SBI Internet Banking: ಇಂದು 3 ತಾಸು ಸ್ಥಗಿತಗೊಳ್ಳಲಿರುವ ಎಸ್​ಬಿಐ ಇಂಟರ್​ನೆಟ್​​ ಬ್ಯಾಂಕಿಂಗ್​, ಯೊನೊ ಆ್ಯಪ್​ ಸೇವೆಗಳು; ಸಮಯ ಹೀಗಿದೆ ನೋಡಿ

SBI Yono App: ಎಸ್​ಬಿಐನ ಯೊನೊ ಆ್ಯಪ್​​ನಲ್ಲಿ 34.5 ಮಿಲಿಯನ್​ ಜನರು ರಿಜಿಸ್ಟರ್​ ಮಾಡಿಕೊಂಡಿದ್ದಾರೆ. ಏನಿಲ್ಲವೆಂದರೂ ದಿನಕ್ಕೆ 9 ಮಿಲಿಯನ್​ ಜನರು ಲಾಗಿನ್ ಆಗುತ್ತಾರೆ. 

SBI Internet Banking: ಇಂದು 3 ತಾಸು ಸ್ಥಗಿತಗೊಳ್ಳಲಿರುವ ಎಸ್​ಬಿಐ ಇಂಟರ್​ನೆಟ್​​ ಬ್ಯಾಂಕಿಂಗ್​, ಯೊನೊ ಆ್ಯಪ್​ ಸೇವೆಗಳು; ಸಮಯ ಹೀಗಿದೆ ನೋಡಿ
ಎಸ್​ಬಿಐ
Follow us
TV9 Web
| Updated By: Lakshmi Hegde

Updated on:Sep 04, 2021 | 12:31 PM

ಇಂಟರ್​ನೆಟ್​ ಬ್ಯಾಂಕಿಂಗ್ (Internet Banking Services)​ ಸೇವೆಗಳಾದ ಯೊನೊ (Yono), ಯೊನೊ ಲೈಟ್ (Yono Lite)​, ಯೊನೊ ಬಿಜಿನೆಸ್ (Yono Business)​, ಐಎಂಪಿಎಸ್ (IMPS)​ ಮತ್ತು ಯುಪಿಐ (UPI)ಗಳು ಇಂದು ಸುಮಾರು ಮೂರು ತಾಸುಗಳ ಕಾಲ ಸ್ಥಗಿತಗೊಳ್ಳಲಿವೆ ಅಥವಾ ಅವುಗಳ ಕಾರ್ಯದಲ್ಲಿ ಅಡಚಣೆಯಾಗಲಿದೆ ಎಂದು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (State Bank Of India) ಟ್ವೀಟ್ ಮಾಡುವ ಮೂಲಕ ಗ್ರಾಹಕರಿಗೆ ತಿಳಿಸಿದೆ. ಸೆಪ್ಟೆಂಬರ್​ 4ರ ರಾತ್ರಿ 10.30ಯಿಂದ ರಾತ್ರಿ 1.30 (ಸೆಪ್ಟೆಂಬರ್​ 5)ರವರೆಗೆ ಯೊನೊ, ಯೊನೊ ಲೈಟ್​, ಯೊನೊ, ಯೊನೊ ಲೈಟ್​, ಯೊನೊ ಬಿಜಿನೆಸ್​, ಐಎಂಪಿಎಸ್​ ಮತ್ತು ಯುಪಿಐಗಳಿಗೆ ಸಂಬಂಧಪ್ಟ ನಿರ್ವಹಣಾ ಕೆಲಸ ಇರುವುದರಿಂದ ಈ ಅಡಚಣೆ ಉಂಟಾಗಲಿದೆ ಎಂದು ಎಸ್​​ಬಿಐ ಮಾಹಿತಿ ನೀಡಿದೆ. ಹಾಗೇ ಅನಾನುಕೂಲತೆಗಾಗಿ ಕ್ಷಮೆಯನ್ನೂ ಕೇಳಿದೆ.

ಬ್ಯಾಂಕ್​ಗಳು ಕೆಲವು ನಿರ್ವಹಣಾ ಕೆಲಸ ಮತ್ತು ತಮ್ಮ ಸೇವೆಗಳಲ್ಲಿ ಏನಾದರೂ ಅಪ್​ಗ್ರೇಡ್ ಮಾಡಿಕೊಳ್ಳುವ ಕಾರ್ಯ ಇದ್ದಾಗ ಹೀಗೆ ನೆಟ್​ಬ್ಯಾಂಕಿಂಗ್​, ಎಟಿಎಂ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿಕೊಳ್ಳುತ್ತವೆ. ಹಾಗೇ, ಇದೀಗ ಎಸ್​ಬಿಐ ಕೂಡ ತನ್ನ ಡಿಜಿಟಲ್​ ಬ್ಯಾಂಕಿಂಗ್​ ಸೇವೆಗಳ ನಿರ್ವಹಣೆಗಾಗಿ ಇಂದು ರಾತ್ರಿ 10.30ರಿಂದ ಮೂರು ತಾಸು ಸ್ಥಗಿತಗೊಳಿಸಲಿದೆ. ದೇಶದ ಅತ್ಯಂತ ದೊಡ್ಡ ಬ್ಯಾಂಕ್​ ಆಗಿರುವ ಎಸ್​ಬಿಐ 85 ಮಿಲಿಯನ್​ಗೂ ಅಧಿಕ ಇಂಟರ್​ನೆಟ್​ ಬ್ಯಾಂಕಿಂಗ್​ ಬಳಕೆದಾರರನ್ನು ಹೊಂದಿದೆ. ಹಾಗೇ, ಮೊಬೈಲ್​ ಬ್ಯಾಂಕಿಂಗ್​ ಬಳಕೆದಾರರು 19 ಮಿಲಿಯನ್​ಗೂ ಹೆಚ್ಚಿನ ಜನರಿದ್ದಾರೆ. ಇದರ ಯೊನೊ ಆ್ಯಪ್​​ನಲ್ಲಿ 34.5 ಮಿಲಿಯನ್​ ಜನರು ರಿಜಿಸ್ಟರ್​ ಮಾಡಿಕೊಂಡಿದ್ದಾರೆ. ಏನಿಲ್ಲವೆಂದರೂ ದಿನಕ್ಕೆ 9 ಮಿಲಿಯನ್​ ಜನರು ಲಾಗಿನ್ ಆಗುತ್ತಾರೆ.

ಇದನ್ನೂ ಓದಿ: ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಆದಾಯ ಮಿತಿಗೆ ತಿದ್ದುಪಡಿ ತರಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

ಬೆಳಗಾವಿಯಲ್ಲಿ ಬಿಜೆಪಿ ಶಾಸಕನ ಹುಟ್ಟು ಹಬ್ಬದ ವಿಡಿಯೋ ವೈರಲ್; ಹೂವಿನ ಮಳೆ ಸುರಿಸಿದ ಪೊಲೀಸರು

Published On - 12:30 pm, Sat, 4 September 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ