National Flag: ಮನ್​ ಕಿ ಬಾತ್​ನಲ್ಲಿ ಕೋಲಾರದ ಅತಿದೊಡ್ಡ ರಾಷ್ಟ್ರಧ್ವಜ ಪ್ರಯತ್ನ ಶ್ಲಾಘಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಯತ್ನ ಶ್ಲಾಘಿಸಿದ್ದನ್ನು ತಿಳಿದ ಸಂಸದ ಮುನಿಸ್ವಾಮಿ ಹರ್ಷ ವ್ಯಕ್ತಪಡಿಸಿದರು.

National Flag: ಮನ್​ ಕಿ ಬಾತ್​ನಲ್ಲಿ ಕೋಲಾರದ ಅತಿದೊಡ್ಡ ರಾಷ್ಟ್ರಧ್ವಜ ಪ್ರಯತ್ನ ಶ್ಲಾಘಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಮತ್ತು ಕೋಲಾರದಲ್ಲಿ ಪ್ರದರ್ಶಿಸಿದ್ದ ಬೃಹತ್ ರಾಷ್ಟ್ರಧ್ವಜ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 28, 2022 | 3:16 PM

ಕೋಲಾರ: ನಗರದಲ್ಲಿ ಕಳೆದ ಆಗಸ್ಟ್ 15ರಂದು ಅತಿದೊಡ್ಡ ರಾಷ್ಟ್ರಧ್ವಜ ಅನಾವರಣಗೊಳಿಸಿದ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ಶ್ಲಾಘಿಸಿದರು. 1.30 ಲಕ್ಷ ಚದರಡಿಯ ಬೃಹತ್ ತ್ರಿವರ್ಣ ಧ್ವಜ (National Flag) ತಯಾರಿಸಲಾಗಿತ್ತು. 204 ಅಡಿ ಉದ್ದ, 630 ಅಡಿ ಅಗಲದ ರಾಷ್ಟ್ರಧ್ವಜವನ್ನು ಕೋಲಾರ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಸಿದ್ಧಪಡಿಸಲಾಗಿತ್ತು. ಬೃಹತ್ ಧ್ವಜವು ಲಿಮ್ಕಾ ದಾಖಲೆಗೂ ಸೇರ್ಪಡೆಗೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಯತ್ನ ಶ್ಲಾಘಿಸಿದ್ದನ್ನು ತಿಳಿದ ಸಂಸದ ಮುನಿಸ್ವಾಮಿ ಹರ್ಷ ವ್ಯಕ್ತಪಡಿಸಿದರು.

ಆಗಸ್ಟ್ 15ರಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೋಲಾರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೃಹತ್ ತ್ರಿವರ್ಣಧ್ವಜ ಅನಾವರಣಗೊಳಿಸಲಾಗಿತ್ತು. ಧ್ವಜಕ್ಕೆ ಸೇನಾ ಹೆಲಿಕಾಪ್ಟರ್​ನಿಂದ ಪುಷ್ಪಾರ್ಚನೆ ಮಾಡಲಾಯಿತು. ಇದನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ದೇಶದಲ್ಲೇ ಅತಿ ದೊಡ್ಡದಾದ ಬೃಹತ್ ತ್ರಿವರ್ಣ ಧ್ವಜವು ಲಿಮ್ಕಾ ದಾಖಲೆಗೂ ಸೇರ್ಪಡೆಯಾಯಿತು.

ಕೋಲಾರ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ 13,000 ಮೀಟರ್ ಬಟ್ಟೆ ಬಳಸಿ 1.30 ಲಕ್ಷ ಚದರಡಿಯ ಬೃಹತ್ ಧ್ವಜ ನಿರ್ಮಿಸಲಾಯಿತು. ಈ ಧ್ವಜವು 204 ಅಡಿ ಉದ್ದ ಹಾಗೂ 630 ಅಡಿ ಅಗಲ ಇತ್ತು. 3300 ಕೆಜಿ ತೂಕವಿದ್ದ ಬೃಹತ್ ತ್ರಿವರ್ಣಧ್ವಜವನ್ನು ಸ್ವತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. 7 ಜನರ ತಂಡ ಸತತವಾಗಿ 8 ದಿನಗಳ ಕಾಲ ಹಗಲು ರಾತ್ರಿ ಶ್ರಮಿಸಿದರ ಫಲವಾಗಿ ಈ ಬೃಹತ್ ತ್ರಿವರ್ಣ ಧ್ವಜವನ್ನು ನಿರ್ಮಾಣ ಮಾಡಲು ಸಾಧ್ಯವಾಗಿತ್ತು ಎಂದು ಕೋಲಾರ ಸಂಸದ ಮುನಿಸ್ವಾಮಿ ಸಂತಸ ವ್ಯಕ್ತಪಡಿಸಿದ್ದರು.

ಸೇನಾ ಹೆಲಿಕಾಪ್ಟರ್​ನಿಂದ ಧ್ವಜಕ್ಕೆ ಪುಷ್ಪಾರ್ಚನೆ

ಇಂಥ ಬೃಹತ್ ಧ್ವಜ ನಿರ್ಮಾಣ ಮಾಡಿರುವ ವಿಷಯ ತಿಳಿದ ರಕ್ಷಣಾ ಸಚಿವ ರಾಜನಾಥಸಿಂಗ್ ಬೃಹತ್ ಧ್ವಜಕ್ಕೆ ಪುಷ್ಪಾರ್ಚನೆ ಮಾಡಲು ಸೇನಾ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು. ರಕ್ಷಣಾ ಸಚಿವ ರಾಜನಾಥ್​ಸಿಂಗ್ ಅವರು ಕಳಿಸಿದ್ದ ಸೇನಾ ಹೆಲಿಕಾಪ್ಟರ್​ನಿಂದ ದೇಶದ ಬೃಹತ್ ತ್ರಿವರ್ಣ ಧ್ವಜಕ್ಕೆ ನೂರಾರು ಕೆಜಿ ಹೂವಿನ ಪುಷ್ಪಾರ್ಚನೆ ಮಾಡಲಾಯಿತು. ಈ ಅಭೂತಪೂರ್ವ ಕ್ಷಣ ನೋಡುತ್ತಿದ್ದ ಪ್ರತಿಯೊಬ್ಬ ದೇಶಭಕ್ತರಿಗೂ ಮೈ ರೋಮಾಂಚನಗೊಳ್ಳುವಂತೆ ಮಾಡಿತ್ತು. ಈ ಕ್ಷಣಗಳನ್ನು ಕಣ್ತುಂಬಿಕೊಂಡ ಪ್ರತಿಯೊಬ್ಬರ ಬಾಯಲ್ಲೂ ಭಾರತ್ ಮಾತಾಕಿ ಜೈ ಎನ್ನುವ ಘೋಷಣೆಗಳು ತಂತಾನೆ ಹೊರ ಹೊಮ್ಮುತ್ತಿದ್ದವು.

ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿದ ಬೃಹತ್ ಧ್ವಜದ ದಾಖಲೆ

ಇನ್ನು ಕೋಲಾರದಲ್ಲಿ ಇಂದು ಪ್ರದರ್ಶನ ಮಾಡಲಾದ ಈ ಬೃಹತ್ ಧ್ವಜ ದೇಶದಲ್ಲೇ ಅತಿದೊಡ್ಡದಾದ ಧ್ವಜ ಎಂದು ಹೇಳಲಾಗಿದೆ. ಸುಮಾರು 1.30 ಲಕ್ಷ ಚದರಡಿ ವಿಸ್ತೀರ್ಣದ, ಈ ಬೃಹತ್ ಧ್ವಜ ಲಿಮ್ಕಾ ಬುಕ್ ಆಫ್ ರೆಕಾರ್ಡ್​ಗೆ ಸೇರಿದೆ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್