
ದೆಹಲಿ: ಪಂಜಾಬ್ ರೈತರ ಚಳವಳಿ ತಿಂಗಳಿಗೆ ಆರಂಭವಾಗಿ ತಿಂಗಳು ಸಮೀಪಿಸುತ್ತಿದೆ. ಚಳವಳಿಯಲ್ಲಿ ಮೃತಪಟ್ಟ ರೈತರಿಗೆ ಗೌರವ ಸಲ್ಲಿಸಲು ಇಂದು ರೈತ ಒಕ್ಕೂಟಗಳು ‘ಶಹೀದ್ ದಿವಸ್’ ಆಚರಿಸಲಿವೆ. ಚಳವಳಿಯಲ್ಲಿ ಭಾಗವಹಿಸಿದ 20ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಅವರ ಸ್ಮರಣಾರ್ಥ ಶಹೀದ್ ದಿವಸ್ ಆಚರಿಸಲಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ತಿಳಿಸಿದೆ.
ಪಂಜಾಬ್ನ ವಿವಿಧ ಆಸ್ಪತ್ರೆಗಳ ದಾದಿಯರು ದೆಹಲಿ-ಹರಿಯಾಣದ ಟಿಕ್ರಿ ಗಡಿ ತಲುಪಿದ್ದಾರೆ. ದೆಹಲಿ ಚಲೋಗೆ ಪಂಜಾಬ್ನ ಬೆಂಬಲ ವ್ಯಕ್ತಪಡಿಸಿ ಚಳವಳಿಯಲ್ಲಿ ಪಾಲ್ಗೊಳ್ಲುತ್ತೇವೆ ಎಂದು ಅವರು ತಿಳಿಸಿದ್ದಾರೆ. ರೈತರ ಚಳವಳಿಗೆ ಬೆಂಬಲ ನೀಡಲಿದ್ದೇವೆ ಎಂದು ಲುಧಿಯಾನಾದ ಹರ್ಷ್ದೀಪ್ ಕೌರ್ ತಿಳಿಸಿದರು.
ಚಳವಳಿಯಲ್ಲಿ ಭಾಗವಹಿಸಿರುವ ಪಂಜಾಬಿ ಯುವಕರು ವಾಲಿಬಾಲ್ ಆಟ, ಪಂಜಾಬಿ ಮುಂಡಾಸು ಕಟ್ಟುವ ಮೂಲಕ ಸ್ಥಳೀಯರ ಜೊತೆ ಬೆರೆಯುತ್ತಿದ್ದಾರೆ. ಇತ್ತ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೇಂದ್ರ ಕೃಷಿ ಸಚಿವ ನರೇಮದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ತಮ್ಮ ಸಾಂಪ್ರದಾಯಿಕ ಪಗಡೆ ತೊಡುವ ಪದ್ಧತಿಯನ್ನು ದೆಹಲಿಯ ನಾಗರಿಕರಿಗೆ ಕಲಿಸುತ್ತಿರುವ ಪಂಜಾಬ್ ರೈತರು
ನೂತನ ಕೃಷಿ ಕಾಯ್ದೆ ವಿರೋಧಿಸಿ ಸಂಸದೀಯ ಸಮಿತಿಗಳಿಗೆ ರಾಜೀನಾಮೆ ಸಲ್ಲಿಸಿದ ಹನುಮಾನ್ ಬೇನಿವಾಲ್