ಸಂಸದ ಶಶಿ ತರೂರ್ ವಿರುದ್ಧ ಐದು ರಾಜ್ಯಗಳಲ್ಲಿ ಎಫ್ಐಆರ್; ಕಾಂಗ್ರೆಸ್ನಿಂದ ಆಕ್ಷೇಪ
ಶಶಿ ತರೂರ್ ಹಾಗೂ ಉಳಿದ ಆರು ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲು ಮಾಡಿದ ಪೊಲೀಸರ ಕ್ರಮವನ್ನು ಕಾಂಗ್ರೆಸ್ ಖಂಡಿಸಿದೆ. ಆಡಳಿತ ಪಕ್ಷವಾದ ಬಿಜೆಪಿ ಪ್ರಜಾಪ್ರಭುತ್ವದ ಘನತೆಯನ್ನು ಪೂರ್ತಿ ನಾಶ ಮಾಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ದೆಹಲಿ: ರೈತರ ಟ್ರ್ಯಾಕ್ಟರ್ ಡೇ ಪರೇಡ್ನಂದು ನಡೆದ ಹಿಂಸಾಚಾರದ ಬಗ್ಗೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ಆರು ಮಂದಿ ಪತ್ರಕರ್ತರ ವಿರುದ್ಧ ಒಟ್ಟು 5 ರಾಜ್ಯಗಳಲ್ಲಿ ಎಫ್ಐಆರ್ ದಾಖಲಾಗಿದೆ.
ಈಗಾಗಲೇ ನಾಲ್ಕು ರಾಜ್ಯಗಳಲ್ಲಿ ಎಫ್ಐಆರ್ ದಾಖಲಾಗಿತ್ತು. ಶನಿವಾರ ದೆಹಲಿಯ ಐಪಿ ಎಸ್ಟೇಟ್ ಠಾಣೆ ಪೊಲೀಸರೂ ಸಹ ಶಶಿ ತರೂರ್, ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜನವರಿ 26ರಂದು ನಡೆದ ಹಿಂಸಾಚಾರದಂದು ಟ್ರ್ಯಾಕ್ಟರ್ ಉರುಳಿ ರೈತನೊಬ್ಬ ಮೃತಪಟ್ಟ ಬೆನ್ನಲ್ಲೇ, ಇವರೆಲ್ಲ ತಮ್ಮ ಟ್ವೀಟ್ ಮೂಲಕ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ್ದರು.
ಇನ್ನು ಇದೇ ವಿಚಾರಕ್ಕೆ ಇವರೆಲ್ಲರ ವಿರುದ್ಧ ಉತ್ತರ ಪ್ರದೇಶ, ಬೆಂಗಳೂರು, ಮಧ್ಯಪ್ರದೇಶ ಮತ್ತು ಹರ್ಯಾಣದ ಗುರುಗ್ರಾಮದ ಠಾಣೆಗಳಲ್ಲಿ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ನಿಂದ ಆಕ್ಷೇಪ ಶಶಿ ತರೂರ್ ಹಾಗೂ ಉಳಿದ ಆರು ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲು ಮಾಡಿದ ಪೊಲೀಸರ ಕ್ರಮವನ್ನು ಕಾಂಗ್ರೆಸ್ ಖಂಡಿಸಿದೆ. ಆಡಳಿತ ಪಕ್ಷವಾದ ಬಿಜೆಪಿ ಪ್ರಜಾಪ್ರಭುತ್ವದ ಘನತೆಯನ್ನು ಪೂರ್ತಿ ನಾಶ ಮಾಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಜುಲೈ 16 ಅನ್ನು ನ್ಯಾಷನಲ್ ಹಾಲಿಡೇ ಆಗಿ ಘೋಷಿಸಿ -ಪ್ರಧಾನಿ ಮೋದಿಗೆ ಯಶ್ ಅಭಿಮಾನಿಗಳ ಮನವಿ
Published On - 1:04 pm, Sun, 31 January 21