ಇನ್ನೊಂದು ಸ್ವದೇಶಿ ಲಸಿಕೆ ಕ್ಲಿನಿಕಲ್​ ಟ್ರಯಲ್​ಗೆ ಡಿಸಿಜಿಐ ಅನುಮತಿ; ಇದು ರಿಲಯನ್ಸ್ ಲೈಫ್​ ಸೈನ್ಸ್​ ಸಂಸ್ಥೆಯ ವ್ಯಾಕ್ಸಿನ್​

Covid-19 Vaccine: ರಿಲಯನ್ಸ್​ ಲೈಫ್​ ಸೈನ್ಸ್​ ಸಂಸ್ಥೆ ಅಭಿವೃದ್ಧಿ ಪಡಿಸಿದ ಕೊರೊನಾ ಲಸಿಕೆಯ ಮೊದಲನೇ ಹಂತದ ಕ್ಲಿನಿಕಲ್​ ಟ್ರಯಲ್​​ಗೆ ಶುಕ್ರವಾರ ಸಂಜೆ ಡಿಸಿಜಿಐ ಅನುಮತಿ ನೀಡಿದ್ದು, ಕೆಲವು ಷರತ್ತುಗಳನ್ನು ವಿಧಿಸಿದೆ.

ಇನ್ನೊಂದು ಸ್ವದೇಶಿ ಲಸಿಕೆ ಕ್ಲಿನಿಕಲ್​ ಟ್ರಯಲ್​ಗೆ ಡಿಸಿಜಿಐ ಅನುಮತಿ; ಇದು ರಿಲಯನ್ಸ್ ಲೈಫ್​ ಸೈನ್ಸ್​ ಸಂಸ್ಥೆಯ ವ್ಯಾಕ್ಸಿನ್​
ಕೊರೊನಾ ಲಸಿಕೆ
Edited By:

Updated on: Sep 04, 2021 | 10:47 AM

ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಔಷಧೀಯ ಸಂಸ್ಥೆಗಳು ಮುಂದಾಗಿದ್ದು, ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿವೆ. ಇದೀಗ ಇನ್ನೊಂದು ಲಸಿಕೆಯ 1ನೇ ಹಂತದ ಕ್ಲಿನಿಕಲ್​ ಟ್ರಯಲ್​ಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ(DCGI) ಅನುಮೋದನೆ ಕೊಟ್ಟಿದೆ. ಈ ಲಸಿಕೆ ಕ್ಲಿನಿಕಲ್​ ಟ್ರಯಲ್​ನಲ್ಲಿ ಯಶಸ್ವಿಯಾದರೆ, ಭಾರತದಲ್ಲಿ ಇನ್ನೊಂದು ಸ್ವದೇಶಿ ಲಸಿಕೆ ಬಳಕೆಗೆ ಸಿಗಲಿದೆ.

ರಿಲಯನ್ಸ್​ ಲೈಫ್​ ಸೈನ್ಸ್​ ಸಂಸ್ಥೆ ಅಭಿವೃದ್ಧಿ ಪಡಿಸಿದ ಕೊರೊನಾ ಲಸಿಕೆಯ ಮೊದಲನೇ ಹಂತದ ಕ್ಲಿನಿಕಲ್​ ಟ್ರಯಲ್​​ಗೆ ಶುಕ್ರವಾರ ಸಂಜೆ ಡಿಸಿಜಿಐ ಅನುಮತಿ ನೀಡಿದ್ದು, ಕೆಲವು ಷರತ್ತುಗಳನ್ನು ವಿಧಿಸಿದೆ. ಆರೋಗ್ಯವಂತ ಸ್ವಯಂಸೇವಕರ ಮೇಲೆ ಈ ರಿಲಯನ್ಸ್​ ಲೈಫ್​ ಸೈನ್ಸ್​ನ SARS-CoV-2 ಮರುಸಂಯೋಜಕ ಪ್ರೊಟೀನ್​​ ಉಪಘಟಕ ಲಸಿಕೆಯ ಪ್ರಯೋಗ ನಡೆಯಲಿದೆ. ಈ ಹಂತದಲ್ಲಿ ಲಸಿಕೆಯ ಸುರಕ್ಷತೆ, ಸಹಿಷ್ಣುತೆ ಮತ್ತು ಪ್ರತಿರೋಧಕ ಶಕ್ತಿಯನ್ನು ಮೌಲ್ಯಮಾಪನವನ್ನು ಶಿಷ್ಟಾಚಾರದ ಅನ್ವಯ ಮಾಡಲಾಗುವುದು ಎಂದು ರಿಲಯನ್ಸ್​ ಲೈಫ್​ ಸೈನ್ಸ್​ ಹೇಳಿದೆ.

ರಿಲಯನ್ಸ್​ ಲೈಫ್​ ಸೈನ್ಸ್​​ ಸಂಸ್ಥೆಯು ತನ್ನ ಸ್ವದೇಶಿ ಲಸಿಕೆ ಕ್ಲಿನಿಕಲ್​ ಟ್ರಯಲ್​ಗೆ ಅನುಮೋದನೆ ಕೋರಿ ಆಗಸ್ಟ್​ 26ರಂದು ಡಿಸಿಜಿಐಗೆ ಅರ್ಜಿ ಸಲ್ಲಿಸಿತ್ತು. ಇದೀಗ ಡಿಸಿಜಿಐನ ವಿಷಯ ತಜ್ಞರ ಸಮಿತಿ (SEC-Special Expert Committee) ಶಿಫಾರಸ್ಸಿನ ಅನ್ವಯ ಲಸಿಕೆ ಮೊದಲ ಹಂತದ ಕ್ಲಿನಿಕಲ್​ ಟ್ರಯಲ್​​ಗೆ ಅನಿಮೋದನೆ ಸಿಕ್ಕಿದೆ. ಹಾಗೇ, ಸಂಸ್ಥೆಯು ಪರಿಷ್ಕೃತ ಕ್ಲಿನಿಕಲ್​ ಪ್ರಯೋಗದ ಪ್ರೊಟೊಕಾಲ್​​ನ್ನು 14 ದಿನದ ಬದಲಾಗಿ, 42ನೇ ದಿನಕ್ಕೆ ಸಲ್ಲಿಸಬೇಕಿದೆ ಎಂದೂ ಹೇಳಲಾಗಿದೆ.   ಹಾಗೇ ಕ್ಲಿನಿಕಲ್​ ಪ್ರಯೋಗ ಮಹಾರಾಷ್ಟ್ರದ ಎಂಟು ಪ್ರದೇಶಗಳಲ್ಲಿ ನಡೆಯಲಿದೆ.

ಸದ್ಯ ದೇಶದಲ್ಲಿ ಎರಡು ಸ್ವದೇಶಿ ಲಸಿಕೆಗಳನ್ನು ನೀಡಲಾಗುತ್ತಿದೆ. ಅದರಲ್ಲಿ ಸೆರಂ ಇನ್​ಸ್ಟಿಟ್ಯೂಟ್​​ನ ಕೊವಿಶೀಲ್ಡ್​ ಮತ್ತು ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಮುಖ್ಯವಾಗಿ ನೀಡಲಾಗುತ್ತಿರುವ ಲಸಿಕೆ. ಅದು ಬಿಟ್ಟರೆ ರಷ್ಯಾದ ಸ್ಪುಟ್ನಿಕ್​ ವಿ, ಯುಎಸ್​​ನ ಮಾಡೆರ್ನಾ, ಜಾನ್ಸನ್​ ಆ್ಯಂಡ್ ಜಾನ್ಸನ್​ ಮತ್ತು ಜೈಡಸ್​ ಕ್ಯಾಡಿಲಾದ ಜೈಕೊವ್​-ಡಿ ಲಸಿಕೆಗಳಿಗೂ ಭಾರತದಲ್ಲಿ ತುರ್ತು ಬಳಕೆಗೆ ಅವಕಾಶ ಸಿಕ್ಕಿದೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ಆರೋಪಕ್ಕೆ ಮರುಜೀವ; ಸಾ.ರಾ ಮಹೇಶ್ ಒಡೆತನದ ಜಾಗಗಳ ಮರು ಸರ್ವೇ ಮಾಡಲು ಆದೇಶ

ಚಿರು ಫೋಟೋ ನೋಡಿದರೆ ಅಳು ನಿಲ್ಲಿಸ್ತಾನೆ ಮೇಘನಾ​ ಪುತ್ರ ರಾಯನ್​ ರಾಜ್​ ಸರ್ಜಾ

Published On - 10:28 am, Sat, 4 September 21