ಬಿಗಡಾಯಿಸಿದ ಕೆನಡಾ- ಭಾರತ ರಾಜತಾಂತ್ರಿಕ ಸಂಬಂಧ; ಯಾರ ಪರ ಅಮೆರಿಕ?
India-Canada Row: ಇದು ನಮಗೆ ಆತಂಕದ ವಿಷಯವಾಗಿದೆ. ನಾವು ಗಂಭೀರವಾಗಿ ಪರಿಗಣಿಸುವ ವಿಷಯ. ದೇಶವನ್ನು ಲೆಕ್ಕಿಸದೆ ನಾವು ನಮ್ಮ ಕಾರ್ಯವನ್ನು ಮಾಡುತ್ತೇವೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಲ್ಲಿವಾನ್ ಹೇಳಿದ್ದಾರೆ. ಈ ರೀತಿಯ ಕ್ರಿಯೆಗಳಿಗೆ ನೀವು ಕೆಲವು ವಿಶೇಷ ವಿನಾಯಿತಿಗಳನ್ನು ಪಡೆಯುವುದಿಲ್ಲ. ದೇಶವನ್ನು ಲೆಕ್ಕಿಸದೆ, ನಾವು ನಮ್ಮ ಮೂಲಭೂತ ತತ್ವಗಳ ಪರ ನಿಲ್ಲುತ್ತೇವೆ ಎಂದು ಅಮೆರಿಕ ಹೇಳಿದೆ.
ವಾಷಿಂಗ್ಟನ್ ಸೆಪ್ಟೆಂಬರ್ 22: ಕೆನಡಾದಲ್ಲಿ (Canada) ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಭಾರತದ ಸರ್ಕಾರಿ ಏಜೆಂಟರಿಗೆ ಸಂಪರ್ಕವಿದೆ ಎಂದು ಜಸ್ಟಿನ್ ಟ್ರುಡೊ (Justin Trudeau) ಹೇಳಿದ ನಂತರ ಅಮೆರಿಕವು ಉನ್ನತ ಮಟ್ಟದಲ್ಲಿ ಭಾರತೀಯರೊಂದಿಗೆ ಸಂಪರ್ಕದಲ್ಲಿದೆ. ಈ ವಿಷಯದಲ್ಲಿ ವಾಷಿಂಗ್ಟನ್ ಯಾವುದೇ “ವಿಶೇಷ ವಿನಾಯಿತಿ” ನೀಡುತ್ತಿಲ್ಲ ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ (Jake Sullivan) ಗುರುವಾರ ಹೇಳಿದ್ದಾರೆ. ಭಾರತದೊಂದಿಗೆ ತನ್ನ ಸಂಬಂಧವನ್ನು ಬಲಪಡಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಅಧ್ಯಕ್ಷ ಜೋ ಬೈಡನ್ ಈ ವರ್ಷದ ಆರಂಭದಲ್ಲಿ ಶ್ವೇತಭವನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯ ಪ್ರವಾಸಕ್ಕಾಗಿ ಆಹ್ವಾಸಿದ್ದರು.
ಘಟನೆಯ ಬಗ್ಗೆ ಅಮೆರಿಕದ ಕಳವಳವು ಆ ಪ್ರಕ್ರಿಯೆಯನ್ನು ಅಡ್ಡಿಪಡಿಸಬಹುದೇ ಎಂದು ಕೇಳಿದಾಗ, ಸುಲ್ಲಿವಾನ್ ಅವರು, ಯಾವ ದೇಶಕ್ಕೆ ಪರಿಣಾಮ ಬೀರುತ್ತದೆ ಎಂಬುದನ್ನು ಲೆಕ್ಕಿಸದೆ ಅಮೆರಿಕ ತನ್ನ ತತ್ವಗಳ ಪರವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಇದು ನಮಗೆ ಆತಂಕದ ವಿಷಯವಾಗಿದೆ. ನಾವು ಗಂಭೀರವಾಗಿ ಪರಿಗಣಿಸುವ ವಿಷಯ. ದೇಶವನ್ನು ಲೆಕ್ಕಿಸದೆ ನಾವು ನಮ್ಮ ಕಾರ್ಯವನ್ನು ಮಾಡುತ್ತೇವೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಲ್ಲಿವಾನ್ ಹೇಳಿದ್ದಾರೆ. ಈ ರೀತಿಯ ಕ್ರಿಯೆಗಳಿಗೆ ನೀವು ಕೆಲವು ವಿಶೇಷ ವಿನಾಯಿತಿಗಳನ್ನು ಪಡೆಯುವುದಿಲ್ಲ. ದೇಶವನ್ನು ಲೆಕ್ಕಿಸದೆ, ನಾವು ನಮ್ಮ ಮೂಲಭೂತ ತತ್ವಗಳ ಪರ ನಿಲ್ಲುತ್ತೇವೆ. ಕೆನಡಾದಂತಹ ಮಿತ್ರರಾಷ್ಟ್ರಗಳು ತಮ್ಮ ಕಾನೂನು ಜಾರಿ ಮತ್ತು ರಾಜತಾಂತ್ರಿಕ ಪ್ರಕ್ರಿಯೆಯನ್ನು ಮುಂದುವರಿಸುವಾಗ ನಾವು ಅವರೊಂದಿಗೆ ನಿಕಟವಾಗಿ ಸಮಾಲೋಚಿಸುತ್ತೇವೆ ಎಂದು ಹೇಳಿದ್ದಾರೆ.
#WATCH | On India-Canada row, NSA Jake Sullivan says, “As soon as we heard from the Canadian PM publically about the allegation, we went out publically and expressed our deep concerns about them, our support for the law enforcement process to get to the bottom of exactly what… pic.twitter.com/gpsO5Cq9zP
— ANI (@ANI) September 21, 2023
ಜೂನ್‌ನಲ್ಲಿ ಸಿಖ್ ದೇವಾಲಯದ ಹೊರಗೆ ನಡೆದ ಹರ್ದೀಪ್ ಸಿಂಗ್ ನಿಜ್ಜರ್, 45 ರ ಹತ್ಯೆಗೆ ಭಾರತೀಯ ಸರ್ಕಾರಿ ಏಜೆಂಟರನ್ನು ಸಂಪರ್ಕಿಸುವ ವಿಶ್ವಾಸಾರ್ಹ ಆರೋಪಗಳ ಬಗ್ಗೆ ಫಾಲೋ ಮಾಡುತ್ತಿದೆ ಎಂದು ಕೆನಡಾ ಸೋಮವಾರ ಹೇಳಿದೆ.
ಈ ವಿಷಯದ ಬಗ್ಗೆ ಅಮೆರಿಕ ಎರಡೂ ದೇಶಗಳೊಂದಿಗೆ ಸಂಪರ್ಕದಲ್ಲಿದೆ ಎಂದಿದ್ದಾರೆ ಸುಲ್ಲಿವಾನ್. ನಾವು ನಮ್ಮ ಕೆನಡಾದ ಸಹವರ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅದೇ ವೇಳೆ ನಾವು ಭಾರತ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ ಸುಲ್ಲಿವಾನ್.
ಈ ವಿಷಯದ ಬಗ್ಗೆ ಕೆನಡಾ ಮತ್ತು ಅಮೆರಿಕ ನಡುವೆ ಅಂತರವಿದೆ ಎಂದು ಸೂಚಿಸುವ ವರದಿಗಳನ್ನು ತಾನು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಮೆರಿಕ ಮತ್ತು ಕೆನಡಾ ನಡುವೆ ಬಿರುಕು ಇದೆ ಎಂಬ ಕಲ್ಪನೆಯನ್ನು ನಾನು ದೃಢವಾಗಿ ತಿರಸ್ಕರಿಸುತ್ತೇನೆ. ಆರೋಪಗಳ ಬಗ್ಗೆ ನಮಗೆ ಆಳವಾದ ಕಳವಳವಿ. ಈ ತನಿಖೆಯನ್ನು ಮುಂದುವರಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Fri, 22 September 23