AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seat Belt:ಸೀಟ್ ಬೆಲ್ಟ್ ಅಲಾರ್ಮ್​ ಬ್ಲಾಕರ್ ಮಾರಾಟವನ್ನು ನಿಲ್ಲಿಸುವಂತೆ ಅಮೇಜಾನ್‌ಗೆ ಕೇಂದ್ರದ ನಿರ್ದೇಶನ

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸೀಟ್ ಬೆಲ್ಟ್ ಮತ್ತು ಏರ್‌ಬ್ಯಾಗ್‌ಗಳ ಬಗ್ಗೆ ಚರ್ಚೆ ಹೆಚ್ಚಿದೆ.

Seat Belt:ಸೀಟ್ ಬೆಲ್ಟ್ ಅಲಾರ್ಮ್​ ಬ್ಲಾಕರ್ ಮಾರಾಟವನ್ನು ನಿಲ್ಲಿಸುವಂತೆ ಅಮೇಜಾನ್‌ಗೆ ಕೇಂದ್ರದ ನಿರ್ದೇಶನ
Seat BeltImage Credit source: NDTV
TV9 Web
| Edited By: |

Updated on:Sep 08, 2022 | 4:01 PM

Share

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸೀಟ್ ಬೆಲ್ಟ್ ಮತ್ತು ಏರ್‌ಬ್ಯಾಗ್‌ಗಳ ಬಗ್ಗೆ ಚರ್ಚೆ ಹೆಚ್ಚಿದೆ. ಈ ಅನುಕ್ರಮದಲ್ಲಿ, ಹಿಂಬದಿಯ ಸೀಟಿನಲ್ಲಿ ಕುಳಿತವರೂ ಬೆಲ್ಟ್ ಹಾಕದಿದ್ದರೆ ಅಲಾರ್ಮ್​ವ್ಯವಸ್ಥೆ ಮಾಡುವಂತೆ ಸರ್ಕಾರವು ಕಾರು ಕಂಪನಿಗಳಿಗೆ ಕೇಳಿದೆ.

ಅಲಾರ್ಮ್​ ಆಗದಂತೆ ನೋಡಿಕೊಳ್ಳುವ ಬ್ಲಾಕರ್ಸ್​ಗಳನ್ನು ಕೆಲವು ಇ-ಕಾಮರ್ಸ್​ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡುತ್ತಿವೆ.ಇದು ಸೀಟ್ ಬೆಲ್ಟ್ ಅಲಾರ್ಮ್​ ಅನ್ನು ನಿಷ್ಕ್ರಿಯಗೊಳಿಸುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ. ಇಂತಹ ಅಲಾರ್ಮ್ ಬ್ಲಾಕರ್‌ಗಳನ್ನು ಮಾರಾಟ ಮಾಡದಂತೆ ಅಮೆಜಾನ್‌ಗೆ ನೋಟಿಸ್ ಕಳುಹಿಸಲಾಗಿದೆ.

ಜನರು ಅಮೇಜಾನ್‌ನಿಂದ ಇಂತಹ ಸೀಟ್ ಬೆಲ್ಟ್ ಅಲಾರ್ಮ್ ಬ್ಲಾಕರ್‌ಗಳನ್ನು ಖರೀದಿಸುತ್ತಾರೆ ಮತ್ತು ಸೀಟ್ ಬೆಲ್ಟ್ ಧರಿಸುವುದನ್ನು ತಪ್ಪಿಸುತ್ತಾರೆ. ಈ ಸಂಬಂಧ ಅಮೇಜಾನ್​ಗೆ ನೋಟಿಸ್ ಕಳುಹಿಸಲಾಗಿದೆ.

ಸದ್ಯ ಈ ಬಗ್ಗೆ ಅಮೇಜಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಇತರ ಹಲವು ಪ್ರಮುಖ ನಿಬಂಧನೆಗಳನ್ನು ಈ ವರ್ಷದ ಅಂತ್ಯದೊಳಗೆ ಜಾರಿಗೆ ತರಲಾಗುವುದು ಎಂದು ಕೇಂದ್ರ ಸಚಿವ ಗಡ್ಕರಿ ಭರವಸೆ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವುದು ಮತ್ತು ಹಿಂದಿನ ಸೀಟಿನಲ್ಲಿ ಬೆಲ್ಟ್ ಅನ್ನು ಧರಿಸಲು ಅಲಾರಾಂ ಸಿಸ್ಟಮ್ ಅನ್ನು ಒಳಗೊಂಡಿರುತ್ತದೆ.

ಕೆಲವು ಕಾರು ಕಂಪನಿಗಳು ಏರ್‌ಬ್ಯಾಗ್‌ನಿಂದಾಗಿ ಕಾರುಗಳ ಬೆಲೆಯನ್ನು ಹೆಚ್ಚಿಸುವ ಬಗ್ಗೆ ಮಾತನಾಡುತ್ತಿವೆ, ಆದರೆ ಗಡ್ಕರಿ ಈ ವಾದವನ್ನು ಕಟುವಾಗಿ ತಳ್ಳಿಹಾಕಿದ್ದಾರೆ. ಏರ್ ಬ್ಯಾಗ್ 900 ರೂ.ಗೆ ಬರುತ್ತದೆ. ಇದು ದೊಡ್ಡ ಸಮಸ್ಯೆಯಲ್ಲ. ಹಿಂಬದಿ ಸೀಟ್ ಬೆಲ್ಟ್ ಇಲ್ಲದಿದ್ದಲ್ಲಿ 1,000 ರೂಪಾಯಿ ಚಲನ್ ಹಾಕುವ ನಿಯಮವಿದ್ದರೂ ಸಾಮಾನ್ಯವಾಗಿ ಇಂತಹ ಚಲನ್ ಅನ್ನು ಕೆಲವೇ ಪ್ರಕರಣಗಳಲ್ಲಿ ಕಡಿತಗೊಳಿಸಲಾಗುತ್ತದೆ. ಅಪಘಾತ ತಡೆಗಟ್ಟುವಿಕೆ

ಕಾರಿನಲ್ಲಿ ಕುಳಿತುಕೊಳ್ಳುವ ಎಲ್ಲರಿಗೂ ಸೀಟ್ ಬೆಲ್ಟ್ ಕಡ್ಡಾಯಗೊಳಿಸುವುದು ಜನರ ಸುರಕ್ಷತೆಗೆ ಸರ್ಕಾರ ಇಡುತ್ತಿರುವ ಮತ್ತೊಂದು ಹೆಜ್ಜೆ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಟಾಟಾ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಾವಿಗೆ ಸೀಟ್ ಬೆಲ್ಟ್ ಧರಿಸದಿರುವುದು ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Thu, 8 September 22