Jama Masjid: ದೆಹಲಿಯ ಜಾಮಾ ಮಸೀದಿ ಬಳಿ ಗುಂಡಿಕ್ಕಿ ಯುವಕನ ಹತ್ಯೆ

ದೆಹಲಿಯ ಜಾಮಾ ಮಸೀದಿ(Jama Masjid) ಬಳಿ ದುಷ್ಕರ್ಮಿಗಳು ಗುಂಡು ಹಾರಿಸಿ ಯುವಕನನ್ನು ಹತ್ಯೆ ಮಾಡಿದ್ದಾರೆ. ಬುಧವಾರ ರಾತ್ರಿ ಜಾಮಾ ಮಸೀದಿ ಬಳಿ ಮೃತಪಟ್ಟವರನ್ನು ಸಮೀರ್ ಎಂದು ಗುರುತಿಸಲಾಗಿದೆ ಅವರು ಚಾವ್ರಿ ಬಜಾರ್ ನಿವಾಸಿಯಾಗಿದ್ದಾರೆ.

Jama Masjid: ದೆಹಲಿಯ ಜಾಮಾ ಮಸೀದಿ ಬಳಿ ಗುಂಡಿಕ್ಕಿ ಯುವಕನ ಹತ್ಯೆ
ಗುಂಡಿನ ದಾಳಿ

Updated on: May 18, 2023 | 11:09 AM

ದೆಹಲಿಯ ಜಾಮಾ ಮಸೀದಿ(Jama Masjid) ಬಳಿ ದುಷ್ಕರ್ಮಿಗಳು ಗುಂಡು ಹಾರಿಸಿ ಯುವಕನನ್ನು ಹತ್ಯೆ ಮಾಡಿದ್ದಾರೆ. ಬುಧವಾರ ರಾತ್ರಿ ಜಾಮಾ ಮಸೀದಿ ಬಳಿ ಮೃತಪಟ್ಟವರನ್ನು ಸಮೀರ್ ಎಂದು ಗುರುತಿಸಲಾಗಿದೆ ಅವರು ಚಾವ್ರಿ ಬಜಾರ್ ನಿವಾಸಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಮಸೀದಿಯ ಗೇಟ್​ ನಂಬರ್ 1ರ ಬಳಿ ಹಲವು ಸುತ್ತು ಗುಂಡು ಹಾರಿಸಲಾಗಿದೆ. ಈ ಗುಂಡಿನ ದಾಳಿಯಲ್ಲಿ ಸಮೀರ್​ಗೆ ಗುಂಡು ತಗುಲಿದೆ. ಸಮೀರ್ ಆ ಪ್ರದೇಶದ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು, ಕೆಲವು ಕಿಡಿಗೇಡಿಗಳು ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಜಗಳದ ವೇಳೆ ಸಮೀರ್ ಮಧ್ಯ ಪ್ರವೇಶಿಸಿದ್ದರು, ಆದರೆ ದುಷ್ಕರ್ಮಿಗಳು ಅಲ್ಲಿಯೇ ಗುಂಡು ಹಾರಿಸಲು ಶುರು ಮಾಡಿದ್ದರು. ಗಾಯಗೊಂಡಿದ್ದ ಸಮೀರ್​ನನ್ನು ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಹಲವು ಸುತ್ತುಗಳ ಗುಂಡು ಹಾರಿಸಿ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಪೊಲೀಸರ ಪ್ರಕಾರ ಮಧ್ಯರಾತ್ರಿ 1.40ರ ಸುಮಾರಿಗೆ ಘಟನೆ ನಡೆದಿದೆ. ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಸಮೀರ್ ತಲೆಗೆ ಗುಂಡು ತಗುಲಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಓದಿ: ಕೊಡಗು: ವ್ಯಾಪಾರಿ ಮೇಲೆ ಗುಂಡಿನ ದಾಳಿ; ಗಾಯಾಳು ಆಸ್ಪತ್ರೆಗೆ ದಾಖಲು

ಮೃತ ಸಮೀರ್​ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ದುಷ್ಕರ್ಮಿಗಳು ಯಾರೆಂದು ಇದುವರೆಗೂ ತಿಳಿದುಬಂದಿಲ್ಲ. ಜಾಮಾ ಮಸೀದಿ ಬಳಿ ಗುಂಡಿನ ದಾಳಿ ನಡೆದಿರುವುದು ಎರಡನೇ ಬಾರಿ.

ಇದಕ್ಕೂ ಮೊದಲು ಮೇ 16 ರಂದು ಥಾನಾ ಚಾಂದಿನಿ ಮಹಲ್‌ನ ಚಿಟ್ಲಿ ಕಬ್ರ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿತ್ತು. ಮೇ 14 ರಂದು ಪಶ್ಚಿಮ ದೆಹಲಿಯ ಪಶ್ಚಿಮ ವಿಹಾರ್ ಪ್ರದೇಶದಲ್ಲಿ 58 ವರ್ಷದ ವ್ಯಕ್ತಿಯನ್ನು ಅಪರಿಚಿತ ವ್ಯಕ್ತಿಯೊಬ್ಬರು ಗುಂಡಿಕ್ಕಿ ಕೊಂದಿದ್ದರು.

ಘಟನೆ ನಡೆದಾಗ ಮೃತರು ಕಸ ಎಸೆಯಲು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವೇಳೆ ಮೃತರು ತಮ್ಮ ಮಗಳೊಂದಿಗೆ ಮಾತನಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕರೆ ಮಾಡುವಾಗ ಗುಂಡಿನ ಸದ್ದು ಕೇಳಿದೆ ಎಂದು ಮಗಳು ಪೊಲೀಸರಿಗೆ ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ