AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big News: ಜಾರ್ಖಂಡ್ ಬಿಕ್ಕಟ್ಟಿನ ನಡುವೆ ಇಂದು ವಿಶ್ವಾಸಮತ ಯಾಚನೆ; ಸಿಎಂ ಹೇಮಂತ್ ಸೊರೇನ್ ಭವಿಷ್ಯ ನಿರ್ಧಾರ

Hemant Soren: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಶಾಸಕರಾಗಿ ಅನರ್ಹಗೊಳಿಸುವ ಸಾಧ್ಯತೆಯ ನಡುವೆ ಜಾರ್ಖಂಡ್‌ನ ಸುಮಾರು 30 ಶಾಸಕರು ಇಂದು ವಿಶ್ವಾಸ ಮತಕ್ಕೆ ಹಾಜರಾಗಲು ರಾಂಚಿಗೆ ಆಗಮಿಸಿದ್ದಾರೆ.

Big News: ಜಾರ್ಖಂಡ್ ಬಿಕ್ಕಟ್ಟಿನ ನಡುವೆ ಇಂದು ವಿಶ್ವಾಸಮತ ಯಾಚನೆ; ಸಿಎಂ ಹೇಮಂತ್ ಸೊರೇನ್ ಭವಿಷ್ಯ ನಿರ್ಧಾರ
ಹೇಮಂತ್ ಸೊರೇನ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 05, 2022 | 10:02 AM

ರಾಂಚಿ: ಅಕ್ರಮ ಗಣಿಗಾರಿಕೆ ಗುತ್ತಿಗೆ ವಿವಾದದ ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ (Hemant Soren) ಇಂದು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ. ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ನೇತೃತ್ವದ ಒಕ್ಕೂಟವು ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪ ಮಾಡುತ್ತಲೇ ಇದೆ. ವಿಶ್ವಾಸಮತ ಯಾಚನೆಯ (Trust Vote) ಹಿನ್ನೆಲೆಯಲ್ಲಿ 5 ದಿನಗಳ ಹಿಂದೆ ನೆರೆಯ ಛತ್ತೀಸ್‌ಗಢದಲ್ಲಿ ಆಶ್ರಯ ಪಡೆದಿದ್ದ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಯುಪಿಎ ಮೈತ್ರಿಕೂಟದ 30 ಶಾಸಕರು ನಿನ್ನೆ ಸಂಜೆ ರಾಂಚಿಗೆ ಮರಳಿದ್ದಾರೆ.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಶಾಸಕರಾಗಿ ಅನರ್ಹಗೊಳಿಸುವ ಸಾಧ್ಯತೆಯ ರಾಜಕೀಯ ಅನಿಶ್ಚಿತತೆಯ ನಡುವೆ ಜಾರ್ಖಂಡ್‌ನ ಸುಮಾರು 30 ಶಾಸಕರು ಮತ್ತು ಯುಪಿಎ ಸರ್ಕಾರದ ಸಚಿವರು ಇಂದು ವಿಶ್ವಾಸ ಮತಕ್ಕೆ ಹಾಜರಾಗಲು ರಾಂಚಿಗೆ ಆಗಮಿಸಿದ್ದಾರೆ. ನಿನ್ನೆ ಸರ್ಕಿಟ್ ಹೌಸ್‌ನಲ್ಲಿ ಶಾಸಕರೊಂದಿಗೆ ಸಿಎಂ ಹೇಮಂತ್ ಸೊರೇನ್ ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢದಿಂದ ವಿಶೇಷ ವಿಮಾನದಲ್ಲಿ ಆಡಳಿತಾರೂಢ ಸಮ್ಮಿಶ್ರ ಶಾಸಕರು ನಿನ್ನೆ ರಾಜ್ಯ ರಾಜಧಾನಿ ರಾಂಚಿಗೆ ಹಿಂತಿರುಗಿದ್ದಾರೆ. ಆಪರೇಷನ್ ಕಮಲದ ಪ್ರಯತ್ನಗಳನ್ನು ತಡೆಯಲು ಅವರನ್ನು ಅತಿಥಿಗೃಹದಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ: Breaking News: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್​ ಅನರ್ಹತೆಗೆ ಚುನಾವಣಾ ಆಯೋಗ ಶಿಫಾರಸು

ಗಣಿಗಾರಿಕೆಗೆ ಗುತ್ತಿಗೆ ನೀಡುವ ಮೂಲಕ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಹೇಮಂತ್ ಸೊರೇನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಹೇಳಿದೆ. ಪಕ್ಷವು ಹೊಸ ಚುನಾವಣೆಗೆ ಕರೆ ನೀಡಿದ್ದು, ಮುಖ್ಯಮಂತ್ರಿ ಹೇಮಂತ್ ಸೊರೇನ್ ನೈತಿಕತೆಯ ಆಧಾರದ ಮೇಲೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.

ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಂತಹ ರಾಜ್ಯಗಳ ಮಾದರಿಯನ್ನು ಅನುಸರಿಸಿ ಬಿಜೆಪಿಯು ಬಿಕ್ಕಟ್ಟಿನ ಲಾಭವನ್ನು ಪಡೆಯಲು ಮತ್ತು ಚುನಾಯಿತ ಸರ್ಕಾರವನ್ನು ಉರುಳಿಸಲು ಆಡಳಿತಾರೂಢ ಸಮ್ಮಿಶ್ರ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಹೇಮಂತ್ ಸೊರೇನ್ ಮತ್ತು ಅವರ ಪಕ್ಷದ ಜೆಎಂಎಂ ಆರೋಪಿಸಿದ್ದಾರೆ.

ಇದನ್ನೂ ಓದಿ: Jharkhand Crisis: ಸಿಎಂ ಹೇಮಂತ್ ಸೊರೇನ್​ಗೆ ಅನರ್ಹತೆ ಭೀತಿ; ಜಾರ್ಖಂಡ್​ ಶಾಸಕರು ರೆಸಾರ್ಟ್​​ಗೆ ಶಿಫ್ಟ್​?

81 ಸದಸ್ಯರಿರುವ ವಿಧಾನಸಭೆಯಲ್ಲಿ ಆಡಳಿತಾರೂಢ ಸಮ್ಮಿಶ್ರ 49 ಶಾಸಕರನ್ನು ಹೊಂದಿದ್ದು, ಅತಿ ದೊಡ್ಡ ಪಕ್ಷವಾದ ಜೆಎಂಎಂ 30 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ 18 ಮತ್ತು ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಒಬ್ಬರನ್ನು ಹೊಂದಿದೆ. ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ 26 ಶಾಸಕರನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:58 am, Mon, 5 September 22

ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ