ವಾರಣಾಸಿ: ₹451 ಕೋಟಿ ವೆಚ್ಚದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

PM Narendra Modi in Varanasi: 'ಹರಹರ್ ಮಹಾದೇವ್' ಘೋಷಣೆಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ, ಕ್ರೀಡಾಂಗಣವನ್ನು 'ಮಹಾದೇವ್'ಗೆ ಸಮರ್ಪಿಸಲಾಗುವುದು ಎಂದು ಹೇಳಿದರು. ‘ಮಹಾದೇವ’ ನಗರದ ಈ ಕ್ರೀಡಾಂಗಣವನ್ನು ‘ಮಹಾದೇವ’ನಿಗೆ ಸಮರ್ಪಿಸಲಾಗುವುದು. ಕಾಶಿಯಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣದಿಂದ ಇಲ್ಲಿನ ಕ್ರೀಡಾ ಪಟುಗಳಿಗೆ ಅನುಕೂಲವಾಗಲಿದೆ ಎಂದ ಅವರು, ಈ ಕ್ರೀಡಾಂಗಣ ಪೂರ್ವಾಂಚಲ ಪ್ರದೇಶದ ಸ್ಟಾರ್ ಆಗಲಿದೆ ಎಂದು ಹೇಳಿದ್ದಾರೆ.

ವಾರಣಾಸಿ: ₹451 ಕೋಟಿ ವೆಚ್ಚದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Sep 23, 2023 | 3:27 PM

ವಾರಣಾಸಿ ಸೆಪ್ಟೆಂಬರ್ 23: ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ (Varanasi) ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ (International Cricket Stadium)ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಭಾಷಣಕ್ಕೂ ಮುನ್ನ ಪ್ರಧಾನಿ ಮೋದಿ ಅವರಿಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಹಿ ಮಾಡಿದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ.

‘ಹರಹರ್ ಮಹಾದೇವ್’ ಘೋಷಣೆಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ, ಕ್ರೀಡಾಂಗಣವನ್ನು ‘ಮಹಾದೇವ್’ಗೆ ಸಮರ್ಪಿಸಲಾಗುವುದು ಎಂದು ಹೇಳಿದರು. ‘ಮಹಾದೇವ’ ನಗರದ ಈ ಕ್ರೀಡಾಂಗಣವನ್ನು ‘ಮಹಾದೇವ’ನಿಗೆ ಸಮರ್ಪಿಸಲಾಗುವುದು. ಕಾಶಿಯಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣದಿಂದ ಇಲ್ಲಿನ ಕ್ರೀಡಾ ಪಟುಗಳಿಗೆ ಅನುಕೂಲವಾಗಲಿದೆ ಎಂದ ಅವರು, ಈ ಕ್ರೀಡಾಂಗಣ ಪೂರ್ವಾಂಚಲ ಪ್ರದೇಶದ ಸ್ಟಾರ್ ಆಗಲಿದೆ ಎಂದು ಹೇಳಿದ್ದಾರೆ.

ಒಂದು ಕಾಲದಲ್ಲಿ ಪೋಷಕರು ಮಕ್ಕಳು ಆಟವಾಡುತ್ತಿದ್ದದ್ದಕ್ಕೆ ಬೈಯುತ್ತಿದ್ದರು, ಆದರೆ ಅದು ಇನ್ನು ಮುಂದೆ ಹಾಗಾಗುವುದಿಲ್ಲ , ಒಂದು ಪ್ರದೇಶದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ನಿರ್ಮಿಸಿದಾಗ, ಅದು ಯುವ ಕ್ರೀಡಾ ಪ್ರತಿಭೆಗಳಿಗೆ ಮಾತ್ರವಲ್ಲದೆ ಸ್ಥಳೀಯ ಆರ್ಥಿಕತೆಗೆ ಉತ್ತೇಜನಕಾರಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿಸರಳ ರೀತಿಯಲ್ಲಿ ಕಾನೂನು ರೂಪಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ: ಮೋದಿ

“ಪ್ರಥಮ ಬಾರಿಗೆ ಉತ್ತರ ಪ್ರದೇಶದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರಾಣಸಿಯ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ರಾಜ್ಯದ ಪ್ರತಿಯೊಬ್ಬ ಕ್ರೀಡಾ ಉತ್ಸಾಹಿ ಪರವಾಗಿ ನಾನು ಪ್ರಧಾನಿ ಮೋದಿಯವರನ್ನು ಸ್ವಾಗತಿಸುತ್ತೇನೆ” ಎಂದು ಸಿಎಂ ಆದಿತ್ಯನಾಥ್ ಹೇಳಿದ್ದಾರೆ.

ಮೋದಿ ಭಾಷಣದ ಮುಖ್ಯಾಂಶಗಳು

  1. ಇಂದು ವಾರಣಾಸಿಗೆ ಭೇಟಿ ನೀಡುವ ಮತ್ತೊಂದು ಅವಕಾಶ ಸಿಕ್ಕಿದೆ. ಕಾಶಿಗೆ ಭೇಟಿ ನೀಡಿದಾಗ ನಮಗೆ ಸಿಗುವ ಆನಂದ ಅಪೂರ್ವವಾದುದು.
  2. ಒಂದು ಶಿವಶಕ್ತಿ ಬಿಂದು ಚಂದ್ರನ ಮೇಲಿದೆ, ಒಂದು ಕಾಶಿಯಲ್ಲಿದೆ. ಇಂದು ನಾನು ಮತ್ತೊಮ್ಮೆ ಭಾರತದ ವಿಜಯಕ್ಕಾಗಿ (ಚಂದ್ರಯಾನ-3 ರ ಯಶಸ್ಸಿಗೆ) ದೇಶದ ಜನರನ್ನು ಅಭಿನಂದಿಸುತ್ತೇನೆ.
  3. ಇಂದು ವಾರಣಾಸಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಇದು ಪೂರ್ವಾಂಚಲದ ಯುವಕರಿಗೆ ವರದಾನವಾಗಲಿದೆ.
  4. ಕ್ರಿಕೆಟ್ ಮೂಲಕ ಇಡೀ ವಿಶ್ವವೇ ಭಾರತದೊಂದಿಗೆ ಸಂಪರ್ಕ ಸಾಧಿಸುತ್ತಿದೆ. ಹೊಸ ದೇಶಗಳು ಈಗ ಕ್ರಿಕೆಟ್ ಆಡಲು ಮುಂದೆ ಬರುತ್ತಿವೆ.
  5. ‘ಮಹಾದೇವ’ ನಗರದ ಈ ಕ್ರೀಡಾಂಗಣವನ್ನು ‘ಮಹಾದೇವ’ ಅವರಿಗೇ ಸಮರ್ಪಿಸಲಾಗುವುದು. ಕಾಶಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣದಿಂದ ಇಲ್ಲಿನ ಕ್ರೀಡಾ ಪಟುಗಳಿಗೆ ಅನುಕೂಲವಾಗಲಿದೆ. ಈ ಕ್ರೀಡಾಂಗಣವು ಪೂರ್ವಾಂಚಲ್ ಪ್ರದೇಶದ ಸ್ಟಾರ್ ಆಗಲಿದೆ.
  6. ಕ್ರೀಡೆಯಲ್ಲಿ ಭಾರತ ಕಾಣುತ್ತಿರುವ ಯಶಸ್ಸು ಕ್ರೀಡೆಯ ಬಗೆಗಿನ ದೃಷ್ಟಿಕೋನದಲ್ಲಿನ ಬದಲಾವಣೆಗೆ ಸಾಕ್ಷಿಯಾಗಿದೆ. ಸರ್ಕಾರ ಎಲ್ಲಾ ಹಂತದಲ್ಲೂ ಕ್ರೀಡಾಪಟುಗಳಿಗೆ ಸಹಾಯ ಮಾಡುತ್ತಿದೆ.

ವಾರಣಾಸಿಯ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಹೇಗಿದೆ?

  1. ವಾರಣಾಸಿಯ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ 121 ಕೋಟಿ ಭೂಮಿಯಲ್ಲಿ ನಿರ್ಮಾಣವಾಗಲಿದೆ.
  2. ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಅಂದಾಜು 330 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
  3. ಈ ಕ್ರೀಡಾಂಗಣವು ಏಕಕಾಲದಲ್ಲಿ ಸುಮಾರು 30,000 ಜನರಿಗೆ ಅವಕಾಶ ಕಲ್ಪಿಸುತ್ತದೆ.
  4. ಮೇಲ್ಛಾವಣಿಯ ಕವರ್‌ಗಳು ಅರ್ಧಚಂದ್ರಾಕಾರದ ಆಕಾರದಲ್ಲಿರುತ್ತವೆ, ಫ್ಲಡ್‌ಲೈಟ್‌ಗಳು ತ್ರಿಶೂಲದ ಆಕಾರದಲ್ಲಿರುತ್ತವ. ಬಿಲ್ವಪತ್ರೆ  ಹೋಲುವ ಮಾದರಿಗಳು ಮತ್ತು ರಚನೆಗಳಲ್ಲಿ ಒಂದು ಡಮರು ಆಕಾರದಲ್ಲಿರುತ್ತವೆ.
  5. ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ವಾರಣಾಸಿಯ ಘಾಟ್‌ಗಳ ಮೆಟ್ಟಿಲುಗಳನ್ನು ಹೋಲುತ್ತದೆ.
  6. ರಜತಲಾಬ್ ಪ್ರದೇಶದ ರಿಂಗ್ ರೋಡ್ ಬಳಿ ಇರುವ ಇದು ಡಿಸೆಂಬರ್ 2025 ರ ವೇಳೆಗೆ ಸಿದ್ಧವಾಗುವ ಸಾಧ್ಯತೆಯಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Sat, 23 September 23