ಪ್ರಧಾನಿ ಮೋದಿಗೆ ಜೀವ ಬೆದರಿಕೆ: ಮುಂಬೈ ಪೊಲೀಸರಿಗೆ ಐಎಸ್‌ಐ ಸಂಚಿನ ಬಗ್ಗೆ ಮೆಸೇಜ್

|

Updated on: Dec 07, 2024 | 3:51 PM

ಪ್ರಧಾನಿ ನರೇಂದ್ರ ಮೋದಿಗೆ ಕೊಲೆ ಬೆದರಿಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಪಾಕಿಸ್ತಾನಿ ಏಜೆಂಟರು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಅನಾಮಿಕರು ಸಂದೇಶ ಕಳುಹಿಸಿದ್ದಾರೆ.

ಪ್ರಧಾನಿ ಮೋದಿಗೆ ಜೀವ ಬೆದರಿಕೆ: ಮುಂಬೈ ಪೊಲೀಸರಿಗೆ ಐಎಸ್‌ಐ ಸಂಚಿನ ಬಗ್ಗೆ ಮೆಸೇಜ್
ಪ್ರಧಾನಿ ನರೇಂದ್ರ ಮೋದಿ
Follow us on

ಮುಂಬೈ: ಮುಂಬೈ ಟ್ರಾಫಿಕ್ ಪೊಲೀಸರಿಗೆ ಇಂದು ಮೆಸೇಜ್ ಒಂಂದು ಬಂದಿದ್ದು, ಅದರಲ್ಲಿ ಪಾಕಿಸ್ತಾನದ ಪ್ರಧಾನ ಸಂಸ್ಥೆಯಾದ ಐಎಸ್‌ಐ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಂಬ್ ಸ್ಫೋಟದ ಮೂಲಕ ಮೋದಿಯ ಹತ್ಯೆ ನಡೆಸಬಹುದು ಎಂದು ಮೆಸೇಜ್ ಕಳುಹಿಸುವವರು ಆರೋಪಿಸಿದ್ದಾರೆ. ಈ ಸಂದೇಶದಲ್ಲಿ ಇಬ್ಬರು ವ್ಯಕ್ತಿಗಳನ್ನು ಹೆಸರಿಸಲಾಗಿದ್ದು, ಅವರು ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗಳಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ತನಿಖೆ ಆರಂಭಿಸಲಾಗಿದ್ದು, ಮೆಸೇಜ್ ಕಳುಹಿಸಿದವರ ಪತ್ತೆಗೆ ಪ್ರಯತ್ನ ನಡೆಯುತ್ತಿದೆ. ಕಳೆದ 10 ದಿನಗಳಲ್ಲಿ ಪ್ರಧಾನಿ ಮೋದಿಗೆ ಬರುತ್ತಿರುವ ಎರಡನೇ ಕೊಲೆ ಬೆದರಿಕೆ ಇದಾಗಿದೆ.

ಪ್ರಧಾನಿ ಮೋದಿಗೆ ಜೀವ ಬೆದರಿಕೆ ಇದೆ ಎಂಬ ಮೆಸೇಜ್ ಮುಂಬೈ ಪೊಲೀಸರಿಗೆ ಈ ಮೊದಲು ಕೂಡ ಬಂದಿತ್ತು. ನವೆಂಬರ್ 27ರಂದು ಪೊಲೀಸರಿಗೆ ಅನಾಮಧೇಯ ಕರೆ ಬಂದಿದ್ದು, ಪ್ರಧಾನಿಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಕರೆ ಮಾಡಿದ್ದಾರೆ ಎನ್ನಲಾದ 34 ವರ್ಷದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದ್ದು, ಆಕೆಯ ಹಿನ್ನೆಲೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮೋದಿ ಸರ್ಕಾರದಿಂದ ಮತ್ತೊಂದು ಗಿಫ್ಟ್: ಬಳ್ಳಾರಿಗೆ ಹೊಸ ನವೋದಯ ವಿದ್ಯಾಲಯ

ಪೊಲೀಸರ ಪ್ರಕಾರ, ನಿಯಂತ್ರಣ ಕೊಠಡಿಗೆ ಬೆಳಿಗ್ಗೆ 9.13 ಕ್ಕೆ ಕರೆ ಬಂದಿತು, ಮೋದಿಯನ್ನು ಕೊಲ್ಲಲು ಸಂಚು ರೂಪಿಸಲಾಗಿದೆ, ಅದಕ್ಕೆ ಆಯುಧವು ಸಿದ್ಧವಾಗಿದೆ ಎಂದು ಮಹಿಳೆ ಹೇಳಿದ್ದರು.

ಕರೆ ಮಾಡಿದ ಮಹಿಳೆ ಕೊನೆಯದಾಗಿ ಮೊಬೈಲ್ ಬಳಸಿದ ಸ್ಥಳವನ್ನು ಅಂಧೇರಿಯಲ್ಲಿ ಪತ್ತೆಹಚ್ಚಲಾಗಿತ್ತು. ಅಂಬೋಲಿ ಪೊಲೀಸ್ ಠಾಣೆಯ ಪೊಲೀಸರು ಹುಡುಕಾಟವನ್ನು ಪ್ರಾರಂಭಿಸಿದರು. ಆದರೆ, ಫೋನ್ ಸ್ವಿಚ್ ಆಫ್ ಆಗಿರುವುದು ಕಂಡುಬಂದಿತ್ತು..

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ