಿಹಾಕಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ