ಕರುವನ್ನೂರ್ ಬ್ಯಾಂಕ್ ಹಗರಣದಲ್ಲಿ ದೊಡ್ಡ ನಾಯಕರು ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬ ಭಯ ಸಿಪಿಎಂಗೆ ಇದೆ: ವಿಡಿ ಸತೀಶನ್

Karuvannur bank scam: ಕೇರಳದಲ್ಲಿ ಎರಡನೇ ಬಾರಿ ಅಧಿಕಾರ ನಡೆಸುವ ಅವಕಾಶ ಸಿಕ್ಕ ನಂತರ ಎಲ್‌ಡಿಎಫ್ ಅವರು ಮಾಡಿದ ಎಲ್ಲಾ ಕಾನೂನುಬಾಹಿರ ಚಟುವಟಿಕೆಗಳ ಪರಿಣಾಮಗಳನ್ನು ಎದುರಿಸುತ್ತಿದೆ. ಕರುವನ್ನೂರು ಮತ್ತು ಕಂದಾಳ ಸಹಕಾರಿ ಬ್ಯಾಂಕ್‌ನಲ್ಲಿ ಹೂಡಿಕೆದಾರರಿಗೆ ಹಣವನ್ನು ವಿತರಿಸಲು ರಾಜ್ಯವು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸತೀಶನ್ ಒತ್ತಾಯಿಸಿದ್ದಾರೆ.

ಕರುವನ್ನೂರ್ ಬ್ಯಾಂಕ್ ಹಗರಣದಲ್ಲಿ ದೊಡ್ಡ ನಾಯಕರು ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬ ಭಯ ಸಿಪಿಎಂಗೆ ಇದೆ: ವಿಡಿ ಸತೀಶನ್
ವಿಡಿ ಸತೀಶನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 27, 2023 | 4:32 PM

ತಿರುವನಂತಪುರಂ: ಕರುವನ್ನೂರ್ ಬ್ಯಾಂಕ್ ಹಗರಣದಲ್ಲಿ (Karuvannur bank scam) ಸಿಪಿಐ(ಎಂ) ಕೌನ್ಸಿಲರ್ ಪಿಆರ್ ಅರವಿಂದಾಕ್ಷನ್ ಅವರನ್ನು ಬಂಧಿಸಿದ ಒಂದು ದಿನದ ನಂತರ, ಹೆಚ್ಚಿನ ಸಿಪಿಐ(ಎಂ) (CPI(M)) ನಾಯಕರು ಇದರಲ್ಲಿ ಭಾಗಿಯಾಗಿದ್ದು, ಮುಂದಿನ ದಿನಗಳಲ್ಲಿ ಅವರ ಹೆಸರುಗಳು ಹೊರಬರಲಿವೆ ಕೇರಳದ ವಿರೋಧ ಪಕ್ಷ ಹೇಳಿದೆ. ಸಿಪಿಐ(ಎಂ) ನಾಯಕತ್ವ ಆತಂಕಕ್ಕೆ ಒಳಗಾಗಿದೆ ಎಂದು ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ (VD Satheesan) ಹೇಳಿಕೆ ನೀಡಿದ್ದಾರೆ. “ದೈತ್ಯ ಮರಗಳು ಬೀಳುವ ಭಯ ಸಿಪಿಐ(ಎಂ)ಗೆ ಇತ್ತು. ಈಗ ಗಾಳಿಗೆ ಮರಗಳು ಉರುಳಲಾರಂಭಿಸಿವೆ. ಅದರ ಬಗ್ಗೆ ಸಿಪಿಐ(ಎಂ) ಚಿಂತಿಸುತ್ತಿದೆ. ಹಣ ಕಳೆದುಕೊಂಡ ಬಡ ಜನರೊಂದಿಗೆ ಸಿಪಿಐ(ಎಂ) ಇಲ್ಲ. ಅವರು ಬ್ಯಾಂಕ್ ಹಗರಣಗಳಲ್ಲಿ ಆರೋಪಿಗಳನ್ನು ರಕ್ಷಿಸುವುದು ಮತ್ತು ಸಮರ್ಥಿಸುತ್ತಿರುವುದು ದುರದೃಷ್ಟಕರ ಎಂದು ಸತೀಶನ್ ಹೇಳಿದ್ದಾರೆ

ಕೇರಳದಲ್ಲಿ ಎರಡನೇ ಬಾರಿ ಅಧಿಕಾರ ನಡೆಸುವ ಅವಕಾಶ ಸಿಕ್ಕ ನಂತರ ಎಲ್‌ಡಿಎಫ್ ಅವರು ಮಾಡಿದ ಎಲ್ಲಾ ಕಾನೂನುಬಾಹಿರ ಚಟುವಟಿಕೆಗಳ ಪರಿಣಾಮಗಳನ್ನು ಎದುರಿಸುತ್ತಿದೆ. ಕರುವನ್ನೂರು ಮತ್ತು ಕಂದಾಳ ಸಹಕಾರಿ ಬ್ಯಾಂಕ್‌ನಲ್ಲಿ ಹೂಡಿಕೆದಾರರಿಗೆ ಹಣವನ್ನು ವಿತರಿಸಲು ರಾಜ್ಯವು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸತೀಶನ್ ಒತ್ತಾಯಿಸಿದ್ದಾರೆ.

‘ಸಿಪಿಐ(ಎಂ) ಹಲವು ಕೋಟಿ ಮೌಲ್ಯದ ಹಣವನ್ನು ಲಪಟಾಯಿಸಿದೆ’

ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮಾತನಾಡಿ, ರಾಜ್ಯದಲ್ಲಿ ಸಹಕಾರಿ ಬ್ಯಾಂಕ್‌ಗಳ ಮೂಲಕ ಸಿಪಿಐ(ಎಂ)ನ ಹಿರಿಯ ನಾಯಕರು ಹಲವು ಕೋಟಿ ಮೌಲ್ಯದ ಹಣವನ್ನು ಲಪಟಾಯಿಸಿದ್ದಾರೆ. ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರಗಳನ್ನು ನಾಶ ಮಾಡುತ್ತಿದೆ ಎಂದು ಸಿಪಿಐ(ಎಂ) ಹೇಳುತ್ತಿದೆ. ವಾಸ್ತವವಾಗಿ, ಸಹಕಾರಿ ಕ್ಷೇತ್ರದ ನಾಶಕ್ಕೆ ಸಿಪಿಐ(ಎಂ) ಏಕೈಕ ಕಾರಣ’ ಎಂದು ಅವರು ಹೇಳಿದ್ದಾರೆ.

ಸಹಕಾರಿ ಬ್ಯಾಂಕ್‌ಗಳನ್ನು ಸಿಪಿಐ(ಎಂ) ಅಕ್ರಮ ವ್ಯವಹಾರಗಳಿಗೆ ಬಳಸಿಕೊಂಡಿದೆ. ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಕೇರಳದ ಕ್ರೈಂ ಬ್ರಾಂಚ್ ವಿಫಲವಾಗಿದೆ. ‘ತಮ್ಮ ಸಂಪುಟದ ಸಚಿವರು, ಸಂಸದರು ಹಾಗೂ ಮೂವರು ಜಿಲ್ಲಾ ಕಾರ್ಯದರ್ಶಿಗಳು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ ಎಂಬುದು ಸಿಎಂಗೆ ಗೊತ್ತಿತ್ತು. ಆದರೆ, ಸಿಎಂ ನೇತೃತ್ವದ ಪೊಲೀಸರು ಕೆಲವು ಬ್ಯಾಂಕ್ ಅಧಿಕಾರಿಗಳನ್ನು ಮಾತ್ರ ಆರೋಪಿಗಳೆಂದು ಪಟ್ಟಿ ಮಾಡಿದ್ದಾರೆ ಸುರೇಂದ್ರನ್ ಹೇಳಿದ್ದಾರೆ.

ಇದನ್ನೂ ಓದಿ:  ಕೇರಳ: ಹಲ್ಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ಸಮಾಧಿ ಮಾಡಿರುವ ಶಂಕೆ

ಇತರ ಸಹಕಾರಿ ಬ್ಯಾಂಕ್‌ಗಳಿಂದ ಹೆಚ್ಚಿನ ಹಗರಣಗಳು ಹೊರಬರುತ್ತಿವೆ. ಇದು ಸಾಮಾನ್ಯ ಜನರಿಗೆ ಒಂದು ಪ್ರಮುಖ ಕಾಳಜಿಯಾಗಿದೆ. ಈ ಪರಿಸ್ಥಿತಿಗೆ ಸಿಪಿಐ(ಎಂ) ಮತ್ತು ಸಿಎಂ ಪಿಣರಾಯಿ ವಿಜಯನ್‌ ಹೊಣೆ’ ಎಂದು ಸುರೇಂದ್ರನ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ