AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಟಕ್ಕೆ ದಾಸನಾದ ಪೋಸ್ಟ್ ಮಾಸ್ಟರ್ ಅಂಚೆ ಗ್ರಾಹಕರ 2 ಕೋಟಿ ರೂಪಾಯಿಗೆ ಪಂಗನಾಮ ಇಟ್ಟ!

ಆರೋಪಿ ರಾಮಕೃಷ್ಣ ಇತ್ತೀಚೆಗೆ ರಜೆಯಲ್ಲಿದ್ದ. ಆಗ ಮತ್ತೊಬ್ಬ ಸಬ್ ಪೋಸ್ಟ್ ಮಾಸ್ಟರ್ ರಂಗಯ್ಯ ಅವರು ಪ್ರಭಾರ ಕೆಲಸಕ್ಕೆ ಬಂದರು. ಆ ವೇಳೆ ಅಂಚೆ ಕಚೇರಿಯಲ್ಲಿ ಹಾಕಿರುವ ಹಣಕ್ಕೂ ಖಾತೆಯಲ್ಲಿರುವ ಹಣಕ್ಕೂ ವ್ಯತ್ಯಾಸವಾಗಿದೆ ಎಂದು ಕೆಲ ಗ್ರಾಹಕರು ರಂಗಯ್ಯ ಅವರ ಬಳಿ ದೂರಿದ್ದಾರೆ. ತನಿಖೆ ನಡೆಸಿದಾಗ...

ಚಟಕ್ಕೆ ದಾಸನಾದ ಪೋಸ್ಟ್ ಮಾಸ್ಟರ್ ಅಂಚೆ ಗ್ರಾಹಕರ 2 ಕೋಟಿ ರೂಪಾಯಿಗೆ ಪಂಗನಾಮ ಇಟ್ಟ!
ಟಕ್ಕೆ ದಾಸನಾದ ಸಬ್ ಪೋಸ್ಟ್ ಮಾಸ್ಟರ್
ಸಾಧು ಶ್ರೀನಾಥ್​
|

Updated on: Dec 22, 2023 | 2:18 PM

Share

ನಲ್ಗೊಂಡ, ಡಿಸೆಂಬರ್ 22: ಆತ ಕೇಂದ್ರ ಸರ್ಕಾರಿ ನೌಕರ. ಐಷಾರಾಮಿ ಜೀವನ ಮತ್ತು ಆನ್‌ಲೈನ್ ಬೆಟ್ಟಿಂಗ್‌ಗೆ ದಾಸನಾಗಿದ್ದ. ಕುಟುಂಬ ಸಾಲದ ಸಂಕೋಲೆಗೆ ಸಿಲುಕಿತು. ತಾನು ಕೆಲಸ ಮಾಡುತ್ತಿದ್ದ ಅಂಚೆ ಇಲಾಖೆಯಲ್ಲಿದ್ದ ಸಾರ್ವಜನಿಕರ ಹಣದ ಮೇಲೆ ಆತನ ವಕ್ರದೃಷ್ಟಿ ಬಿತ್ತು. ಇತ್ತೀಚೆಗೆ ಆತ ಆ ಹಣವನ್ನೆಲ್ಲ ತನ್ನ ಖಾತೆಗೆ ವರ್ಗಾಯಿಸಿಕೊಂಡುಬಿಟ್ಟಿದ್ದ. ಅದನ್ನು ತನ್ನ ಸ್ವಂತಕ್ಕಾಗಿ ಬಳಸಿಕೊಂಡ. ಅದು ಬರೋಬ್ಬರಿ ಎರಡು ಕೋಟಿ ರೂಪಾಯಿ ಲಪಟಾಯಿಸಿದ ಬಾಬತ್ತು. ವಿವರಕ್ಕೆ ಹೋದರೆ.. ನಲ್ಗೊಂಡ ಜಿಲ್ಲೆಯ ಹಾಳಿಯಾ ಮಂಡಲದ ಹಜಾರಿ ಗುಡೆಂಗೆ ಸೇರಿದ ಪೇರುಮಳ್ಳ ರಾಮಕೃಷ್ಣ ರಾಷ್ಟ್ರೀಯ ಚೆಸ್ ಚಾಂಪಿಯನ್. ನಾಲ್ಕು ವರ್ಷಗಳ ಹಿಂದೆ ಆತನಿಗೆ ಸ್ಪೋರ್ಟ್ ಕೋಟಾದಲ್ಲಿ ಅಂಚೆ ಇಲಾಖೆಯಲ್ಲಿ ಸಬ್ ಪೋಸ್ಟ್ ಮಾಸ್ಟರ್ ಕೆಲಸ ಸಿಕ್ಕಿತ್ತು. ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿರುವ ರಾಮಕೃಷ್ಣ ಎರಡು ವರ್ಷಗಳ ಹಿಂದೆ ನಾಗಾರ್ಜುನ ಸಾಗರ್ ಪೈಲಾನ್ ಕಾಲೋನಿಯ ಸಬ್ ಪೋಸ್ಟ್ ಮಾಸ್ಟರ್ ಆಗಿ ವರ್ಗಾವಣೆ ಮೇಲೆ ಬಂದಿದ್ದರು.

ತಂದೆ ಪೆರುಮಲ್ಲ ವೆಂಕಟೇಶ್ವರಲು 2014ರಲ್ಲಿ ಗ್ರಾಮದ ಸರಪಂಚ್ ಆಗಿ ಸ್ಪರ್ಧಿಸಿ ಸೋತಿದ್ದರು. ಆಗ ತಂದೆ ಮಾಡಿದ ಸಾಲದಿಂದ ಚೇತರಿಸಿಕೊಳ್ಳದೆ ರಾಮಕೃಷ್ಣ ಆನ್ ಲೈನ್ ಬೆಟ್ಟಿಂಗ್, ದುಂದು ವೆಚ್ಚ ಮಾಡುವ ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದ. ಸಾಲದಿಂದ ಹೊರಬರಲು ಗ್ರಾಹಕರ ಹಣವನ್ನು ಬಳಸಿಕೊಳ್ಳುತ್ತಿದ್ದ. ಗ್ರಾಹಕರು ಇಟ್ಟಿರುವ ಆರ್‌ಡಿ (ಮರುಕಳಿಸುವ ಠೇವಣಿ) ಹಣವನ್ನು ಗ್ರಾಹಕರ ಪಾಸ್ ಪುಸ್ತಕಗಳಲ್ಲಿ ಆನ್‌ಲೈನ್‌ನಲ್ಲಿ ನಮೂದು ಮಾಡಲಿಲ್ಲ. ಕಂಪ್ಯೂಟರ್ ಕೆಲಸ ಮಾಡುತ್ತಿಲ್ಲ, ನಂತರ ಬರೆಯುತ್ತೇನೆ ಎಂದು ಸಬೂಬು ಹೇಳತೊಡಗಿದ. ಗ್ರಾಹಕರು ಅವರನ್ನು ನಂಬಿದರು. ರಾಮಕೃಷ್ಣಗೆ ಜಲ್ಸಾ ಹಾಗೂ ಆನ್ ಲೈನ್ ಬೆಟ್ಟಿಂಗ್ ನಿಂದ ಒಂದೂವರೆ ಕೋಟಿ ರೂಪಾಯಿ ನಷ್ಟವಾಗಿರುವುದು ಗೊತ್ತಾಗಿದೆ.

ಆದರೆ ರಾಮಕೃಷ್ಣ ಕೆಲ ದಿನ ರಜೆಯಲ್ಲಿದ್ದ. ಇದರೊಂದಿಗೆ ಹಿಲ್ ಕಾಲೋನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತೊಬ್ಬ ಸಬ್ ಪೋಸ್ಟ್ ಮಾಸ್ಟರ್ ರಂಗಯ್ಯ ಅವರು ಪ್ರಭಾರ ಕೆಲಸಕ್ಕೆ ಬಂದರು. ಈ ಮಧ್ಯೆ, ಅಂಚೆ ಕಚೇರಿಯಲ್ಲಿ ಹಾಕಿರುವ ಹಣಕ್ಕೂ ಖಾತೆಯಲ್ಲಿರುವ ಹಣಕ್ಕೂ ವ್ಯತ್ಯಾಸವಾಗಿದೆ ಎಂದು ಕೆಲ ಗ್ರಾಹಕರು ರಂಗಯ್ಯ ಅವರ ಬಳಿ ದೂರಿದ್ದಾರೆ.

ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ದೇವರಕೊಂಡ ಅಂಚೆ ನಿರೀಕ್ಷಕ ಮದನಮೋಹನ್ ಅಂಚೆ ಕಚೇರಿಯ ದಾಖಲೆಗಳನ್ನು ಪರಿಶೀಲಿಸಿದಾಗ ರಅಮಕೃಷ್ಣನ ರಂಗಿನ ಆಟ/ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ತನಿಖೆ ನಡೆಸಿದಾಗ ಅಕ್ರಮ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಬ್ ಪೋಸ್ಟ್ ಮಾಸ್ಟರ್ ರಾಮಕೃಷ್ಣ ಅವರನ್ನು ಅಮಾನತುಗೊಳಿಸಲಾಗಿದೆ. ತನಿಖೆ ಮುಂದುವರಿದಿದ್ದು, ಒಂದು ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಖಾತೆದಾರರ ಹಣಕ್ಕೆ ಅಂಚೆ ಇಲಾಖೆಯೇ ಸಂಪೂರ್ಣ ಹೊಣೆಯಾಗಲಿದೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ