
ರಾಮ್ಟೆಕ್, ಜನವರಿ 14: ಮನೆಯಲ್ಲಿ ನೀರವ ಮೌನ, ಸಮಯ ನಿಂತಂತೆ ಎಲ್ಲರಿಗೂ ಭಾಸ, ಕುರ್ಚಿಗಳನ್ನು ಜೋಡಿಸಲಾಗಿತ್ತು. ಅಂತ್ಯಕ್ರಿಯೆ(Funeral)ಗೆ ಬೇಕಾದ ಸಾಮಗ್ರಿಗಳನ್ನು ಜೋಡಿಸಿ ಇಡಲಾಗಿತ್ತು. ಮತ್ತೊಂದು ಮೂಲೆಯಲ್ಲಿ ಬಿಳಿ ಬಟ್ಟೆಯಲ್ಲಿ ದೇಹವು ಚಲನರಹಿತವಾಗಿ ಮಲಗಿತ್ತು. ಇನ್ನೊಂದು ಮೂಲೆಯಲ್ಲಿ ಸಂಬಂಧಿಕರು ಕಣ್ಣು ಒರೆಸುತ್ತಾ ಮಹಿಳೆಯ ಒಳ್ಳೆಯತನವನ್ನು ಕೊಂಡಾಡುತ್ತಿದ್ದರು. ದೂರದ ಸಂಬಂಧಿಕರು ಒಬ್ಬೊಬ್ಬರಾಗಿ ಅಂತಿಮ ದರ್ಶನಕ್ಕೆಂದು ಬರುತ್ತಿದ್ದರು.
ದೇಹವನ್ನು ಸುತ್ತಿ ಇಡಲಾಗಿತ್ತು, ಹೆಬ್ಬೆರಳುಗಳನ್ನು ಕಟ್ಟಲಾಗಿತ್ತು, ಮೂಗಿನಲ್ಲಿ ಹತ್ತಿ ಇಡಲಾಗಿತ್ತು, ಆದರೆ ಇದ್ದಕ್ಕಿದ್ದಂತೆ ದೇಹ ಚಲಿಸಿದಂತೆ ಅನಿಸಿತ್ತು. ಒಂದೆಡೆ ಖುಷಿಯಾದರೆ ಮತ್ತೊಂದೆಡೆ ನಿಜವೋ ಸುಳ್ಳೋ ಎನ್ನುವ ಆತಂಕ ಕಾಡಿತ್ತು.
ಈ ಘಟನೆ ನಾಗ್ಪುರ ಜಿಲ್ಲೆಯ ರಾಮ್ಟೆಕ್ನಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಾರ್ಡ್ನಲ್ಲಿ ನಡೆದಿದೆ. ಆ ಮಹಿಳೆಯ ಹೆಸರು ಗಂಗಾ ಬಾಯಿ ಸಾವ್ಜಿ ಸಖ್ರಾ, ಅವರಿ 103 ವರ್ಷ ವಯಸ್ಸಾಗಿದೆ. ಮಗಳೊಂದಿಗೆ ವಾಸವಿದ್ದಾರೆ. ಅವರು ಎರಡು ತಿಂಗಳಿನಿಂದ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರು. ಪ್ರತಿದಿನ ಕೇವಲ ಎರಡೇ ಎರಡು ಚಮಚ ನೀರು ಮಾತ್ರ ಸೇವಿಸುತ್ತಿದ್ದರು.
ಮತ್ತಷ್ಟು ಓದಿ:ನಂಜನಗೂಡು: ಯುವಕನ ಬಳಿ ‘ನನ್ನ ಕರ್ಕೊಂಡೋಗಿ ಮದುವೆಯಾಗು’ ಎನ್ನುತ್ತಿದ್ದ ಅಪ್ರಾಪ್ತೆ ನಿಗೂಢ ಸಾವು
ಸೋಮವಾರ ಸಂಜೆ ಅವರ ದೇಹ ಸಂಪೂರ್ಣವಾಗಿ ಚಲನೆಯನ್ನೇ ನಿಲ್ಲಿಸಿತ್ತು. ಆಕೆ ಸತ್ತಿದ್ದಾಳೆಂದು ಪರಿಗಣಿಸಿ ಎಲ್ಲಾ ಅಂತ್ಯಕ್ರಿಯೆ ವಿಧಿ ವಿಧಾನಗಳನ್ನು ಪ್ರಾರಂಭಿಸಲಾಯಿತು. ಮರುದಿನ ಬೆಳಗ್ಗೆ, ಅಂತ್ಯಕ್ರಿಯೆಯ ಮೆರವಣಿಗೆ ನಿಗದಿಯಾಗಿತ್ತು, ಮತ್ತು ಅಂತ್ಯಕ್ರಿಯೆಯ ಸಾಮಗ್ರಿಗಳು ಮತ್ತು ಶವವಾಹನವನ್ನು ಸಹ ಕರೆಯಲಾಗಿತ್ತು.
ಸಂಜೆ 7 ಗಂಟೆಯ ಸುಮಾರಿಗೆ, ಸಂಬಂಧಿಕರು ಮತ್ತು ಪರಿಚಯಸ್ಥರು ಮನೆಯಲ್ಲಿ ಜಮಾಯಿಸಿದ್ದಾಗ, ಗಂಗಾಬಾಯಿಯ ಕಾಲು ಇದ್ದಕ್ಕಿದ್ದಂತೆ ಅಲುಗಾಡಿತ್ತು. ಮೊಮ್ಮಗ ರಾಕೇಶ್ ಸಖ್ರಾ ಇದನ್ನು ಗಮನಿಸಿದ ತಕ್ಷಣ, ಅವನು ಅವರ ಕಾಲಿಗೆ ಕಟ್ಟಿದ್ದ ದಾರವನ್ನು ಕತ್ತರಿಸಿದ್ದಾರೆ. ಗಂಗಾಬಾಯಿ ಭಾರವಾಗಿ ಉಸಿರಾಡಲು ಪ್ರಾರಂಭಿಸಿದ್ದರು.
ಗಂಗಾಬಾಯಿಯವರ ಅಂತ್ಯಕ್ರಿಯೆಗಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ಬಾಲಘಾಟ್ ಸೇರಿದಂತೆ ದೂರದ ಸ್ಥಳಗಳಿಂದ ಬಂದಿದ್ದ ಸಂಬಂಧಿಕರು ರಾಮ್ಟೆಕ್ ತಲುಪಿದರು ಮತ್ತು ಅವರು ಜೀವಂತವಾಗಿರುವುದನ್ನು ನೋಡಿ ಅಚ್ಚರಿಪಟ್ಟರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ