AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಭಾರತದಲ್ಲಿ ಮಹಿಳೆಯರು ಗುಲಾಮರಾಗಿ, ಮಕ್ಕಳನ್ನು ಹೆರಲು ಮಾತ್ರ ಸೀಮಿತರಾಗಿದ್ದಾರೆ; ಡಿಎಂಕೆ ಸಂಸದ ವಿವಾದ

ದಕ್ಷಿಣ ಭಾರತದಲ್ಲಿ ಹೆಣ್ಣು ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಲಾಗುತ್ತದೆ. ಆದರೆ, ಉತ್ತರ ಭಾರತದಲ್ಲಿ ಅವರನ್ನು ಗುಲಾಮರಂತೆ ಇರಿಸಲಾಗಿದೆ. ಉತ್ತರ ಭಾರತದಲ್ಲಿ ಹೆಣ್ಣುಮಕ್ಕಳನ್ನು ಮನೆಯಲ್ಲೇ ಇರುವಂತೆ ಮಾಡಿ, ಮಕ್ಕಳನ್ನು ಹೆರಲು ಮಾತ್ರ ಸೀಮಿತಗೊಳಿಸಲಾಗುತ್ತಿದೆ ಎಂದು ಡಿಎಂಕೆ ನಾಯಕ ದಯಾನಿಧಿ ಮಾರನ್ ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಉತ್ತರ ಭಾರತದಲ್ಲಿ ಮಹಿಳೆಯರು ಗುಲಾಮರಾಗಿ, ಮಕ್ಕಳನ್ನು ಹೆರಲು ಮಾತ್ರ ಸೀಮಿತರಾಗಿದ್ದಾರೆ; ಡಿಎಂಕೆ ಸಂಸದ ವಿವಾದ
Dayanidhi Maran
ಸುಷ್ಮಾ ಚಕ್ರೆ
|

Updated on: Jan 14, 2026 | 5:17 PM

Share

ನವದೆಹಲಿ, ಜನವರಿ 14: ಚೆನ್ನೈ, ಜನವರಿ 14: ಡಿಎಂಕೆ ಸಂಸದ ದಯಾನಿಧಿ ಮಾರನ್ ಉತ್ತರ ಭಾರತದ ಮಹಿಳೆಯರು ಮತ್ತು ತಮಿಳುನಾಡಿನ ಮಹಿಳೆಯರನ್ನು ಹೋಲಿಸುವ ಹೇಳಿಕೆ ನೀಡಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದಾರೆ. ಚೆನ್ನೈ ಸೆಂಟ್ರಲ್‌ನಿಂದ 4 ಬಾರಿ ಸಂಸದರಾಗಿರುವ ದಯಾನಿಧಿ ಮಾರನ್ (Dayanidhi Maran) ಇಂದು ಸರ್ಕಾರಿ ಮಹಿಳಾ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ತಮಿಳುನಾಡಿನಲ್ಲಿ ಮಹಿಳೆಯರಿಗೆ ಅಧ್ಯಯನ ಮಾಡಲು ಪ್ರೋತ್ಸಾಹ ನೀಡಲಾಗುತ್ತದೆ. ಆದರೆ, ಉತ್ತರ ಭಾರತದಲ್ಲಿ ಮಹಿಳೆಯರನ್ನು ಅಡುಗೆಮನೆಯಲ್ಲಿ ಕೆಲಸ ಮಾಡಲು ಮತ್ತು ಮಕ್ಕಳನ್ನು ಹೆರಲು ಸೀಮಿತಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

“ನಮ್ಮ ಹುಡುಗಿಯರು ಲ್ಯಾಪ್‌ಟಾಪ್‌ನೊಂದಿಗೆ ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದಿರಬೇಕು. ನೀವು ಸಂದರ್ಶನಕ್ಕೆ ಹಾಜರಾಗಲಿ ಅಥವಾ ಸ್ನಾತಕೋತ್ತರ ಪದವಿ ಪಡೆಯಲಿ ನಿಮ್ಮಲ್ಲಿ ಆ ಆತ್ಮವಿಶ್ವಾಸ ಖಂಡಿತ ಇದೆ. ಇಲ್ಲಿ ನಾವು ಹುಡುಗಿಯರಿಗೆ ಹೆಚ್ಚೆಚ್ಚು ಓದಲು ಮತ್ತು ಅಧ್ಯಯನ ಮಾಡಲು ಹೇಳುತ್ತೇವೆ. ಆದರೆ, ಉತ್ತರ ಭಾರತದಲ್ಲಿ ಹುಡುಗಿಯರಿಗೆ ಕೆಲಸಕ್ಕೆ ಹೋಗಬೇಡಿ, ಮನೆಯಲ್ಲಿರಿ, ಅಡುಗೆಮನೆಯಲ್ಲಿರಿ, ಮಗುವನ್ನು ಹೆರುವುದು ಮಾತ್ರ ನಿಮ್ಮ ಕೆಲಸ ಎಂದು ಹೇಳಲಾಗುತ್ತದೆ” ಎಂದು ದಯಾನಿಧಿ ಮಾರನ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ತಿರುಪ್ಪರನ್​ಕುಂದ್ರಂ ಬೆಟ್ಟಗಳ ಮೇಲೆ ದರ್ಗಾದ ಬಳಿ ದೀಪ ಬೆಳಗಲು ಹಿಂದೂಗಳಿಗೆ ಅನುಮತಿ, ತಮಿಳುನಾಡು ಸರ್ಕಾರಕ್ಕೆ ತೀವ್ರ ಮುಖಭಂಗ

“ಇಲ್ಲಿನ ನಿಮ್ಮ ಪ್ರಗತಿ ತಮಿಳುನಾಡಿನ ಪ್ರಗತಿಯಾಗಿದೆ. ಅದಕ್ಕಾಗಿಯೇ ಜಾಗತಿಕ ಕಂಪನಿಗಳು ಚೆನ್ನೈಗೆ ಬರುತ್ತವೆ. ಏಕೆಂದರೆ ಇಲ್ಲಿರುವ ಎಲ್ಲರೂ ತಮಿಳಿನಲ್ಲಿ ಮಾತ್ರವಲ್ಲ, ಇಂಗ್ಲಿಷ್‌ನಲ್ಲೂ ಶಿಕ್ಷಣ ಪಡೆದಿದ್ದಾರೆ. ಸರ್ಕಾರವು ಮಹಿಳೆಯರ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸದಾ ಆದ್ಯತೆ ನೀಡುತ್ತದೆ” ಎಂದು ದಯಾನಿಧಿ ಮಾರನ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್: ಯಾರು ಹೊರಕ್ಕೆ?
ಬಿಗ್​​ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್: ಯಾರು ಹೊರಕ್ಕೆ?
ಅಶ್ಲೀಲವಾಗಿ ನಿಂದಿಸಿ ಧಮ್ಕಿ ಹಾಕಿದ ಕೈ ಮುಖಂಡ, ಕಣ್ಣೀರಿಟ್ಟ ಕಮಿಷನರ್
ಅಶ್ಲೀಲವಾಗಿ ನಿಂದಿಸಿ ಧಮ್ಕಿ ಹಾಕಿದ ಕೈ ಮುಖಂಡ, ಕಣ್ಣೀರಿಟ್ಟ ಕಮಿಷನರ್
ಸಂಕ್ರಾಂತಿ ಸಂಭ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಸೌಮ್ಯ ರೆಡ್ಡಿ!
ಸಂಕ್ರಾಂತಿ ಸಂಭ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಸೌಮ್ಯ ರೆಡ್ಡಿ!
ರಾಹುಲ್​​ ಜೊತೆ ಪ್ರತ್ಯೇಕವಾಗಿ ಏನೇನು ಚರ್ಚೆ? ಡಿಕೆ ಹೇಳಿದ್ದೇನು ನೋಡಿ
ರಾಹುಲ್​​ ಜೊತೆ ಪ್ರತ್ಯೇಕವಾಗಿ ಏನೇನು ಚರ್ಚೆ? ಡಿಕೆ ಹೇಳಿದ್ದೇನು ನೋಡಿ
ಒಂದೇ ಬಸ್​​ಗೆ 2 ರಾಜ್ಯಗಳ ನಂಬರ್​​ ಪ್ಲೇಟ್​​ ಕಂಡು ಅಧಿಕಾರಿಗಳೇ ದಂಗು
ಒಂದೇ ಬಸ್​​ಗೆ 2 ರಾಜ್ಯಗಳ ನಂಬರ್​​ ಪ್ಲೇಟ್​​ ಕಂಡು ಅಧಿಕಾರಿಗಳೇ ದಂಗು
KSRTC ಬಸ್ಸಿನಡಿ ಸಿಲುಕಿದರೂ ಪ್ರಯಾಣಿಕ ಪವಾಡಸದೃಶ ಪಾರು!
KSRTC ಬಸ್ಸಿನಡಿ ಸಿಲುಕಿದರೂ ಪ್ರಯಾಣಿಕ ಪವಾಡಸದೃಶ ಪಾರು!
ವಿಡಿಯೋ: ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ
ವಿಡಿಯೋ: ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ
ನೆಲಮಂಗಲದಲ್ಲಿ ಚಿರತೆ ದಾಳಿ ಹೆಚ್ಚಳ
ನೆಲಮಂಗಲದಲ್ಲಿ ಚಿರತೆ ದಾಳಿ ಹೆಚ್ಚಳ
ಚೊಚ್ಚಲ ಪಂದ್ಯ... ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಕರೆಸಿದ ಕೋಚ್..!
ಚೊಚ್ಚಲ ಪಂದ್ಯ... ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಕರೆಸಿದ ಕೋಚ್..!
JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​
JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​