ಮಿಲಿಟರಿ ಸಾಮರ್ಥ್ಯ ಬಲಗೊಳಿಸಲು 7965 ಕೋಟಿ ರೂ.ಮೌಲ್ಯದ ರಕ್ಷಣಾ ಉಪಕರಣಗಳ ಖರೀದಿಗೆ ಅನುಮೋದನೆ

| Updated By: Lakshmi Hegde

Updated on: Nov 03, 2021 | 3:20 PM

ರಕ್ಷಣಾ ಸ್ವಾಧೀನ ಮಂಡಳಿಯ (DAC)ಸಭೆಯಲ್ಲಿ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದೆ.  12 ಹೆಲಿಕಾಪ್ಟರ್​ಗಳ ಖರೀದಿಗೆ ಒಪ್ಪಿಗೆ ನೀಡಿರುವ ಜತೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಿಂದ ಲಿಂಕ್ಸ್ ಯು 2 ನೇವಲ್ ಗನ್‌ಫೈರ್ ಕಂಟ್ರೋಲ್​ ಸಿಸ್ಟಂ ಖರೀದಿಗೂ ಇದೀಗ ಅನುಮೋದನೆ ಸಿಕ್ಕಿದೆ.

ಮಿಲಿಟರಿ ಸಾಮರ್ಥ್ಯ ಬಲಗೊಳಿಸಲು 7965 ಕೋಟಿ ರೂ.ಮೌಲ್ಯದ ರಕ್ಷಣಾ ಉಪಕರಣಗಳ ಖರೀದಿಗೆ ಅನುಮೋದನೆ
ರಾಜನಾಥ್ ಸಿಂಗ್​
Follow us on

ಮೇಕ್​ ಇನ್​ ಇಂಡಿಯಾ ಅಭಿಯಾನದಡಿ 7965 ಕೋಟಿ ರೂಪಾಯಿ ಮೌಲ್ಯದ ಸಶಸ್ತ್ರ ಮತ್ತು ಮಿಲಿಟರಿ ಉಪಕರಣಗಳು ಮತ್ತು ಸೇನಾ ಹೆಲಿಕಾಪ್ಟರ್​​ಗಳನ್ನು ಖರೀದಿ ಮಾಡಲು ಕೇಂದ್ರ ರಕ್ಷಣಾ ಸಚಿವಾಲಯ ಮಂಗಳವಾರ ಅನುಮೋದನೆ ನೀಡಿದೆ. ಹಿಂದೂಸ್ತಾನ್​ ಎರೋನಾಟಿಕ್ಸ್​ ಲಿಮಿಟೆಡ್​​​ ನಿಂದ 12 ಲೈಟ್​ ಯುಟಿಲಿಟಿ ಹೆಲಿಕಾಪ್ಟರ್​​​ಗಳ ಖರೀದಿಯನ್ನೂ ಈ ಅನುಮೋದನೆ ಒಳಗೊಂಡಿದೆ.  

ರಕ್ಷಣಾ ಸ್ವಾಧೀನ ಮಂಡಳಿಯ (DAC)ಸಭೆಯಲ್ಲಿ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದೆ.  12 ಹೆಲಿಕಾಪ್ಟರ್​ಗಳ ಖರೀದಿಗೆ ಒಪ್ಪಿಗೆ ನೀಡಿರುವ ಜತೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಿಂದ ಲಿಂಕ್ಸ್ ಯು 2 ನೇವಲ್ ಗನ್‌ಫೈರ್ ಕಂಟ್ರೋಲ್​ ಸಿಸ್ಟಂ ಖರೀದಿಗೂ ಇದೀಗ ಅನುಮೋದನೆ ಸಿಕ್ಕಿದೆ. ಈ ನೌಕಾ ಗನ್​ಫೈರ್​ಗಳು  ನೌಕಾ ಹಡಗುಗಳ ಟ್ರ್ಯಾಕಿಂಗ್​ ಮತ್ತು ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಎಂದು ಮಿಲಿಟರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಂದಹಾಗೆ ರಕ್ಷಣಾ ಸ್ವಾಧೀನ ಮಂಡಳಿ ಸಭೆ ನವೆಂಬರ್​ 2ರಂದು, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅಧ್ಯಕ್ಷತೆಯಲ್ಲಿ ನಡೆದಿತ್ತು. ಈ ಪ್ರಸ್ತಾವನೆ ಸಂಪೂರ್ಣವಾಗಿ ಮೇಕ್​ ಇನ್​ ಇಂಡಿಯಾ ಯೋಜನೆಯಡಿ ಇದೆ. ಭಾರತದಲ್ಲಿಯೇ ತಯಾರಾದ, ವಿನ್ಯಾಸಗೊಂಡ ಮತ್ತು ಅಭಿವೃದ್ಧಿಗೊಂಡಿರುವ ಮಿಲಿಟರಿ ಉಪಕರಣಗಳ ಖರೀದಿಯೇ ಆದ್ಯತೆಯಾಗಲಿದೆ.

ಇದನ್ನೂ ಓದಿ: ಕೋಲಾರ: ಸ್ಮಶಾನ ಹಬ್ಬ; ಸಕಲ ಸಂತರ ದಿನದ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಕೆಜಿಎಫ್

ಕಲಬುರಗಿ ಜಿಲ್ಲೆಯ ವಿವಿಧೆಡೆ ನಡೆದ ದುರ್ಘಟನೆಯಲ್ಲಿ ಮೂವರು ಮಕ್ಕಳು ಸೇರಿ ಐವರು ಸಾವು

Published On - 3:18 pm, Wed, 3 November 21