Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕವು ಭಾರತ-ಕೆನಡಾದಲ್ಲಿ ಯಾವುದಾದರೂ ಒಂದು ದೇಶವನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದರೆ ನನ್ನ ಆಯ್ಕೆ ಇದು: ರುಬಿನ್

ಖಲಿಸ್ತಾನಿ ಉಗ್ರ ಹರ್ದೀಪ್​ ಸಿಂಗ್ ನಿಜ್ಜರ್(Hardeep Singh Nijjar) ಹತ್ಯೆಯ ಬಳಿಕ ಕೆನಡಾ ಹಾಗೂ ಭಾರತದ ಸಂಬಂಧ ಬಿಗಡಾಯಿಸಿದೆ. ಕೆನಡಾವು ನಿಜ್ಜರ್ ಹತ್ಯೆಯ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಆರೋಪಿಸಿದೆ, ಅದನ್ನು ಭಾರತ ತಳ್ಳಿ ಹಾಕಿದೆ. ಈ ಕುರಿತು ಮಾಜಿ ಪೆಂಟಗಾನ್ ಅಧಿಕಾರಿ ಹಾಗೂ ಅಮೆರಿಕನ್ ಎಂಟರ್​ಪ್ರೈಸ್ ಇನ್​ಸ್ಟಿಟ್ಯೂಟ್​ನ ಮೈಕೆಲ್ ರುಬಿನ್ ಮಾತನಾಡಿದ್ದಾರೆ. ಒಂದೊಮ್ಮೆ ಅಮೆರಿಕವು ಭಾರತ ಹಾಗೂ ಕೆನಡಾದಲ್ಲಿ ಯಾವುದಾದರೂ ಒಂದು ದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಪರಿಸ್ಥಿತಿ ಎದುರಾದರೆ ನಾನು ಭಾರತವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಅಮೆರಿಕವು ಭಾರತ-ಕೆನಡಾದಲ್ಲಿ ಯಾವುದಾದರೂ ಒಂದು ದೇಶವನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದರೆ ನನ್ನ ಆಯ್ಕೆ ಇದು: ರುಬಿನ್
ನರೇಂದ್ರ ಮೋದಿ
Follow us
ನಯನಾ ರಾಜೀವ್
|

Updated on:Sep 23, 2023 | 11:12 AM

ಖಲಿಸ್ತಾನಿ ಉಗ್ರ ಹರ್ದೀಪ್​ ಸಿಂಗ್ ನಿಜ್ಜರ್(Hardeep Singh Nijjar) ಹತ್ಯೆಯ ಬಳಿಕ ಕೆನಡಾ ಹಾಗೂ ಭಾರತದ ಸಂಬಂಧ ಬಿಗಡಾಯಿಸಿದೆ. ಕೆನಡಾವು ನಿಜ್ಜರ್ ಹತ್ಯೆಯ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಆರೋಪಿಸಿದೆ, ಅದನ್ನು ಭಾರತ ತಳ್ಳಿ ಹಾಕಿದೆ. ಈ ಕುರಿತು ಮಾಜಿ ಪೆಂಟಗಾನ್ ಅಧಿಕಾರಿ ಹಾಗೂ ಅಮೆರಿಕನ್ ಎಂಟರ್​ಪ್ರೈಸ್ ಇನ್​ಸ್ಟಿಟ್ಯೂಟ್​ನ ಮೈಕೆಲ್ ರುಬಿನ್ ಮಾತನಾಡಿದ್ದಾರೆ. ಒಂದೊಮ್ಮೆ ಅಮೆರಿಕವು ಭಾರತ ಹಾಗೂ ಕೆನಡಾದಲ್ಲಿ ಯಾವುದಾದರೂ ಒಂದು ದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಪರಿಸ್ಥಿತಿ ಎದುರಾದರೆ ನಾನು ಭಾರತವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಉತ್ತಮ ರಾಜಕಾರಣಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ, ದೂರದೃಷ್ಟಿಯುಳ್ಳವರಾಗಿದ್ದಾರೆ ಎಲ್ಲವೂ ನಿಜ, ಆದರೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದೊಂದಿದೆ ದೀರ್ಘಾವಧಿಯ ಸಂಬಂಧವನ್ನು ಉಳಿಸಿಕೊಳ್ಳಲು ಯಾರೂ ಕೂಡ ಅಲ್ಪಾವಧಿಯ ರಾಜಕಾರಣ ಮಾಡಬಾರದು.

ಹರ್ದೀಪ್ ಸಿಂಗ್ ನಿಜ್ಜರ್ ಓರ್ವ ಭಯೋತ್ಪಾದಕ, ಭಾರತ ನಮಗೆ ಮುಖ್ಯವಾದದ್ದು, ಎರಡು ದೇಶಗಳ ಪರಸ್ಪರ ಸಂಬಂಧಗಳು ಕೂಡ ಪ್ರಮುಖವಾಗುತ್ತವೆ ಎಂದಿದ್ದಾರೆ. ಜಸ್ಟಿನ್ ಟ್ರುಡೊ ತುಂಬಾ ದಿನಗಳ ಕಾಲ ಪ್ರಧಾನಿಯಾಗಿರುವುದಿಲ್ಲ, ಅವರು ಅಧಿಕಾರದಿಂದ ಕೆಳಗಿಳಿದ ಬಳಿಕ ಮತ್ತೆ ಸಂಬಂಧವನ್ನು ಪುನರ್​ನಿರ್ಮಿಸಬಹುದು ಎಂದು ಹೇಳಿದ್ದಾರೆ.

ಭಾರತದ ವಿರುದ್ಧ ಕೆನಡಾ ಆರೋಪ ಅತ್ಯಂತ ಕಳವಳಕಾರಿ: ಆ್ಯಂಟನಿ ಬ್ಲಿಂಕೆನ್ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆಯಲ್ಲಿ ಭಾರತದ ಕೈವಾಡ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮಾಡಿರುವ ಆರೋಪದ ಬಗ್ಗೆ ಅಮೆರಿಕ ತೀವ್ರ ಆತಂಕಕ್ಕೆ ಒಳಗಾಗಿದೆ ಎಂದು ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಬಿಗಡಾಯಿಸಿದ ಕೆನಡಾ- ಭಾರತ ರಾಜತಾಂತ್ರಿಕ ಸಂಬಂಧ; ಯಾರ ಪರ ಅಮೆರಿಕ?

ಈ ವಿಚಾರವಾಗಿ ಭಾರತ ಸರ್ಕಾರದೊಂದಿಗೆ ಅಮೆರಿಕ ನೇರ ಸಂಪರ್ಕದಲ್ಲಿದೆ. ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್​ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಹಾಗೂ ಕೆನಡಾ ರಾಜತಾಂತ್ರಿಕ ವಿವಾದ ಮುಂದುವರೆದಿದೆ.

ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಜೂನ್ 18ರಂದು ನಡೆದ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್​ಗಳು ಶಾಮೀಲಾಗಿದ್ದಾರೆ ಎನ್ನುವ ಆರೋಪ ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:11 am, Sat, 23 September 23