ಕೇರಳದ ಬಾಲಕಿಯ ಸಾವು ಪ್ರಕರಣದಲ್ಲಿ ಆಕೆಯ ಅಪ್ಪ, ಚಿಕಿತ್ಸೆ ನಿರಾಕರಿಸಿದ್ದ ಇಮಾಮ್ ಬಂಧನ

Kannur: ಇಮಾಮ್ ಅವರ ಸಂಬಂಧಿಯೊಬ್ಬರು ನಮ್ಮ ಬಳಿ ಸಾಕ್ಷಿ ಇದ್ದಾರೆ, ಇಮಾಮ್ ಅವರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದರ ವಿರುದ್ಧ ಆಕೆಯ ತಂದೆಗೆ ಮನವೊಲಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿರುವುದಾಗಿ ಪೊಲೀಸರು ಹೇಳಿದ್ದಾರೆ.

ಕೇರಳದ ಬಾಲಕಿಯ ಸಾವು ಪ್ರಕರಣದಲ್ಲಿ ಆಕೆಯ ಅಪ್ಪ, ಚಿಕಿತ್ಸೆ ನಿರಾಕರಿಸಿದ್ದ ಇಮಾಮ್ ಬಂಧನ
ಸಾಂಕೇತಿಕ ಚಿತ್ರ
Edited By:

Updated on: Nov 05, 2021 | 5:20 PM

ಕಣ್ಣೂರ್: ಕೇರಳದ ಕಣ್ಣೂರಿನಲ್ಲಿ 11 ವರ್ಷದ ಬಾಲಕಿ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಆಕೆಯ 55 ವರ್ಷದ ತಂದೆ ಅಬ್ದುಲ್ ಸತಾರ್ ಮತ್ತು 30 ವರ್ಷದ ಇಮಾಮ್ ಮೊಹಮ್ಮದ್ ಉವೈಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬಾಲಕಿ ಅನಾರೋಗ್ಯಕ್ಕೆ ಒಳಗಾದಾಗ ಧಾರ್ಮಿಕ ಆಧಾರದ ಮೇಲೆ ವೈದ್ಯಕೀಯ ಸಹಾಯವನ್ನು ಪಡೆಯದಂತೆ ಉವೈಜ್ ಅವರು ಬಾಲಕಿಯ ಕುಟುಂಬಕ್ಕೆ ಹೇಳಿದ್ದರು.  “ಇಮಾಮ್ ಅವರ ಸಂಬಂಧಿಯೊಬ್ಬರು ನಮ್ಮ ಬಳಿ ಸಾಕ್ಷಿ ಇದ್ದಾರೆ, ಇಮಾಮ್ ಅವರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದರ ವಿರುದ್ಧ ಆಕೆಯ ತಂದೆಗೆ ಮನವೊಲಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇಮಾಮ್ ಅವರು ಈ ಹಿಂದೆ ಇಂತಹ ನಿದರ್ಶನಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಸಾಕ್ಷಿಯೂ ನಮ್ಮ ಬಳಿ ಇದೆ. ವೈದ್ಯಕೀಯ ಸಹಾಯವನ್ನು ಪಡೆಯದಂತೆ ಅವರು ಸಲಹೆ ನೀಡಿದ 4 ವ್ಯಕ್ತಿಗಳು ಈ ಹಿಂದೆ ಸಾವಿಗೀಡಾಗಿದ್ದರು ಎಂದು ಕಣ್ಣೂರು ಜಿಲ್ಲಾ ಪೊಲೀಸ್ ಮುಖ್ಯಸ್ಥ ಇಳಂಗೋ ಆರ್ ಎನ್‌ಡಿಟಿವಿಗೆ ತಿಳಿಸಿದರು.

ಪೊಲೀಸರ ಪ್ರಕಾರ, ಸಂತ್ರಸ್ತೆ ಜ್ವರದಿಂದ ಬಳಲುತ್ತಿದ್ದರು ಆದರೆ ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಬದಲಾಗಿ, ಆಕೆಯನ್ನು ಇಮಾಮ್ ಬಳಿಗೆ ಕರೆದೊಯ್ದರು. ಅವರು ಆಕೆಗೆ ಪವಿತ್ರ ನೀರನ್ನು ನೀಡಿದರು ಮತ್ತು ಆಕೆಯ ಪೋಷಕರಿಗೆ ಕುರಾನ್ ಓದಲು ಹೇಳಿದರು. ಅನಾರೋಗ್ಯಕ್ಕೊಳಗಾದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯದಂತೆ ಅವರಿಗೆ ಸಲಹೆ ನೀಡಿದರು ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: Modi in Kedarnath ಕೇದಾರನಾಥದಲ್ಲಿ ₹130 ಕೋಟಿ ಮೌಲ್ಯದ 5 ಯೋಜನೆ ಉದ್ಘಾಟಿಸಿದ ಮೋದಿ