AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈರಸ್ ಮಿಸ್ತ್ರಿ ಪ್ರಯಾಣಿಸುತ್ತಿದ್ದ ಮೆರ್ಸಿಡಿಸ್ ಕಾರು ಚಲಾಯಿಸಿದ್ದು ಮುಂಬೈಯ ಡಾಕ್ಟರ್: ಪೊಲೀಸ್

ಅಪಘಾತದಲ್ಲಿ ಸ್ತ್ರೀರೋಗತಜ್ಞೆ ಅನಾಹಿತಾ ಪಾಂಡೋಲೆ ಮತ್ತು ಅವರ ಪತಿ ಡೇರಿಯಸ್ ಪಾಂಡೋಲೆ (60) ಅವರು ಬದುಕುಳಿದರು. ಮಿಸ್ತ್ರಿ ಮತ್ತು ಅನಾಹಿತಾ ಪಾಂಡೋಲೆ ಅವರ ಮಾವ...

ಸೈರಸ್ ಮಿಸ್ತ್ರಿ ಪ್ರಯಾಣಿಸುತ್ತಿದ್ದ ಮೆರ್ಸಿಡಿಸ್ ಕಾರು ಚಲಾಯಿಸಿದ್ದು ಮುಂಬೈಯ ಡಾಕ್ಟರ್: ಪೊಲೀಸ್
ಸೈರಸ್ ಮಿಸ್ತ್ರಿ
TV9 Web
| Edited By: |

Updated on:Sep 04, 2022 | 10:15 PM

Share

ಮುಂಬೈ: ಸೈರಸ್ ಮಿಸ್ತ್ರಿ (Cyrus Mistry) ಪ್ರಯಾಣಿಸುತ್ತಿದ್ದ ಕಾರು ಭಾನುವಾರ ಮಧ್ಯಾಹ್ನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಈ ಅಪಘಾತದಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮತ್ತು ಇನ್ನೊಬ್ಬ ಪ್ರಯಾಣಿಕ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ವೇಗವಾಗಿ ಚಲಿಸುತ್ತಿತ್ತು ಮತ್ತು ರಾಂಗ್ ಸೈಡ್ ನಿಂದ (ಎಡದಿಂದ) ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಅಪಘಾತದಲ್ಲಿ ಸ್ತ್ರೀರೋಗತಜ್ಞೆ ಅನಾಹಿತಾ ಪಾಂಡೋಲೆ (55) ಮತ್ತು ಅವರ ಪತಿ ಡೇರಿಯಸ್ ಪಾಂಡೋಲೆ (60) ಅವರು ಬದುಕುಳಿದರು. ಮಿಸ್ತ್ರಿ (54) ಮತ್ತು ಅನಾಹಿತಾ ಪಾಂಡೋಲೆ ಅವರ ಮಾವ ಜಹಾಂಗೀರ್ ಪಾಂಡೋಲೆ ಮಧ್ಯಾಹ್ನ 3 ಗಂಟೆಗೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮುಂಬೈನಿಂದ 120 ಕಿಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಿಸ್ತ್ರಿ ಮತ್ತು ಜಹಾಂಗೀರ್ ಪಾಂಡೋಲೆ ಹಿಂಬದಿಯ ಸೀಟಿನಲ್ಲಿದ್ದರು ಎಂದು ಅಧಿಕಾರಿ ಹೇಳಿದರು. ಡೇರಿಯಸ್ ಪಾಂಡೋಲ್ ಮುಂದಿನ ಸೀಟಿನಲ್ಲಿದ್ದರು, ಅವರ ಪತ್ನಿ ಕಾರು ಚಲಾಯಿಸುತ್ತಿದ್ದರು ಎಂದು ಅಧಿಕಾರಿ ಹೇಳಿದ್ದಾರೆ. ಮಹಿಳೆಯೊಬ್ಬರು ಕಾರನ್ನು ಚಲಾಯಿಸುತ್ತಿದ್ದರು ಮತ್ತು ಎಡಭಾಗದಿಂದ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದರು, ಆದರೆ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

“ನಾವು ಅಪಘಾತದ ಸ್ಥಳಕ್ಕೆ ಧಾವಿಸಿದ್ದೇವೆ ಆದರೆ ವಾಹನ ಅಥವಾ ಗಾಯಗೊಂಡ ಜನರನ್ನು ಮುಟ್ಟಲಿಲ್ಲ. 10 ನಿಮಿಷಗಳಲ್ಲಿ, ಸಹಾಯ ಮಾಡಲು ಜನರು ಬಂದರು. ಇಬ್ಬರು ಗಾಯಗೊಂಡ ಜನರನ್ನು ಕಾರಿನಿಂದ ಹೊರತೆಗೆಯಲಾಯಿತು. ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಉಳಿದ ಇಬ್ಬರು ಸಾವನ್ನಪ್ಪಿದರು ಎಂದು ರಸ್ತೆಬದಿಯ ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಪ್ರತ್ಯಕ್ಷದರ್ಶಿಯೊಬ್ಬರು, ಮರಾಠಿ ಟಿವಿ ಚಾನೆಲ್‌ಗೆ ಹೇಳಿದ್ದಾರೆ.  ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಭಾನುವಾರ ಮುಂಬೈನ ನೆರೆಯ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ . ಮಿಸ್ತ್ರಿ ಅವರು ಮರ್ಸಿಡಿಸ್ ಕಾರಿನಲ್ಲಿ ಅಹಮದಾಬಾದ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದರು.

ಇದನ್ನೂ ಓದಿ
Image
ಜೀವನದ ಬಗ್ಗೆ ಉತ್ಸಾಹವನ್ನು ಹೊಂದಿದ್ದ ವ್ಯಕ್ತಿ ಮಿಸ್ತ್ರಿ; ಗಣ್ಯರಿಂದ ಸೈರಸ್ ಮಿಸ್ತ್ರಿ ನಿಧನಕ್ಕೆ ಸಂತಾಪ
Image
Cyrus Mistry ಟಾಟಾ ಸನ್ಸ್‌ ಮಾಜಿ ಅಧ್ಯಕ್ಷ ಕಾರು ಅಪಘಾತದಲ್ಲಿ ಸಾವು; ಯಾರು ಈ ಸೈರಸ್ ಮಿಸ್ತ್ರಿ?
Image
ರಸ್ತೆ ಅಪಘಾತದಲ್ಲಿ ಟಾಟಾ ಗ್ರೂಪ್​ನ ಮಾಜಿ ಅಧ್ಯಕ್ಷ ಸೈರಸ್​ ಮಿಸ್ತ್ರಿ ಸಾವು

Published On - 10:14 pm, Sun, 4 September 22