ಕರ್ಮ ರಿಟರ್ನ್ಸ್​: ಅಂದು ವಿಜೇಂದ್ರ ಗುಪ್ತಾ, ಇಂದು ಅತಿಶಿ ಸದನದಿಂದ ಹೊರಕ್ಕೆ

|

Updated on: Feb 25, 2025 | 12:28 PM

ಲೆಫ್ಟಿನೆಂಟ್ ಗರ್ವನರ್ ವಿನಯ್ ಕುಮಾರ್ ಸಕ್ಸೇನಾ ಭಾಷಣ ಮಾಡಲು ಆರಂಭಿಸುತ್ತಿದ್ದಂತೆಯೇ ಆಮ್ ಅದ್ಮಿ ಪಕ್ಷದ ನಾಯಕರು ಘೋಷಣೆಗಳನ್ನು ಕೂಗಲು ಶುರುಮಾಡಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಚಿತ್ರಗಳನ್ನು ತೆಗೆದುಹಾಕುವುದನ್ನು ವಿರೋಧಿಸಿ ಎಎಪಿ ಶಾಸಕರು ಪ್ರತಿಭಟಿಸಿದರು, ನಂತರ ಸ್ಪೀಕರ್ ವಿಜೇಂದ್ರ ಗುಪ್ತಾ ಎಎಪಿ ನಾಯಕರ ವಿರುದ್ಧ ಕ್ರಮ ಕೈಗೊಂಡರು.

ಕರ್ಮ ರಿಟರ್ನ್ಸ್​: ಅಂದು ವಿಜೇಂದ್ರ ಗುಪ್ತಾ, ಇಂದು ಅತಿಶಿ ಸದನದಿಂದ ಹೊರಕ್ಕೆ
ಅತಿಶಿ-ವಿಜೇಂದ್ರ ಗುಪ್ತಾ
Follow us on

ದೆಹಲಿಯ ವಿಧಾನಸಭಾ ಕಲಾಪ ಪ್ರಾರಂಭವಾಗುತ್ತಿದ್ದಂತೆ ಆಮ್ ಆದ್ಮಿ ಪಕ್ಷವು ಗದ್ದಲ ಸೃಷ್ಟಿಸಿತ್ತು. ಲೆಫ್ಟಿನೆಂಟ್ ಗರ್ವನರ್ ವಿನಯ್ ಕುಮಾರ್ ಸಕ್ಸೇನಾ ಭಾಷಣ ಮಾಡಲು ಆರಂಭಿಸುತ್ತಿದ್ದಂತೆಯೇ ಆಮ್ ಅದ್ಮಿ ಪಕ್ಷದ ನಾಯಕರು ಘೋಷಣೆಗಳನ್ನು ಕೂಗಲು ಶುರುಮಾಡಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಚಿತ್ರಗಳನ್ನು ತೆಗೆದುಹಾಕುವುದನ್ನು ವಿರೋಧಿಸಿ ಎಎಪಿ ಶಾಸಕರು ಪ್ರತಿಭಟಿಸಿದರು, ನಂತರ ಸ್ಪೀಕರ್ ವಿಜೇಂದ್ರ ಗುಪ್ತಾ ಎಎಪಿ ನಾಯಕರ ವಿರುದ್ಧ ಕ್ರಮ ಕೈಗೊಂಡರು.

ವಿಧಾನಸಭೆ ಸ್ಪೀಕರ್ ವಿರೋಧ ಪಕ್ಷದ ನಾಯಕಿ ಅತಿಶಿ ಸೇರಿದಂತೆ 11 ಎಎಪಿ ಶಾಸಕರನ್ನು ಸದನದಿಂದ ಒಂದು ದಿನದ ಮಟ್ಟಿಗೆ ಹೊರಹಾಕಲು ಆದೇಶಿಸಿದರು. ಅತಿಶಿ ಅವರಲ್ಲದೆ, ಉಚ್ಚಾಟಿತ ಶಾಸಕರಲ್ಲಿ ವೀರೇಂದ್ರ ಕಡ್ಯಾನ್, ಕುಲದೀಪ್, ಗೋಪಾಲ್ ರೈ, ಜರ್ನೈಲ್ ಸಿಂಗ್, ಸಂಜೀವ್ ಝಾ, ಅನಿಲ್ ಝಾ, ವಿಶೇಷ್ ರವಿ, ಸೋಮದತ್ ಮತ್ತು ವೀರ್ ಸಿಂಗ್ ಧಿಂಗ್ಹನ್ ಸೇರಿದ್ದಾರೆ.

ದೆಹಲಿ ವಿಧಾನಸಭೆಯಿಂದ ಹೊರಹಾಕಲ್ಪಟ್ಟ ಎಎಪಿ ಶಾಸಕರು ವಿಧಾನಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿಯು ಮುಖ್ಯಮಂತ್ರಿ ಕಚೇರಿ ಮತ್ತು ಸಂಪುಟ ಸಚಿವರ ಕಚೇರಿಗಳಲ್ಲಿ ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಫೋಟೋವನ್ನು ಪ್ರಧಾನಿ ಮೋದಿ ಅವರ ಫೋಟೋದೊಂದಿಗೆ ಬದಲಾಯಿಸಿದೆ ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ: ಹಿಂದೊಮ್ಮೆ ದೆಹಲಿ ವಿಧಾನಸಭೆಯಿಂದ ಹೊರಹಾಕಲ್ಪಟ್ಟಿದ್ದ ಬಿಜೆಪಿಯ ವಿಜೇಂದ್ರ ಗುಪ್ತಾ ಈಗ ಸ್ಪೀಕರ್

ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋವನ್ನು ಅವರ ಫೋಟೋದೊಂದಿಗೆ ಬದಲಾಯಿಸುವವರೆಗೆ ನಾವು ಇದನ್ನು ವಿರೋಧಿಸುತ್ತೇವೆ ಎಂದು ಅತಿಶಿ ಹೇಳಿದ್ದಾರೆ. ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್, ಸಬ್ಕಾ ಸಮ್ಮಾನ್ ನನ್ನ ಸರ್ಕಾರದ ಮಾರ್ಗದರ್ಶಿ ತತ್ವವಾಗಿರುತ್ತದೆ.

ನಮ್ಮ ಸರ್ಕಾರವು ಜನರ ಹೆಚ್ಚುತ್ತಿರುವ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಪೂರೈಸುತ್ತದೆ ಎಂದು ಹೇಳಿದರು. ಭ್ರಷ್ಟಾಚಾರ ಮುಕ್ತ ಆಡಳಿತ, ಮಹಿಳಾ ಸಬಲೀಕರಣ, ಬಡವರ ಕಲ್ಯಾಣ, ಆರೋಗ್ಯ ಸೇವೆಗಳಲ್ಲಿ ಸುಧಾರಣೆ, ಉತ್ತಮ ಶಿಕ್ಷಣ ಮಾದರಿ, ವಿಶ್ವ ದರ್ಜೆಯ ರಸ್ತೆಗಳು, ಸ್ವಚ್ಛ ಮತ್ತು ಮಾಲಿನ್ಯ ಮುಕ್ತ ದೆಹಲಿ, ಶುದ್ಧ ಯಮುನಾ, ಶುದ್ಧ ನೀರು ಮತ್ತು ಅನಧಿಕೃತ ವಸಾಹತುಗಳ ಸಕ್ರಮ – ಈ 10 ಕ್ಷೇತ್ರಗಳಿಗೆ ನಮ್ಮ ಸರ್ಕಾರ ವಿಶೇಷ ಗಮನ ಹರಿಸಲಿದೆ.

ಎಲ್ಲಾ ಇಲಾಖೆಗಳಿಗೆ 100 ದಿನಗಳ ಕಾರ್ಯಸೂಚಿ ನೀಡಲಾಗಿದೆ. ನನ್ನ ಸರ್ಕಾರ ತನ್ನ ಮೊದಲ ಸಭೆಯಲ್ಲಿಯೇ ಸಿಎಜಿ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲು ನಿರ್ಧರಿಸಿದೆ. ಹಿಂದಿನ ಎಎಪಿ ಸರ್ಕಾರದ ಮೇಲೆ ದಾಳಿ ನಡೆಸಿದ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಕಳೆದ 10 ವರ್ಷಗಳಲ್ಲಿ ನಿರಂತರ ಘರ್ಷಣೆಗಳು, ಆರೋಪಗಳು ಮತ್ತು ಪ್ರತ್ಯಾರೋಪಗಳು ದೆಹಲಿಗೆ ಹಾನಿ ಮಾಡಿವೆ ಎಂದು ಹೇಳಿದರು.

ವಿಜೇಂದ್ರ ಗುಪ್ತಾರನ್ನು ಸದನದಿಂದ ಹೊರಹಾಕಲಾಗಿತ್ತು
ಆಮ್ ಆದ್ಮಿ ಪಕ್ಷದ 10 ವರ್ಷಗಳ ಆಳ್ವಿಕೆಯಲ್ಲಿ ಬಿಜೆಪಿಯ ಹಿರಿಯ ನಾಯಕ ವಿಜೇಂದ್ರ ಗುಪ್ತಾ ಅವರನ್ನು ವಿಧಾನಸಭೆಯಿಂದ ಹೊರಹಾಕಲಾಗಿತ್ತು.ಈಗ ಪರಿಸ್ಥಿತಿ ಬದಲಾಗಿದ್ದು, 27 ವರ್ಷಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದು, ಗುಪ್ತಾ ಅವರನ್ನು ಸ್ಪೀಕರ್​ ಆಗಿ ಆಯ್ಕೆ ಮಾಡಲಾಗಿದೆ. ಇದೀಗ ಇದೇ ಸ್ಪೀಕರ್ ವಿಜೇಂದ್ರ ಗುಪ್ತಾ ಮಾಜಿ ಸಿಎಂ ಅತಿಶಿ ಸೇರಿದಂತೆ ಇತರೆ ಎಎಪಿ ನಾಯಕರನ್ನು ಸದನದಿಂದ ಹೊರಗಟ್ಟಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:20 pm, Tue, 25 February 25