Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಲಿಸ್ತಾನಿ- ಗ್ಯಾಂಗ್​​​ಸ್ಟರ್​​ಗಳ ನಂಟು ಪತ್ತೆಗಾಗಿ 6 ರಾಜ್ಯಗಳ 50 ಸ್ಥಳಗಳಲ್ಲಿ ಎನ್‌ಐಎ ದಾಳಿ

ವಿವಿಧ ರಾಜ್ಯಗಳ ಜೈಲುಗಳಲ್ಲಿ ಈ ಪಿತೂರಿಗಳನ್ನು ರೂಪಿಸಲಾಗುತ್ತಿದ್ದು, ವಿದೇಶದಲ್ಲಿರುವ ಸಂಘಟಿತ ಕಾರ್ಯಕರ್ತರ ಜಾಲದಿಂದ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಎನ್ಐಎ ತನಿಖೆಗಳು ಬಹಿರಂಗಪಡಿಸಿವೆ. ಕಳೆದ ವರ್ಷ ಪಂಜಾಬ್‌ನಲ್ಲಿ ಮಹಾರಾಷ್ಟ್ರದ ಬಿಲ್ಡರ್ ಸಂಜಯ್ ಬಿಯಾನಿ, ಗಣಿ ವ್ಯಾಪಾರಿ ಮೆಹಲ್ ಸಿಂಗ್ ಮತ್ತು ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಅಂಬಿಯಾ ಅವರ ಹತ್ಯೆಗಳು ಪಿತೂರಿಯಿಂದಲೇ ನಡೆದಿತ್ತು.

ಖಲಿಸ್ತಾನಿ- ಗ್ಯಾಂಗ್​​​ಸ್ಟರ್​​ಗಳ ನಂಟು ಪತ್ತೆಗಾಗಿ 6 ರಾಜ್ಯಗಳ 50 ಸ್ಥಳಗಳಲ್ಲಿ ಎನ್‌ಐಎ ದಾಳಿ
ಎನ್ಐಎ
Follow us
ರಶ್ಮಿ ಕಲ್ಲಕಟ್ಟ
|

Updated on:Sep 27, 2023 | 6:27 PM

ದೆಹಲಿ ಸೆಪ್ಟೆಂಬರ್ 27: ಖಲಿಸ್ತಾನಿ-ಗ್ಯಾಂಗ್​​ಸ್ಟರ್ ಸಂಬಂಧದ (Khalistani-gangster )ವಿರುದ್ಧದ ಕಾರ್ಯಾಚರಣೆಯಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ ಪಂಜಾಬ್, ಹರ್ಯಾಣ, ದೆಹಲಿ-ಎನ್‌ಸಿಆರ್, ರಾಜಸ್ಥಾನ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.  ದಾಳಿಯ ಸಮಯದಲ್ಲಿ, ಎನ್‌ಐಎ ಪಂಜಾಬ್‌ನ ಫಿರೋಜ್‌ಪುರದಿಂದ ಗ್ಯಾಂಗ್​​ಸ್ಟರ್-ಭಯೋತ್ಪಾದಕ ಅರ್ಶ್ ಡಲ್ಲಾ ಅವರ ಸಹಾಯಕ ಸುಂದರ್ ಅಲಿಯಾಸ್ ಜೋರಾನನ್ನು ಬಂಧಿಸಿದೆ. ಜೋರಾನನ್ನು ಚಂಡೀಗಢದಲ್ಲಿ ವಿಚಾರಣೆ ನಡೆಸಲಾಗುವುದು.

ಇಡೀ ದಿನ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 53 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಆರು ರಾಜ್ಯಗಳಲ್ಲಿ ನಡೆಸಿದ ದಾಳಿಯಲ್ಲಿ ಪಿಸ್ತೂಲ್‌ಗಳು, ಮದ್ದುಗುಂಡುಗಳು, ಹೆಚ್ಚಿನ ಸಂಖ್ಯೆಯ ಡಿಜಿಟಲ್ ಸಾಧನಗಳು ಮತ್ತು ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಗಳು ಆಗಸ್ಟ್ 2022 ರಿಂದ ಐದು ಪ್ರಕರಣಗಳ ನೋಂದಣಿಯ ನಂತರ NIA ಆರಂಭಿಸಿದ ಶೋಧ ಸರಣಿಯಲ್ಲಿ ಏಳನೆಯದಾಗಿದೆ. ಈ ಪ್ರಕರಣಗಳು ಜುಲೈ 2023 ರಲ್ಲಿ ಸಂಘಟಿತ ಕ್ರಿಮಿನಲ್ ಗ್ಯಾಂಗ್‌ಗಳ ವಿರುದ್ಧ ದಾಖಲಾದ ಎರಡು ಹೊಸ ಪ್ರಕರಣಗಳನ್ನು ಒಳಗೊಂಡಿವೆ. ಈ ಪ್ರಕರಣಗಳು ಉದ್ದೇಶಿತ ಹತ್ಯೆಗಳು, ಭಯೋತ್ಪಾದಕ ನಿಧಿ ಒಳಗೊಂಡ ಪಿತೂರಿಗಳಿಗೆ ಸಂಬಂಧಿಸಿವೆ. ಗ್ಯಾಂಗ್​​ಸ್ಟರ್​​ಗಳಿಂದ ನಡೆಸಲ್ಪಡುವ ಖಲಿಸ್ತಾನ್ ಪರ ಸಂಘಟನೆಗಳು, ಸುಲಿಗೆ ಮತ್ತು ಇನ್ನಿತರ ಪ್ರಕರಣಗಳಲ್ಲಿ ಹಲವರು ವಿವಿಧ ಜೈಲುಗಳಲ್ಲಿ ಬಂಧಿತರಾಗಿದ್ದಾರೆ ಅಥವಾ ಪಾಕಿಸ್ತಾನ, ಕೆನಡಾ, ಮಲೇಷ್ಯಾ, ಪೋರ್ಚುಗಲ್ ಮತ್ತು ಆಸ್ಟ್ರೇಲಿಯಾದಂತಹ ವಿದೇಶಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ವಿವಿಧ ರಾಜ್ಯಗಳ ಜೈಲುಗಳಲ್ಲಿ ಈ ಪಿತೂರಿಗಳನ್ನು ರೂಪಿಸಲಾಗುತ್ತಿದ್ದು, ವಿದೇಶದಲ್ಲಿರುವ ಸಂಘಟಿತ ಕಾರ್ಯಕರ್ತರ ಜಾಲದಿಂದ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಎನ್ಐಎ ತನಿಖೆಗಳು ಬಹಿರಂಗಪಡಿಸಿವೆ. ಕಳೆದ ವರ್ಷ ಪಂಜಾಬ್‌ನಲ್ಲಿ ಮಹಾರಾಷ್ಟ್ರದ ಬಿಲ್ಡರ್ ಸಂಜಯ್ ಬಿಯಾನಿ, ಗಣಿ ವ್ಯಾಪಾರಿ ಮೆಹಲ್ ಸಿಂಗ್ ಮತ್ತು ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಅಂಬಿಯಾ ಅವರ ಹತ್ಯೆಗಳು ಪಿತೂರಿಯಿಂದಲೇ ನಡೆದಿತ್ತು.

ಬುಧವಾರದ ದಾಳಿಗಳು ಭಯೋತ್ಪಾದಕ-ಗ್ಯಾಂಗ್​​ಸ್ಟರ್-ಮಾದಕ ಕಳ್ಳಸಾಗಣೆದಾರರ ಸಂಬಂಧವನ್ನು ಪತ್ತೆ ಹಚ್ಚುವ ಗುರಿಯನ್ನು ಹೊಂದಿದ್ದು, ವಿವಿಧ ಹಾರ್ಡ್‌ಕೋರ್ ಗ್ಯಾಂಗ್‌ಗಳು ಮತ್ತು ಅವರ ಕಾರ್ಯಕರ್ತರಿಗೆ ಸಂಬಂಧಿಸಿದ ಶಸ್ತ್ರಾಸ್ತ್ರ ಪೂರೈಕೆದಾರರು, ಹಣಕಾಸುದಾರರು ಮತ್ತು ಲಾಜಿಸ್ಟಿಕ್ಸ್ ಪೂರೈಕೆದಾರರ ಮೇಲೆ ಕೇಂದ್ರೀಕರಿಸಿದೆ. ಈ ಗ್ಯಾಂಗ್‌ಗಳು ಪಾಕಿಸ್ತಾನ, ಯುಎಇ, ಕೆನಡಾ ಮತ್ತು ಪೋರ್ಚುಗಲ್ ಸೇರಿದಂತೆ ಇತರ ದೇಶಗಳಲ್ಲಿ ನೆಲೆಸಿರುವ ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರೊಂದಿಗೆ ಸಹಕರಿಸುತ್ತವೆ.

ಎನ್ಐಎ ತನಿಖೆಯ ಪ್ರಕಾರ, ಭಾರತದಲ್ಲಿ ಒಂದು ಕಾಲದಲ್ಲಿ ಗ್ಯಾಂಗ್‌ಗಳನ್ನು ಮುನ್ನಡೆಸಿದ್ದ ಅನೇಕ ಕ್ರಿಮಿನಲ್‌ಗಳು ಮತ್ತು ದರೋಡೆಕೋರರು ಇತ್ತೀಚಿನ ವರ್ಷಗಳಲ್ಲಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಅವರು ಈಗ ಅಲ್ಲಿಂದ ಭಯೋತ್ಪಾದನೆ ಮತ್ತು ಹಿಂಸಾಚಾರ-ಸಂಬಂಧಿತ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಅಪರಾಧಿಗಳು ಭಾರತೀಯ ಜೈಲುಗಳಲ್ಲಿ ಬಂಧಿಯಾಗಿರುವ ಅಪರಾಧಿಗಳ ಸಹಯೋಗದೊಂದಿಗೆ ಗುತ್ತಿಗೆ ಮತ್ತು ಸೇಡಿನ ಹತ್ಯೆಗಳು ಸೇರಿದಂತೆ ಗಂಭೀರ ಅಪರಾಧಗಳನ್ನು ಯೋಜಿಸಿ ಮತ್ತು ಕಾರ್ಯಗತಗೊಳಿಸಲು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೆನಡಾದಲ್ಲಿ ಖಲಿಸ್ತಾನ್ ಭಯೋತ್ಪಾದನೆ: ನಿಜ್ಜರ್‌ಗಿಂತ ದೊಡ್ಡ ಉಗ್ರ ಕೆಟಿಎಫ್​​ನ ಈ ಅರ್ಶ್​​​ದೀಪ್ ಡಲ್ಲಾ

ಈ ಗುಂಪುಗಳು ಉದ್ದೇಶಿತ ಹತ್ಯೆಗಳು ಮತ್ತು ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಹವಾಲಾ ವಹಿವಾಟು ಮತ್ತು ಸುಲಿಗೆ ಮೂಲಕ ದಾಳಿ ಮತ್ತು ಇತರ ದುಷ್ಕೃತ್ಯಗಳಿಗೆ ಹಣವನ್ನು ಸಂಗ್ರಹಿಸಲು ಕಾರಣವಾಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Wed, 27 September 23

ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ
ಕುಟುಂಬ, ಮಕ್ಕಳು, ಸಿನಿಮಾ ಇತ್ಯಾದಿ.. ಮಗಳೊಟ್ಟಿಗೆ ಮಾತಿಗೆ ಕೂತ ಶಿವಣ್ಣ
ಕುಟುಂಬ, ಮಕ್ಕಳು, ಸಿನಿಮಾ ಇತ್ಯಾದಿ.. ಮಗಳೊಟ್ಟಿಗೆ ಮಾತಿಗೆ ಕೂತ ಶಿವಣ್ಣ