ಹರಾಜಾಗಲಿದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ರತ್ನಗಿರಿಯಲ್ಲಿನ ಆಸ್ತಿ
ದಾವೂದ್ ಇಬ್ರಾಹಿಂ ಹೆಸರಿನ ಭೂಮಿಯನ್ನು ಮುಂದಿನ ತಿಂಗಳು ಅಂದರೆ ಜನವರಿ 5, 2024 ರಂದು ಹರಾಜು ಮಾಡಲಾಗುತ್ತದೆ. ರತ್ನಗಿರಿ ಮುಂಬೈನಲ್ಲಿರುವ ದಾವೂದ್ ಇಬ್ರಾಹಿಂನ ನಾಲ್ಕು ಪ್ಲಾಟ್‌ಗಳು ಹರಾಜಾಗಲಿವೆ. ದಾವೂದ್ ಇಬ್ರಾಹಿಂ ಹೆಸರಿನಲ್ಲಿ ನಾಲ್ಕು ಕೃಷಿ ಭೂಮಿ ಇದ್ದು, 20ಕ್ಕೂ ಹೆಚ್ಚು ಜಮೀನು ಹರಾಜಾಗಲಿದೆ
ರತ್ನಗಿರಿ ಡಿಸೆಂಬರ್ 22: ಕುಖ್ಯಾತ ಕ್ರಿಮಿನಲ್ ಮತ್ತು ಮುಂಬೈ (Mumbai) ಸ್ಫೋಟದ ಪ್ರಮುಖ ಆರೋಪಿ, ಭೂಗತ ಪಾತಕಿ ಡಾನ್, ದಾವೂದ್ ಇಬ್ರಾಹಿಂ(Dawood Ibrahim) ಪಾಕಿಸ್ತಾನದ (Pakistan)ಕರಾಚಿಯಲ್ಲಿ ವಿಷ ಪ್ರಾಶನದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸಂಚಲನ ಮೂಡಿಸಿತ್ತು. ಅಲ್ಲದೆ, ಆತನ ಸ್ಥಿತಿ ಗಂಭೀರವಾಗಿದ್ದು, ಕೊನೆಯ ಗಳಿಗೆ ಎಣಿಸುತ್ತಿದ್ದಾರೆ ಎಂಬ ವರದಿಗಳು ಹೊರಬಂದವು. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ದಾವೂದ್ ನ ಆಪ್ತ ಸಹೋದ್ಯೋಗಿ ಚೋಟಾ ಶಕೀಲ್ ಹೇಳಿದ್ದಾನೆ. ಮುಂಬೈ ಪೊಲೀಸರು ಕೂಡ ಈ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಮೂಲತಃ ಭಾರತದಲ್ಲಿ ಜನಿಸಿದ ದಾವೂದ್ ದಶಕಗಳಿಂದ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ. ಆತ ಭಾರತದಲ್ಲಿ ಅನೇಕ ಆಸ್ತಿಗಳನ್ನು ಹೊಂದಿದ್ದು ಈಗ ಅವರ ಮಾಲೀಕತ್ವದ ಭೂಮಿಯನ್ನು ಹರಾಜು ಮಾಡಲು ಹೊರಟಿದ್ದಾನೆ.
ರತ್ನಗಿರಿಯಲ್ಲಿನ ಜಮೀನು ಹರಾಜು?
ದಾವೂದ್ ಇಬ್ರಾಹಿಂ ಹೆಸರಿನ ಭೂಮಿಯನ್ನು ಮುಂದಿನ ತಿಂಗಳು ಅಂದರೆ ಜನವರಿ 5, 2024 ರಂದು ಹರಾಜು ಮಾಡಲಾಗುತ್ತದೆ. ರತ್ನಗಿರಿ ಮುಂಬೈನಲ್ಲಿರುವ ದಾವೂದ್ ಇಬ್ರಾಹಿಂನ ನಾಲ್ಕು ಪ್ಲಾಟ್‌ಗಳು ಹರಾಜಾಗಲಿವೆ. ದಾವೂದ್ ಇಬ್ರಾಹಿಂ ಹೆಸರಿನಲ್ಲಿ ನಾಲ್ಕು ಕೃಷಿ ಭೂಮಿ ಇದ್ದು, 20ಕ್ಕೂ ಹೆಚ್ಚು ಜಮೀನು ಹರಾಜಾಗಲಿದೆ. ಆ ನಾಲ್ಕು ಜಮೀನುಗಳ ಪೈಕಿ ಒಂದು ಜಮೀನಿನ ಬೆಲೆ 9 ಲಕ್ಷದ 41 ಸಾವಿರದ 280 ರೂ. ಎರಡನೇ ಕೃಷಿ ಭೂಮಿಗೆ ಅಂದಾಜು 8 ಲಕ್ಷ 8 ಸಾವಿರದ 770 ರೂ.
ಮುಂಬೈ ಪ್ರದೇಶದಲ್ಲಿ ದಾವೂದ್ ಇಬ್ರಾಹಿಂನ ನಾಲ್ಕು ಸ್ಥಳಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ. ನವೆಂಬರ್ 21, 2023 ರಂದು, ಈ ಹರಾಜಿಗೆ ಸಂಬಂಧಿಸಿದಂತೆ ಸರ್ಕಾರದಿಂದ ನೋಟೀಸ್ ನೀಡಲಾಯಿತು. ಈಗ ಜಾಗಗಳ ಹರಾಜು ಜನವರಿ 5 ರಂದು ನಡೆಯಲಿದೆ.
ವಿಷಪ್ರಾಶನದ ಸುದ್ದಿ ಉಂಟು ಮಾಡಿದ ಸಂಚಲನ
ಕೆಲವು ದಿನಗಳ ಹಿಂದೆ, ಮುಂಬೈ ಬಾಂಬ್ ಸ್ಫೋಟದ ಆರೋಪಿ ಮತ್ತು ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ಪ್ರಾರಂಭವಾಯಿತು. ದಾವೂದ್ ವಿಷ ಪ್ರಾಶನವಾಗಿ ಕರಾಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಆದರೆ ದಾವೂದ್ ಬಗ್ಗೆ ಯಾವುದೇ ಸುದ್ದಿ ಹೊರ ಬೀಳುತ್ತಿಲ್ಲ. ದಾವೂದ್‌ನ ಆರೋಗ್ಯ ಚಿಂತಾಜನಕವಾಗಿದೆ ಎಂದು ಪಾಕಿಸ್ತಾನಿ ಪತ್ರಕರ್ತ ಅರ್ಜು ಖಾಸ್ಮಿ ತಿಳಿಸಿದ್ದಾರೆ. ಅಂದಿನಿಂದ ಜಗತ್ತಿನಾದ್ಯಂತ ಇದೇ ವಿಚಾರ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: ದಾವೂದ್ ಇಬ್ರಾಹಿಂ ಸಾವಿನ ಕುರಿತು ಪಾಕ್ ಪ್ರಧಾನಿ ‘ಟ್ವೀಟ್’ ಫೇಕ್!
ಏತನ್ಮಧ್ಯೆ, ದಾವೂದ್‌ನ ಅನಾರೋಗ್ಯದ ಬಗ್ಗೆ ಎಲ್ಲಾ ಮಾತುಗಳನ್ನು ತಳ್ಳಿಹಾಕಿದ ಛೋಟಾ ಶಕೀಲ್ ‘ಭಾಯ್ (ದಾವೂದ್) 1000 ಪರ್ಸೆಂಟ್ ಫಿಟ್ ಆಗಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ. ದಾವೂದ್‌ನ ಆರೋಗ್ಯದ ಕುರಿತ ಎಲ್ಲಾ ಚರ್ಚೆಗಳು ಮತ್ತು ವರದಿಗಳು ಆಧಾರರಹಿತವಾಗಿವೆ ಎಂದು ಶಕೀಲ್ ಪುನರುಚ್ಚರಿಸಿದ್ದಾರೆ. . ದಾವೂದ್ ವಿಷ ಸೇವಿಸಿಲ್ಲ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ. ಅವರು 1000 ಪ್ರತಿಶತ ದಪ್ಪ ಮತ್ತು ಫಿಟ್ ಆಗಿದ್ದಾರೆ. ಅವರ ಕುರಿತಾದ ಸುದ್ದಿ ನಿರಾಧಾರ ಎಂದು ಚೋಟಾ ಶಕೀಲ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ