ರೋಹಿಣಿ ಸಿಂಧೂರಿ ಆರೋಪಕ್ಕೆ ಮರುಜೀವ; ಸಾ.ರಾ ಮಹೇಶ್ ಒಡೆತನದ ಜಾಗಗಳ ಮರು ಸರ್ವೇ ಮಾಡಲು ಆದೇಶ
ಈಗಾಗಲೇ ಒಮ್ಮೆ ಸಾ.ರಾ.ಮಹೇಶ್ ಒಡೆತನದ ಜಾಗದ ಸರ್ವೇ ನಡೆಸಿ ಒತ್ತುವರಿ ಆಗಿಲ್ಲ ಎಂದು ಪ್ರಾದೇಶಿಕ ಆಯುಕ್ತರು ವರದಿ ಕೊಟ್ಟಿದ್ದರಾದರೂ ಈಗ ಮರು ಸರ್ವೇ ನಡೆಯಲಿದೆ. ದಟ್ಟಗಳ್ಳಿ, ಆರ್.ಟಿ.ನಗರ, ಯಡಹಳ್ಳಿ, ಲಿಂಗಾಂಬುದಿಪಾಳ್ಯ ಸೇರಿದಂತೆ ಆರೋಪ ಕೇಳಿಬಂದಿರುವ ಕಡೆಗಳಲ್ಲೆಲ್ಲಾ ಸರ್ವೇ ನಡೆಸಲು ಭೂದಾಖಲೆಗಳ ಆಯುಕ್ತ ಸೂಚನೆ ನೀಡಿದ್ದಾರೆ.
ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಕೆ.ಆರ್.ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ನಡುವಿನ ಜಟಾಪಟಿಗೆ ಮತ್ತೊಂದು ಆಯಾಮ ಪಡೆದಿದೆ. ರೋಹಿಣಿ ಸಿಂಧೂರಿ ಮಾಡಿದ್ದ ಆರೋಪಗಳಿಗೆ ಮರುಜೀವ ಸಿಕ್ಕಿದ್ದು, ಮತ್ತೊಮ್ಮೆ ಸಾ.ರಾ.ಮಹೇಶ್ ಒಡೆತನದ ಜಾಗದ ಸರ್ವೇ ನಡೆಸಲು ಭೂದಾಖಲೆಗಳ ಆಯುಕ್ತ ಸೂಚನೆ ನೀಡಿದ್ದಾರೆ. ಈ ಬಾರಿ ಮೈಸೂರು ಅಧಿಕಾರಿಗಳನ್ನು ಹೊರಗಿಟ್ಟು ಸರ್ವೇ ಕಾರ್ಯ ಮಾಡಲಾಗುತ್ತಿದ್ದು, ಮಂಡ್ಯ ಭೂದಾಖಲೆಗಳ ಉಪ ನಿರ್ದೇಶಕರಾದ ಉಮೇಶ್, ತುಮಕೂರಿನ ಸುಜಯ್, ದಾವಣಗೆರೆಯ ಟಿ.ಕೆ.ಲೋಹಿತ್ ಅವರನ್ನು ನೇಮಕ ಮಾಡಲಾಗಿದೆ ಎಂದು ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಈಗಾಗಲೇ ಒಮ್ಮೆ ಸಾ.ರಾ.ಮಹೇಶ್ ಒಡೆತನದ ಜಾಗದ ಸರ್ವೇ ನಡೆಸಿ ಒತ್ತುವರಿ ಆಗಿಲ್ಲ ಎಂದು ಪ್ರಾದೇಶಿಕ ಆಯುಕ್ತರು ವರದಿ ಕೊಟ್ಟಿದ್ದರಾದರೂ ಈಗ ಮರು ಸರ್ವೇ ನಡೆಯಲಿದೆ. ದಟ್ಟಗಳ್ಳಿ, ಆರ್.ಟಿ.ನಗರ, ಯಡಹಳ್ಳಿ, ಲಿಂಗಾಂಬುದಿಪಾಳ್ಯ ಸೇರಿದಂತೆ ಆರೋಪ ಕೇಳಿಬಂದಿರುವ ಕಡೆಗಳಲ್ಲೆಲ್ಲಾ ಸರ್ವೇ ನಡೆಸಲು ಭೂದಾಖಲೆಗಳ ಆಯುಕ್ತ ಸೂಚನೆ ನೀಡಿದ್ದಾರೆ. ಜತೆಗೆ, 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶ ಮಾಡಿದ್ದಾರೆ. ಹೀಗಾಗಿ, ದಟ್ಟಗಳ್ಳಿಯ ಸಾ.ರಾ.ಚೌಲ್ಟ್ರಿಯ ಜಾಗವನ್ನೂ ಮರು ಅಳತೆ ಮಾಡಲಿದ್ದು, ಸಾ.ರಾ.ಮಹೇಶ್ ವಿರುದ್ಧ ರೋಹಿಣಿ ಸಿಂಧೂರಿ ಮಾಡಿದ್ದ ಆರೋಪಗಳಿಗೆ ಮರುಜೀವ ಸಿಕ್ಕಂತಾಗಿದೆ.
ಬಹುಮುಖ್ಯವಾಗಿ ಈ ಬಾರಿ ಮೈಸೂರು ಅಧಿಕಾರಿಗಳನ್ನು ಹೊರಗಿಟ್ಟು ಸರ್ವೇ ಕಾರ್ಯ ನಡೆಸುತ್ತಿರುವುದು ಗಮನಾರ್ಹವಾಗಿದೆ. ಮಂಡ್ಯ ಭೂದಾಖಲೆಗಳ ಉಪ ನಿರ್ದೇಶಕರಾದ ಉಮೇಶ್, ತುಮಕೂರಿನ ಸುಜಯ್, ದಾವಣಗೆರೆಯ ಟಿ.ಕೆ.ಲೋಹಿತ್ ಅವರನ್ನು ಇದಕ್ಕೆಂದು ನೇಮಕ ಮಾಡಲಾಗಿದ್ದು, 10 ದಿನಗಳ ಒಳಗೆ ವರದಿ ನೀಡಲಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ವಿಚಾರ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರಿಂದ ತನಿಖೆಗೆ ಆದೇಶವಾದ ಬಗ್ಗೆ ಮುನೀಶ್ ಮೌದ್ಗಿಲ್ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಮೈಸೂರು ಹಾಗೂ ಶ್ರೀರಂಗಪಟ್ಟಣ ಭಾಗದಲ್ಲಿ ಸರ್ಕಾರಿ ಜಮೀನು ಒತ್ತುವರಿ ಆಗಿರುವ ಬಗ್ಗೆ ದೂರು ನೀಡಿದ್ದಾರೆ. ದೂರುದಾರರ ಮಾಹಿತಿ ಮೇರೆಗೆ ತನಿಖೆಗೆ ಆದೇಶ ಮಾಡಲಾಗಿದೆ. ಒತ್ತುವರಿ ಬಗೆ ಸ್ಪಷ್ಟತೆ ತಿಳಿಯಲು ಅಧಿಕಾರಿಗಳ ನೇಮಕ ಮಾಡಲಾಗಿದೆ. ಈ ರೀತಿ ಬೇರೆ ಬೇರೆ ದೂರುಗಳು ಬಂದಾಗ, ಅಧಿಕಾರಿಗಳನ್ನ ನೇಮಕ ಮಾಡಿ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಕ್ಬ್ಯಾಕ್ ಅರೋಪ; ಅಮಾನತಿಗೆ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಆಗ್ರಹ
ರೋಹಿಣಿ ಸಿಂಧೂರಿ ಸಿಂಗಂ ಅಲ್ಲ, ಮೈಸೂರು ಜನರನ್ನ ಮಂಗ ಮಾಡಲು ಹೊರಟಿದ್ದ ಪ್ರಚಾರ ಪ್ರಿಯೆ: ಸಾ.ರಾ. ಮಹೇಶ್
(Sa Ra Mahesh vs Rohini Sindhuri Fight Sa Ra Mahesh owned properties Re survey order passed)
Published On - 10:43 am, Sat, 4 September 21