Big News: ರಾಷ್ಟ್ರಧ್ವಜದಿಂದ ಸ್ಕೂಟಿ ಒರೆಸಿದ ವಿಡಿಯೋ ವೈರಲ್; ದೆಹಲಿಯ ವ್ಯಕ್ತಿಯ ಬಂಧನ

ರಾಷ್ಟ್ರ ಧ್ವಜದಿಂದ ಸ್ಕೂಟಿಯನ್ನು ಒರೆಸುತ್ತಿರುವ ವಿಡಿಯೋವನ್ನು ಅಕ್ಕಪಕ್ಕದ ಮನೆಯವರು ರೆಕಾರ್ಡ್ ಮಾಡಿಕೊಂಡಿದ್ದರು. ಈ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ನಂತರ ಈ ವಿಷಯ ಬೆಳಕಿಗೆ ಬಂದಿತ್ತು.

Big News: ರಾಷ್ಟ್ರಧ್ವಜದಿಂದ ಸ್ಕೂಟಿ ಒರೆಸಿದ ವಿಡಿಯೋ ವೈರಲ್; ದೆಹಲಿಯ ವ್ಯಕ್ತಿಯ ಬಂಧನ
ತ್ರಿವರ್ಣ ಧ್ವಜ
Updated By: ಸುಷ್ಮಾ ಚಕ್ರೆ

Updated on: Sep 08, 2022 | 3:29 PM

ನವದೆಹಲಿ: ರಾಷ್ಟ್ರ ಧ್ವಜದಿಂದ (National Flag) ತನ್ನ ಸ್ಕೂಟಿಯನ್ನು ಸ್ವಚ್ಛಗೊಳಿಸಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 52 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಸ್ಕೂಟಿಯನ್ನು ಒರೆಸಲು ತ್ರಿವರ್ಣ ಧ್ವಜವನ್ನು ಬಳಸಿದ ಆರೋಪದಲ್ಲಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಶಾನ್ಯ ದೆಹಲಿಯ (Delhi) ಭಜನ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆ ವ್ಯಕ್ತಿ ಉತ್ತರ ಘೋಂಡಾ ಪ್ರದೇಶದ ನಿವಾಸಿಯಾಗಿದ್ದ.

ರಾಷ್ಟ್ರ ಧ್ವಜದಿಂದ ಸ್ಕೂಟಿಯನ್ನು ಒರೆಸುತ್ತಿರುವ ವಿಡಿಯೋವನ್ನು ಅಕ್ಕಪಕ್ಕದ ಮನೆಯವರು ರೆಕಾರ್ಡ್ ಮಾಡಿಕೊಂಡಿದ್ದರು. ಈ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ನಂತರ ಈ ವಿಷಯ ಬೆಳಕಿಗೆ ಬಂದಿತ್ತು. ಈ ವಿಡಿಯೋದಲ್ಲಿ ಆರೋಪಿಯು ತನ್ನ ಬಿಳಿ ಸ್ಕೂಟರ್ ಅನ್ನು ಮಡಚಿದ ರಾಷ್ಟ್ರಧ್ವಜದಿಂದ ಸ್ವಚ್ಛಗೊಳಿಸುತ್ತಿರುವುದನ್ನು ಮತ್ತು ಧೂಳು ಹೊಡೆಯುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: National Flag: ಮನ್​ ಕಿ ಬಾತ್​ನಲ್ಲಿ ಕೋಲಾರದ ಅತಿದೊಡ್ಡ ರಾಷ್ಟ್ರಧ್ವಜ ಪ್ರಯತ್ನ ಶ್ಲಾಘಿಸಿದ ಮೋದಿ

ಈ ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, 1971ರ ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯಿದೆ ಕಲಂ 2ರ ಅಡಿಯಲ್ಲಿ ಭಜನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವ್ಯಕ್ತಿ ಬಳಸಿದ ಧ್ವಜ ಮತ್ತು ಆತನ ಸ್ಕೂಟಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ತನಿಖೆಗೆ ಆಗಮಿಸಲು ಸೂಚಿಸಲಾಗಿದೆ. ತಾನು ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿಲ್ಲ ಎಂದು ಆರೋಪಿ ಹೇಳಿದ್ದಾರೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Thu, 8 September 22