Congress Halla Bol Rally ಮೋದಿ ಅಧಿಕಾರಕ್ಕೆ ಬಂದ ನಂತರ ದ್ವೇಷ ಮತ್ತು ವಿಭಜನೆ ಹೆಚ್ಚಾಗಿದೆ: ರಾಹುಲ್ ಗಾಂಧಿ

Rahul Gandhi ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಮಹೆಂಗಾಯಿ ಪರ್ ಹಲ್ಲಾ ಬೋಲ್ ರ್ಯಾಲಿಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.

Congress Halla Bol Rally ಮೋದಿ ಅಧಿಕಾರಕ್ಕೆ ಬಂದ ನಂತರ ದ್ವೇಷ ಮತ್ತು ವಿಭಜನೆ ಹೆಚ್ಚಾಗಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 04, 2022 | 3:42 PM

ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ (Ramlila Maidan) ನಡೆಯುತ್ತಿರುವ ಮಹೆಂಗಾಯಿ ಪರ್ ಹಲ್ಲಾ ಬೋಲ್ (mehangai par halla bol) ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ‘ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ನಡೆದ  ಕಾಂಗ್ರೆಸ್ ಈ ರ್ಯಾಲಿ ನಡೆಸುತ್ತಿದ್ದು ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ  ಎಂದು ಮಾಧ್ಯಮಗಳ ವರದಿ ಮಾಡಿದೆ. ಆದರೆ ದೆಹಲಿ ಪೊಲೀಸರು ಅದನ್ನು ನಿರಾಕರಿಸಿದ್ದು ಇದುವರೆಗೆ ಯಾವುದೇ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿಲ್ಲ ಎಂದು ಹೇಳಿದರು. ರಾಮಲೀಲಾ ಮೈದಾನದಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ದೇಶದ ಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೆ ಕಾಣಿಸುತ್ತದೆ . ಮೋದಿ ಅಧಿಕಾರಕ್ಕೆ ಬಂದ ನಂತರ ದ್ವೇಷ ಮತ್ತು ವಿಭಜನೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಈ ದ್ವೇಷವು ಭಯದ ರೂಪವಾಗಿದೆ. ಆದ್ದರಿಂದ ನಾವು ದ್ವೇಷ ಹೆಚ್ಚುತ್ತಿದೆ ಎಂದು ಹೇಳಿದಾಗ, ಭಯವು ಹೆಚ್ಚುತ್ತಿದೆ ಎಂದು ನಾವು ಹೇಳಬಹುದು. ನಿರುದ್ಯೋಗದ ಭಯ … ಬೆಲೆ ಏರಿಕೆಯ ಭಯ. ಸರ್ಕಾರದ ನೀತಿಗಳಿಂದ ಕೇವಲ ಇಬ್ಬರು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಮಾತ್ರ ಲಾಭವಾಗುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶವನ್ನು ವಿಭಜಿಸುತ್ತವೆ, ಭಯವನ್ನು ಬೆಳೆಸುತ್ತವೆ ಮತ್ತು ಜನರನ್ನು ವಿಭಜಿಸುತ್ತವೆ, ಈ ಭಯದ ಲಾಭ ಯಾರಿಗೆ ಸಿಗುತ್ತದೆ? ನರೇಂದ್ರ ಮೋದಿ ಸರ್ಕಾರದಿಂದ ಬಡವರು, ರೈತರು, ಸಣ್ಣ ವ್ಯಾಪಾರಿಗಳು ಏನಾದರೂ ಪ್ರಯೋಜನ ಪಡೆಯುತ್ತಿದ್ದಾರೆಯೇ? ದ್ವೇಷ ಮತ್ತು ಭಯದಿಂದ ಕೇವಲ ಇಬ್ಬರು ಕಾರ್ಪೊರೇಟ್ ಜನರಿಗೆ ಲಾಭವಾಗುತ್ತಿದೆ.

“ಎರಡು ಜನರಿಗೆ ಬಿಜೆಪಿ ಎಲ್ಲ ಸವಲತ್ತು ಕೊಡುತ್ತಿದೆ. ಈಗ ನೋಡಿ ನರೇಂದ್ರ ಮೋದಿಯವರು ನೋಟು ಅಮಾನ್ಯೀಕರಣ ಮಾಡಿದ್ದಾರೆ. ಅದು  ಬಡವರಿಗೆ ಸಹಾಯವಾಯಿತೆ ಮೂರು ಕಾನೂನುಗಳು ರೈತರಿಗೆ ಅಲ್ಲ ಅದು ಆ ಎರಡು ಕಾರ್ಪೋರೇಟ್ ಸಂಸ್ಥೆಗಳಿಗೆ ಮಾತ್ರ. ಆದರೆ ರೈತರು ರಸ್ತೆಗೆ ಬಂದು ನರೇಂದ್ರ ಮೋದಿಗೆ ತಮ್ಮ ಶಕ್ತಿ ತೋರಿಸಿದರು. ಆಮೇಲೆ ನರೇಂದ್ರ ಮೋದಿ ಅವರಿಗೆ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕಾಗಿ ಬಂತು ಎಂದಿದ್ದಾರೆ ರಾಹುಲ್.

ಇದನ್ನು ಹೇಳಲು ನನಗೆ ಮನಸ್ಸಿಲ್ಲ ಆದರೆ ಇಂದು ದೇಶವು ಬಯಸಿದರೂ ಉದ್ಯೋಗ ನೀಡಲು ಸಾಧ್ಯವಾಗದ ಸ್ಥಿತಿಯಾಗಿದೆ. ಏಕೆಂದರೆ ಈ ಎರಡು ಕಾರ್ಪೊರೇಟ್ ಸಂಸ್ಥೆಗಳು ಉದ್ಯೋಗಿಗಳನ್ನು ನೀಡುವುದಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉದ್ಯೋಗ ನೀಡುತ್ತವ, ನರೇಂದ್ರ ಮೋದಿಜಿ ಅದರ ಬೆನ್ನೆಲುಬು ಮುರಿದಿದ್ದಾರೆ ಎಂದು ರಾಹುಲ್ ಮೋದಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೊದಲನೆಯದಾಗಿ, ನೀವು ನಿರುದ್ಯೋಗದಿಂದ ಬೇಸತ್ತಿದ್ದೀರಿ, ಎರಡನೆಯದಾಗಿ, ನೀವು ಬೆಲೆ ಏರಿಕೆಯಿಂದ ಕಷ್ಟ ಅನುಭವಿಸುತ್ತಿದ್ದೀರಿ. ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ನರೇಂದ್ರ ಮೋದಿ ಕೇಳುತ್ತಾರೆ? ನಾನು ಇದನ್ನು ಹೇಳುತ್ತೇನೆ, ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ದೇಶಕ್ಕೆ ಇಷ್ಟು ಬೆಲೆ ಏರಿಕೆಯನ್ನು ತೋರಿಸಿಲ್ಲ. ಪ್ರತಿಪಕ್ಷಗಳು ಈ ವಿಷಯವನ್ನು ಪ್ರಸ್ತಾಪಿಸಲು ಬಯಸಿದಾಗ ಅದು ರೈತರ ಸಮಸ್ಯೆಯಾಗಲಿ ಅಥವಾ ಚೀನಾ ದಾಳಿಯಾಗಲಿ. ನರೇಂದ್ರ ಮೋದಿಯವರ ಸರ್ಕಾರ ಅದಕ್ಕೆ ಅವಕಾಶ ನೀಡುವುದಿಲ್ಲ. “ನರೇಂದ್ರ ಮೋದಿಜಿ ಪ್ರಧಾನಿ. ಆದರೆ ಆ ಇಬ್ಬರು ಉದ್ಯಮಿಗಳಿಲ್ಲದೆ ಅವರು ಪ್ರಧಾನಿಯಾಗಲು ಸಾಧ್ಯವಿಲ್ಲ, ಮಾಧ್ಯಮಗಳಿಲ್ಲದೆ ಅವರು ಪ್ರಧಾನಿಯಾಗಲು ಸಾಧ್ಯವಿಲ್ಲ, ನ್ಯಾಯಾಂಗವೇ ಆಗಿರಲಿ ಎಲ್ಲ ಸಂಸ್ಥೆಗಳ ಮೇಲೆ ಒತ್ತಡವಿದೆ. ಜನರ ಬಳಿ ಹೋಗಿ ಸತ್ಯ ಹೇಳುವುದೊಂದೇ ನಮಗಿರುವ ದಾರಿ.

ಇಡಿ ನನ್ನನ್ನು 55 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು ಆದರೆ ನಾನು ಮೋದಿಯವರ ಇಡಿಗೆ ಹೆದರುವುದಿಲ್ಲ. ಅದು 55 ಗಂಟೆಗಳು ಅಥವಾ ಐದು ತಿಂಗಳುಗಳು ಅಥವಾ ಐದು ವರ್ಷಗಳೇ ಆಗಿರಲಿ ನರೇಂದ್ರ ಮೋದಿಯವರ ಸಿದ್ಧಾಂತವು ದೇಶ ವಿಭಜನೆಯಾಗಬೇಕು ಮತ್ತು ಅದರಿಂದ ಬರುವ ಲಾಭವನ್ನು ಕೆಲವೇ ಉದ್ಯಮಿಗಳಿಗೆ ಹಂಚಬೇಕು ಎಂದು ಹೇಳುತ್ತದೆ. ಕಾಂಗ್ರೆಸ್ ಭಾರತಕ್ಕೆ ಐತಿಹಾಸಿಕ MGNREGA ನೀಡಿದೆ, ಆದರೆ ನರೇಂದ್ರ ಮೋದಿ ಸರ್ಕಾರ ಇದು ಬಡವರಿಗೆ ಮಾಡಿದ ಅವಮಾನ ಎಂದು ಸಂಸತ್ತಿನಲ್ಲಿ ಹೇಳಿದರು, ಇಂದು MGNREGA ಇರದಿದ್ದರೆ ದೇಶದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿತ್ತು. ನಾವು 27 ಕೋಟಿ ಜನರನ್ನು ಬಡತನದಿಂದ ಹೊರತೆಗೆದಿದ್ದೇವ. ನರೇಂದ್ರ ಮೋದಿ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ 23 ಕೋಟಿ ಜನರನ್ನು ಬಡತನಕ್ಕೆ ತಳ್ಳಿದೆ. ನರೇಂದ್ರ ಮೋದಿಯವರು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಇದು ಪಾಕಿಸ್ತಾನ ಮತ್ತು ಚೀನಾಕ್ಕೆ ಸಹಾಯ ಮಾಡುತ್ತದೆಯೇ ಹೊರತು ಭಾರತಕ್ಕಲ್ಲ. ದ್ವೇಷ ಮತ್ತು ಭಯ ಹೆಚ್ಚಾದಷ್ಟೂ ದೇಶ ದುರ್ಬಲವಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಅವರು ದೇಶವನ್ನು ದುರ್ಬಲಗೊಳಿಸಿದ್ದಾರೆ.

ಬೆಲೆ ಏರಿಕೆ, ದ್ವೇಷ ದೇಶವನ್ನು ಬಲಪಡಿಸುತ್ತದೆಯೇ ಎಂದು ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ. ನರೇಂದ್ರ ಮೋದಿ ಮತ್ತು ಬಿಜೆಪಿ ದೇಶವನ್ನು ದುರ್ಬಲಗೊಳಿಸುತ್ತಿದೆ. ಕಾಂಗ್ರೆಸ್ ಪಕ್ಷ ದೇಶವನ್ನು ಒಂದುಗೂಡಿಸುತ್ತದೆ. ನಾವು ದ್ವೇಷವನ್ನು ಅಳಿಸುತ್ತೇವೆ ಮತ್ತು ದ್ವೇಷವನ್ನು ಅಳಿಸಿದಾಗ, ದೇಶವು ವೇಗವಾಗಿ ಬೆಳೆಯುತ್ತದೆ. ಇದನ್ನು ನಾವು ವರ್ಷಗಳಿಂದ ಮಾಡುತ್ತಿದ್ದೇವೆ. ನೀವು ದೇಶವನ್ನು ಉಳಿಸಬಹುದು ಎಂದು ನಾನು ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಲು ಬಯಸುತ್ತೇನೆ. ಕಾಂಗ್ರೆಸ್ ಸಿದ್ಧಾಂತ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯಬಲ್ಲದು.

“ನಾವು ಚೀನಾ ದಾಳಿ, ನಿರುದ್ಯೋಗ, ಬೆಲೆ ಏರಿಕೆಯ ಬಗ್ಗೆ ಮಾತನಾಡಲು ಬಯಸುತ್ತೇವೆ, ಆದರೆ ನಾವು ನಿಲ್ಲಿಸಿದ್ದೇವೆ. ಸಂಸ್ಥೆಗಳು,  ಮಾಧ್ಯಮ, ನ್ಯಾಯಾಂಗ ಅಥವಾ ಚುನಾವಣಾ ಆಯೋಗವು ಒತ್ತಡದಲ್ಲಿದೆ, ಆದ್ದರಿಂದ ಆ ಮಾರ್ಗವನ್ನು ಸಹ ನಿಲ್ಲಿಸಲಾಗಿದೆ. ನಮಗಿರುವ ಏಕೈಕ ಮಾರ್ಗವೆಂದರೆ ಜನರ ಬಳಿಗೆ ಹೋಗುವುದು. ಹಾಗಾಗಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸುತ್ತದೆ. ಇಲ್ಲಿಯವರೆಗೆ ಬಂದಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಸಿದ್ಧಾಂತದ ಹೋರಾಟವಾಗಿದೆ. ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಸೋಲಿಸುತ್ತೇವೆ ಎಂದು ಹೇಳಿ  ರಾಹುಲ್  ತಮ್ಮ ಭಾಷಣ ಮುಗಿಸಿದ್ದಾರೆ.

Published On - 1:58 pm, Sun, 4 September 22

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ