Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆನಡಾದಲ್ಲಿ ಖಲಿಸ್ತಾನ್ ಭಯೋತ್ಪಾದನೆ: ನಿಜ್ಜರ್‌ಗಿಂತ ದೊಡ್ಡ ಉಗ್ರ ಕೆಟಿಎಫ್​​ನ ಈ ಅರ್ಶ್​​​ದೀಪ್ ಡಲ್ಲಾ

Arshdeep Dala: ಮೂಲತಃ ಪಂಜಾಬ್‌ನ ಮೋಗಾ ಜಿಲ್ಲೆಯ ಗ್ರಾಮದ ಅರ್ಶ್ ಡಲ್ಲಾ,  ವಿವಿಧ ಸಂಘಟಿತ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮತ್ತು ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ (ಐಎಸ್‌ವೈಎಫ್) ಸೇರಿದಂತೆ ಉಗ್ರಗಾಮಿ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾನೆ. ಈತನಿಗೆ ಕುಖ್ಯಾತ ಕೆನಡಾದ ದರೋಡೆಕೋರ ಗೋಲ್ಡಿ ಬ್ರಾರ್‌ ಜತೆಯೂ ಸಂಬಂಧ ಇದೆ.

ಕೆನಡಾದಲ್ಲಿ ಖಲಿಸ್ತಾನ್ ಭಯೋತ್ಪಾದನೆ: ನಿಜ್ಜರ್‌ಗಿಂತ ದೊಡ್ಡ ಉಗ್ರ ಕೆಟಿಎಫ್​​ನ ಈ ಅರ್ಶ್​​​ದೀಪ್ ಡಲ್ಲಾ
ಅರ್ಶ್ ದೀಪ್ ಡಲ್ಲಾ
Follow us
ರಶ್ಮಿ ಕಲ್ಲಕಟ್ಟ
|

Updated on:Sep 23, 2023 | 2:37 PM

ದೆಹಲಿ ಸೆಪ್ಟೆಂಬರ್ 23: ನಿಯೋಜಿತ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ (Hardeep Singh Nijjar) ಭಾರತೀಯ ಏಜೆಂಟರ ಕೈವಾಡದ ಬಗ್ಗೆ ಕೆನಡಾ (Canada) ಸರ್ಕಾರ ಆಧಾರರಹಿತ ಆರೋಪಗಳನ್ನು ಮಾಡಿದ ನಂತರ ಕೆನಡಾದಲ್ಲಿನ ಉಗ್ರಗಾಮಿ ಚಟುವಟಿಕೆಗಳು ಮತ್ತೆ ಸುದ್ದಿಯಲ್ಲಿದೆ. ಜುಲೈ 2020 ರಲ್ಲಿ ಭಾರತದಿಂದ ಪಲಾಯನ ಮಾಡಿದ ಅರ್ಶ್‌ದೀಪ್ ಸಿಂಗ್, ಅಲಿಯಾಸ್ ಅರ್ಶ್ ಡಲ್ಲಾ(Arsh Dala), ಕೆನಡಾ ಮೂಲದ ಖಲಿಸ್ತಾನಿ ಉಗ್ರರ ಪಟ್ಟಿಯಲ್ಲಿ ಒಬ್ಬನೆಂದು ಭಾರತೀಯ ಗುಪ್ತಚರ ಸಂಸ್ಥೆ ಹೇಳಿದೆ.

ಮೂಲತಃ ಪಂಜಾಬ್‌ನ ಮೋಗಾ ಜಿಲ್ಲೆಯ ಗ್ರಾಮದ ಅರ್ಶ್ ಡಲ್ಲಾ,  ವಿವಿಧ ಸಂಘಟಿತ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮತ್ತು ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ (ಐಎಸ್‌ವೈಎಫ್) ಸೇರಿದಂತೆ ಉಗ್ರಗಾಮಿ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾನೆ. ಈತನಿಗೆ ಕುಖ್ಯಾತ ಕೆನಡಾದ ದರೋಡೆಕೋರ ಗೋಲ್ಡಿ ಬ್ರಾರ್‌ ಜತೆಯೂ ಸಂಬಂಧ ಇದೆ ಎಂದು  ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

27ರ ಹರೆಯದ ಡಲ್ಲಾ, ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ (ನಿಜ್ಜರ್‌ನ ಅದೇ ಸ್ಥಳ) ತನ್ನ ಹೆಂಡತಿ ಮತ್ತು ಅಪ್ರಾಪ್ತ ಮಗಳೊಂದಿಗೆ ವಾಸಿಸುತ್ತಿದ್ದಾನೆ. ಈತ ಸೆಪ್ಟೆಂಬರ್ 1, 2017 ರಂದು ಜಲಂಧರ್‌ನಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ನೀಡಲಾದ ಪಾಸ್‌ಪೋರ್ಟ್ ಅನ್ನು ಹೊಂದಿದ್ದು ಇದು ಆಗಸ್ಟ್ 31, 2027 ರವರೆಗೆ ಮಾನ್ಯವಾಗಿರುತ್ತದೆ.

2020ರಿಂದ ಈತ ಪ್ರಾಥಮಿಕವಾಗಿ ಭಯೋತ್ಪಾದನಾ ಘಟಕಗಳನ್ನು ಬೆಳೆಸುವಲ್ಲಿ ತೊಡಗಿಸಿಕೊಂಡಿದ್ದಾನೆ. ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ವ್ಯವಸ್ಥೆಗೊಳಿಸವುದು, ಹಣವನ್ನು ಒದಗಿಸುವುದು ಮತ್ತು ಪಂಜಾಬ್‌ನಲ್ಲಿ ಉದ್ದೇಶಿತ ಹತ್ಯೆಗಳನ್ನು ಆಯೋಜಿಸಿವುದರಲ್ಲಿಯೂ ಈತ ತೊಡಗಿಕೊಂಡಿದ್ದ. ಕೊಲೆಯಾದ ಕೆಟಿಎಫ್ ಮುಖ್ಯಸ್ಥ ನಿಜ್ಜರ್‌ಗಿಂತ ಹೆಚ್ಚು ಕೊಲೆ ಪ್ರಕರಣಗಳಲ್ಲಿ ಡಲ್ಲಾ ಭಾಗಿಯಾಗಿದ್ದಾನೆ ಎಂದು ದಾಖಲೆಗಳು ಸೂಚಿಸುತ್ತವೆ.

ಪಂಜಾಬ್‌ನಲ್ಲಿ ಭಯೋತ್ಪಾದನಾ ಚಟುವಟಿಕೆಗಳು

ಮೊಗಾದಲ್ಲಿ ಕೆಟಿಎಫ್ ಮಾಡ್ಯೂಲ್ (2021): ಮೊಗಾದಲ್ಲಿನ ಸನ್‌ಶೈನ್ ಕ್ಲೋತ್ಸ್ ಸ್ಟೋರ್‌ನ ಮಾಲೀಕ ತೇಜಿಂದರ್, ಅಲಿಯಾಸ್ ಪಿಂಕಾ ಹತ್ಯೆ, 2021 ಜುಲೈನಲ್ಲಿ ಶಕ್ತಿ ಸಿಂಗ್ ಅಪರಣ ಮತ್ತು ಹತ್ಯೆಯ ಯತ್ನಕ್ಕೆ ಕಾರಣವಾದ 3 ಸದಸ್ಯರ ಕೆಟಿಎಫ್ ಮಾಡ್ಯೂಲ್ ಅನ್ನು ಹರ್ದೀಪ್ ಸಿಂಗ್ ನಿಜ್ಜರ್ ಸಹಯೋಗದೊಂದಿಗೆ ಅರ್ಶ್ ಡಲ್ಲಾ ಮಾಡಿದ್ದ.

ಮನೋಹರ್ ಲಾಲ್ ಹತ್ಯೆ (2020): ನವೆಂಬರ್ 2020 ರಲ್ಲಿ ಬಟಿಂಡಾದಲ್ಲಿ ಡೇರಾ ಸಚ್ಚಾ ಸೌದದ ಶಿಷ್ಯ ಮನೋಹರ್ ಲಾಲ್  ಹತ್ಯೆಯಲ್ಲಿ ಭಾಗಿ. ಮೃತ ಕ್ರಿಮಿನಲ್ ಸುಖಪ್ರೀತ್ ಸಿಂಗ್ ಅವರ ಫೇಸ್‌ಬುಕ್ ಖಾತೆಯಲ್ಲಿ ಆರ್ಶ್ ಡಲ್ಲಾ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.

ಹಿಂದೂ ಅರ್ಚಕರ ಮೇಲೆ ದಾಳಿ (2021): ಜನವರಿ 2021 ರಲ್ಲಿ ಜಲಂಧರ್‌ನ ಫಿಲ್ಲೌರ್‌ನಲ್ಲಿ ಹಿಂದೂ ಅರ್ಚಕ ಪ್ರಜ್ಞಾ ಜ್ಞಾನ ಮುನಿ ಅವರ ಸಹಚರರಾದ ರಾಮ್ ಸಿಂಗ್, ಅಲಿಯಾಸ್, ಸೋನಾ ಮತ್ತು ಕಮಲ್‌ಜೀತ್ ಶರ್ಮಾ, ಅಲಿಯಾಸ್ ಕಮಲ್ ಮೂಲಕ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಕೆಟಿಎಫ್ ಮಾಡ್ಯೂಲ್‌ಗಳು (2021-2022)

ಗ್ಯಾಂಗ್​​ಸ್ಟರ್ ಬಿಕ್ರಮ್ ಬ್ರಾರ್ ಮತ್ತು ಕೆನಡಾ ಮೂಲದ ಗೋಲ್ಡಿ ಬ್ರಾರ್  ಅಕ್ಟೋಬರ್ 2021 ರಲ್ಲಿ 4-ಸದಸ್ಯ KTF ಮಾಡ್ಯೂಲ್ ಅನ್ನು ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸುವ ಕಾರ್ಯವನ್ನು ರೂಪಿದರು. ಅದಕ್ಕಾಗಿ ಮಾಡ್ಯೂಲ್ ಸದಸ್ಯರಿಗೆ ಡಲ್ಲಾ ಪಿಸ್ತೂಲ್ 9 ಎಂಎಂ ಎರಡು ಪಿಸ್ತೂಲ್, ಒಂದು .30 ಬೋರ್ ಪಿಸ್ತೂಲ್, ಒಂದು .315 ಬೋರ್ ನಾಲ್ಕು ಮ್ಯಾಗಜೀನ್‌ಗಳನ್ನು ನೀಡದ್ದ. ಬಿಟ್ಟು ಪ್ರೇಮಿ, ಶಮ್ಮಾ ಬದ್ಮಾಶ್ ಮತ್ತು ಸಿರ್ಸಾ ಮೂಲದ ಡಿಎಸ್‌ಎಸ್ ಅನುಯಾಯಿ ಶಕ್ತಿ ಸಿಂಗ್ ಅವರನ್ನು ಗುರಿಯಾಗಿಸಲು ಇದನ್ನು ಮಾಡಲಾಗಿತ್ತು.

ಜನವರಿ 2022 ರಲ್ಲಿ ಹರ್ದೀಪ್ ಸಿಂಗ್ ನಿಜ್ಜರ್  ಸಹಯೋಗದೊಂದಿಗೆ 4-ಸದಸ್ಯ KTF ಮಾಡ್ಯೂಲ್ ಅನ್ನು ಸ್ಥಾಪಿಸಿ, ಗ್ರೆನೇಡ್ ದಾಳಿಯನ್ನು ನಡೆಸುವ ಕಾರ್ಯವನ್ನು ನಿರ್ವಹಿಸಲಾಗಿದೆ. ಮೊಗಾದ ಎಸ್‌ಎಸ್‌ಪಿ ಹರ್ಮನ್‌ಬೀರ್ ಸಿಂಗ್ ಗಿಲ್ ಮತ್ತು ಮೊಗಾದಲ್ಲಿ ಅಪರಾಧ ತನಿಖಾ ಸಂಸ್ಥೆ (ಸಿಐಎ) ವಿಭಾಗದ ಇಬ್ಬರು ಇನ್ಸ್‌ಪೆಕ್ಟರ್‌ಗಳನ್ನು ಗುರಿಯಾಗಿಸಲು ಅರ್ಶ್ ದೀಪ್ ಡಲ್ಲಾ ಮತ್ತು ಹರ್ದೀಪ್ ನಿಜ್ಜರ್ ಯೋಜಿಸಿದ್ದರು.

2021 ರ ನವೆಂಬರ್/ಡಿಸೆಂಬರ್‌ನಲ್ಲಿ ಗುರ್ಜಂತ್ ಸಿಂಗ್ ಜಾಂಟಿ ಮತ್ತು ಲಖ್ಬೀರ್ ಸಿಂಗ್ ರೋಡ್ ಅವರ ಸಹಯೋಗದೊಂದಿಗೆ ಹರ್ಯಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ 4-ಸದಸ್ಯ KTF ಮಾಡ್ಯೂಲ್ ಅನ್ನು ರಚಿಸಲಾಯಿತು. ಜನವರಿ 2022 ರಲ್ಲಿ ಅರ್ಶ್ ಡಲ್ಲಾ ನಿರ್ದೇಶನದ ಮೇರೆಗೆ, ಆತನ ಸಹವರ್ತಿ ಗುರುಪ್ರೀತ್ ಸಿಂಗ್, ಅಲಿಯಾಸ್ ಗೋಪಿ ಪಂಜಾಬ್‌ನಿಂದ ಪಾಕಿಸ್ತಾನಕ್ಕೆ ಮಾಜಿ ನುಸುಳಲು ಚಂಡೀಗಢದಿಂದ ಸುಖಪ್ರೀತ್ ಸಿಂಗ್ ಅಲಿಯಾಸ್ ಸುಖ್ ಗ್ರೀಸ್ ನ್ನು ಕರೆದುಕೊಂಡು ಬಂದಿದ್ದು, ರಾಜಸ್ಥಾನದ ಬಾರ್ಮರ್‌ನಲ್ಲಿ ತನ್ನ ಅಡಗುತಾಣವನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸಿದರು.

ಜನವರಿ 2022 ರಲ್ಲಿ 7 ಸದಸ್ಯರ KTF ಮಾಡ್ಯೂಲ್ ಸ್ಥಾಪನೆಯು ಮೊಹಾಲಿ ಮೂಲದ ವಲಸೆ ಸಲಹೆಗಾರರಾದ ಪ್ರೀತ್ಪಾಲ್ ಸಿಂಗ್ ಬಾಬಿಯನ್ನು ಗುರಿಯಾಗಿಸುವ ಗುರಿಯನ್ನು ಹೊಂದಿದೆ. ಆಗಸ್ಟ್ 2022 ರಲ್ಲಿ ಬಂಧಿಸಲಾದ ಪಾಕ್-ಐಎಸ್ಐ-ಬೆಂಬಲಿತ ಮಾಡ್ಯೂಲ್ ರಚನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯ ಮೊದಲು ಭಯೋತ್ಪಾದಕ ದಾಳಿಗಳನ್ನು ಯೋಜಿಸಲಾಗಿದೆ.

ಇದನ್ನೂ ಓದಿ: ಅಮೆರಿಕವು ಭಾರತ-ಕೆನಡಾದಲ್ಲಿ ಯಾವುದಾದರೂ ಒಂದು ದೇಶವನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದರೆ ನನ್ನ ಆಯ್ಕೆ ಇದು: ರುಬಿನ್

ಸುಲಿಗೆ ಮತ್ತು ಹಿಂಸಾಚಾರ

ಆಗಸ್ಟ್ 2022 ರಲ್ಲಿ, ಅರ್ಶ್ ಡಲ್ಲಾ ಎನ್‌ಆರ್‌ಐ ಸುಖ್‌ಜಿಂದರ್ ಸಿಂಗ್‌ನಿಂದ ₹ 25 ಲಕ್ಷ ಸುಲಿಗೆ ಮಾಡಲು ಪ್ರಯತ್ನಿಸಿದ್ದು,   ಹಿಂಸಾಚಾರದ ಬೆದರಿಕೆ ಹಾಕಿದ್ದ. ಸುಖಜಿಂದರ್ ಇದಕ್ಕೆ ಬಗ್ಗದೇ ಇದ್ದಾಗ, ಅಪರಿಚಿತ ವ್ಯಕ್ತಿಗಳು ಅವರನ್ನು ಬೆದರಿಸುವ ಪ್ರಯತ್ನದಲ್ಲಿ ಸೆಪ್ಟೆಂಬರ್ 4, 2022 ರಂದು ಅವರ ನಿವಾಸದ ಮೇಲೆ ಗುಂಡು ಹಾರಿಸಿದರು.

ಡ್ರೋನ್-ಡ್ರಾಪ್ಡ್ ಮೊಗಾ ಮಾಡ್ಯೂಲ್

ಸೆಪ್ಟೆಂಬರ್ 2022 ರಲ್ಲಿ, ಅರ್ಶ್ ಡಲ್ಲಾ ಇತರರ ಸಹಯೋಗದೊಂದಿಗೆ, ಡ್ರೋನ್-ಡ್ರಾಪ್ಡ್ ಶಸ್ತ್ರಾಸ್ತ್ರ ರವಾನೆಗಳ ಸಹಾಯದಿಂದ 5-ಸದಸ್ಯ KTF ಮಾಡ್ಯೂಲ್ ಅನ್ನು ರಚಿಸಿದ್ದ ಎಂದು ದಾಖಲೆಗಳು ತೋರಿಸುತ್ತವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:37 pm, Sat, 23 September 23

ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ