ಕೇರಳ: ಹಲ್ಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ಸಮಾಧಿ ಮಾಡಿರುವ ಶಂಕೆ
ನಾಪತ್ತೆಯಾಗಿರುವ ಇಬ್ಬರನ್ನು ಕೇರಳದಲ್ಲಿ ಸಮಾಧಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಾಲಕ್ಕಾಡ್ ಸಮೀಪದ ಕೊಡುಂಬು ಪಂಚಾಯತ್‌ನ ಭತ್ತದ ಗದ್ದೆಯಲ್ಲಿ ಸಮಾಧಿ ಪತ್ತೆಯಾಗಿದೆ. ಅದರಲ್ಲಿ ನಾಪತ್ತೆಯಾಗಿರುವ ಇಬ್ಬರು ಸಮಾಧಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ನಾಪತ್ತೆಯಾದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಗದ್ದೆಯಲ್ಲಿ ಸಮಾಧಿ ಇರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ಕಸಬಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಸಣ್ಣ ಹಲ್ಲೆ ಪ್ರಕರಣದಲ್ಲಿ ಇಬ್ಬರೂ ಆರೋಪಿಗಳಾಗಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಆರೋಪಿಗಳು ಸೋಮವಾರ ರಾತ್ರಿ ಈ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು ಮತ್ತು ನಂತರ ನಾಪತ್ತೆಯಾಗಿದ್ದಾರೆ.
ಅಲ್ಲೇ ಸಮೀಪದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ, ಬುಧವಾರವಷ್ಟೇ ತಹಶೀಲ್ದಾರ್ ಸಮ್ಮುಖದಲ್ಲಿ ಸ್ಥಳದ ಹೆಚ್ಚಿನ ವಿಧಿವಿಜ್ಞಾನ ಪರಿಶೀಲನೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ತುಮಕೂರು: ಒಂದೇ ಗ್ರಾಮದ 4 ಮಕ್ಕಳು ನಾಪತ್ತೆ, ಪೋಷಕರಲ್ಲಿ ಆತಂಕ
ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ, ಸೋಮವಾರ ರಾತ್ರಿ ಭತ್ತದ ಗದ್ದೆಯಲ್ಲಿ ಮಾಲೀಕ ಇದ್ದ ಅನುಮಾನದ ಮೇಲೆ ಅವರ ವಿಚಾರಣೆಯನ್ನು ನಡೆಸಲಾಗುತ್ತಿದೆ.
ವನ್ಯಪ್ರಾಣಿಗಳನ್ನು ತಡೆಯಲು ಮೈದಾನದಲ್ಲಿ ವಿದ್ಯುತ್ ಬೇಲಿ ಹಾಕಲಾಗಿದ್ದು, ವಿದ್ಯುತ್ ಸ್ಪರ್ಶವಾಗಿರುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ