ಮಣಿಪುರ ಮತ್ತೆ ‘ಡಿಸ್ಟರ್ಬ್ಡ್ ಏರಿಯಾ’ ಎಂದು ಘೋಷಣೆ

|

Updated on: Sep 27, 2023 | 5:23 PM

ರಾಜ್ಯವನ್ನು ಕಠಿಣ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ ಅಡಿಯಲ್ಲಿ ಇರಿಸಲಾಗಿದೆ. ಅಕ್ಟೋಬರ್​​ ಒಂದರಿಂದ ಮಣಿಪುರದಲ್ಲಿ ಕಠಿಣ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯನ್ನು ಜಾರಿ ಮಾಡಲಾಗುವುದು ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮಣಿಪುರ ಮತ್ತೆ ಡಿಸ್ಟರ್ಬ್ಡ್ ಏರಿಯಾ ಎಂದು ಘೋಷಣೆ
ಸಾಂದರ್ಭಿಕ ಚಿತ್ರ
Follow us on

ಇಂಫಾಲ್, ಸೆ.27: ಮಣಿಪುರ (Manipur) ತನ್ನ ಮೂಲ ಸ್ಥಿತಿಗೆ ಮರುಳುತ್ತಿರುವ ಸಮಯದಲ್ಲೇ ಮತ್ತೆ ರಾಜ್ಯವನ್ನು ಕಠಿಣ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ ಅಡಿಯಲ್ಲಿ ಇರಿಸಲಾಗಿದೆ. ಅಕ್ಟೋಬರ್​​ ಒಂದರಿಂದ ಮಣಿಪುರದಲ್ಲಿ ಕಠಿಣ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯನ್ನು ಜಾರಿ ಮಾಡಲಾಗುವುದು ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮಣಿಪುರದಲ್ಲಿ ಆರು ತಿಂಗಳವರೆಗೆ ಎಎಫ್​ಎಸ್​​ಪಿಎ(Armed Forces Special Powers Act) ಜಾರಿಯಲ್ಲಿರುತ್ತದೆ. ಇನ್ನು ಈ ಕಾಯಿದೆಯಿಂದ ಕಣಿವೆ ಪ್ರದೇಶಗಳನ್ನು ಒಳಗೊಂಡಿರುವ 19 ಪೊಲೀಸ್ ಠಾಣೆಗಳನ್ನು ಹೊರಗಿಡಲಾಗಿದೆ.

ಸರ್ಕಾರ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ 19 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಹೊರತುಪಡಿಸಿ ಇಡೀ ಮಣಿಪುರ ರಾಜ್ಯವನ್ನು ಆರು ತಿಂಗಳವರೆಗೆ ‘ಡಿಸ್ಟರ್ಬ್ಡ್ ಏರಿಯಾ’ (ತೊಂದರೆಗೊಳಗಾದ ಪ್ರದೇಶ) ಎಂದು ಘೋಷಿಸಲಾಗಿದೆ. ಇದಕ್ಕೆ ರಾಜ್ಯಪಾಲರು ಒಪ್ಪಿಕೊಂಡಿದ್ದಾರೆ ಎಂದು ಈ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ದ್ವೇಷದ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿದೆ ಮಣಿಪುರ, ಹಿಂಸಾಚಾರಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

ಅಕ್ಟೋಬರ್ 1, 2023 ರಿಂದ ಜಾರಿಗೆ ಬರುವಂತೆ ಇನ್ನು ಆರು ತಿಂಗಳು ಈ ಅಧಿಸೂಚನೆಯನ್ನು ಪಾಲನೆ ಮಾಡಲಾಗುತ್ತದೆ ಎಂದು ಹೇಳಿದೆ. ಈ ಕಾಯಿದೆಯಡಿ ಬರದ ಪೊಲೀಸ್​​ ಠಾಣೆಗಳೆಂದರೆ: ಇಂಫಾಲ್, ಲ್ಯಾಂಫೆಲ್, ಸಿಟಿ, ಸಿಂಗ್ಜಮೇ, ಸೆಕ್ಮಾಯಿ, ಲಮ್ಸಾಂಗ್, ಪಾಸ್ಟೋಲ್, ವಾಂಗೋಯ್, ಪೊರಂಪಾಟ್, ಹೀಂಗಾಂಗ್, ಲಾಮ್ಲೈ, ಇರಿಬಂಗ್, ಲೈಮಾಖೋಂಗ್, ತೌಬಲ್, ಬಿಷ್ಣುಪುರ್, ನಂಬೋಲ್, ಮೊಯಿರಾಂಗ್, ಕಕ್ಚ್ ಜಿರ್ಬಾಮ್.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ