AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಳಿಯುವಷ್ಟರಲ್ಲೇ ಹಾಕಿದ ಮೆಟ್ರೋ ಬಾಗಿಲು, ಸಿಕ್ಕಿಕೊಂಡ ಸೀರೆ, ಜಾಕೆಟ್​, ರೈಲ್ವೆ ಹಳಿ ಮೇಲೆ ಬಿದ್ದು ಮಹಿಳೆ ಸಾವು

ಮಹಿಳೆಯೊಬ್ಬರು ಮೆಟ್ರೋ ಹಳಿ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ದೆಹಲಿಯ ಇಂದ್ರಲೋಕ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ದೆಹಲಿಯಲ್ಲಿ ಮೆಟ್ರೋ ರೈಲು ನಿಲ್ದಾಣಗಳು ಸಾಮಾನ್ಯ ರೈಲು ನಿಲ್ದಾಣಗಳಷ್ಟೇ ತುಂಬಿತುಳುಕುತ್ತಿರುತ್ತವೆ. ಮಹಿಳೆ ಇಳಿಯುವಷ್ಟರಲ್ಲಿ ಮೆಟ್ರೋ ಬಾಗಿಲು ಹಾಕಿದ ಕಾರಣ ಆಕೆಯ ಸೀರೆ ಹಾಗೂ ಜಾಕೆಟ್​ ಬಾಗಿಲು ನಡುವೆ ಸಿಲುಕಿತ್ತು.

ಇಳಿಯುವಷ್ಟರಲ್ಲೇ ಹಾಕಿದ ಮೆಟ್ರೋ ಬಾಗಿಲು, ಸಿಕ್ಕಿಕೊಂಡ ಸೀರೆ, ಜಾಕೆಟ್​, ರೈಲ್ವೆ ಹಳಿ ಮೇಲೆ ಬಿದ್ದು ಮಹಿಳೆ ಸಾವು
ದೆಹಲಿ ಮೆಟ್ರೋ
Follow us
ನಯನಾ ರಾಜೀವ್
|

Updated on: Dec 17, 2023 | 8:38 AM

ಮಹಿಳೆಯೊಬ್ಬರು ಮೆಟ್ರೋ ಹಳಿ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ದೆಹಲಿಯ ಇಂದ್ರಲೋಕ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ದೆಹಲಿಯಲ್ಲಿ ಮೆಟ್ರೋ ರೈಲು ನಿಲ್ದಾಣಗಳು ಸಾಮಾನ್ಯ ರೈಲು ನಿಲ್ದಾಣಗಳಷ್ಟೇ ತುಂಬಿತುಳುಕುತ್ತಿರುತ್ತವೆ. ಮಹಿಳೆ ಇಳಿಯುವಷ್ಟರಲ್ಲಿ ಮೆಟ್ರೋ ಬಾಗಿಲು ಹಾಕಿದ ಕಾರಣ ಆಕೆಯ ಸೀರೆ ಹಾಗೂ ಜಾಕೆಟ್​ ಬಾಗಿಲು ನಡುವೆ ಸಿಲುಕಿತ್ತು.

ಪ್ರಯಾಣಿಕರು ಕೂಗುತ್ತಿದ್ದಂತೆಯೇ ಮೆಟ್ರೋ ಹೊರಟುಬಿಟ್ಟಿತ್ತು, ರೈಲು ಪ್ಲಾಟ್​ಫಾರಂನಿಂದ ಮುಂದೆ ಸಾಗಿದ ನಂತರ ಮಹಿಳೆ ಪ್ಲಾಟ್​ಫಾರಂನ ಕೊನೆಯ ಗೇಟ್​ಗೆ ಡಿಕ್ಕಿ ಹೊಡೆದು ಟ್ರ್ಯಾಕ್​ ಮೇಲೆ ಬಿದ್ದಿದ್ದಾರೆ.

ಇದರಿಂದ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸಂತ್ರಸ್ತ ಮಹಿಳಾ ಪ್ರಯಾಣಿಕರನ್ನು 35 ವರ್ಷದ ರೀನಾ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಸಫ್ದರ್‌ಜಂಗ್ ಆಸ್ಪತ್ರೆಯ ನ್ಯೂರೋ ಸರ್ಜರಿ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮತ್ತಷ್ಟು ಓದಿ: ತಾಂತ್ರಿಕ ಸಮಸ್ಯೆ: ಯಶವಂತಪುರ-ನಾಗಸಂದ್ರ ನಡುವೆ ಮೆಟ್ರೋ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

ಈ ಘಟನೆಯಿಂದಾಗಿ ಮೆಟ್ರೋ ನಿಲ್ದಾಣಗಳಲ್ಲಿನ ವ್ಯವಸ್ಥೆ ಮತ್ತು ಮೆಟ್ರೋ ಗೇಟ್‌ಗಳನ್ನು ತೆರೆಯದಿರುವ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಈ ಮಹಿಳಾ ಪ್ರಯಾಣಿಕರು ನಂಗ್ಲೋಯ್ ನಿಲ್ದಾಣದಿಂದ ಗ್ರೀನ್ ಲೈನ್ ಮೆಟ್ರೋವನ್ನು ಹಿಡಿದಿದ್ದರು. ಮೋಹನ್ ನಗರಕ್ಕೆ ಹೋಗಬೇಕಿತ್ತು. ಹಾಗಾಗಿ ಇಂದ್ರಲೋಕ ನಿಲ್ದಾಣದಲ್ಲಿ ಮೆಟ್ರೋ ಬದಲಿಸಿ ರೆಡ್ ಲೈನ್ ಮೆಟ್ರೋ ಹಿಡಿಯಬೇಕಾಯಿತು.

1.4ಕ್ಕೆ ರೆಡ್​ ಲೈನ್ ಮೆಟ್ರೋ ಸಿಕ್ಕಿತ್ತು, ಆದರೆ ಮಗ ಸ್ವಲ್ಪ ಹಿಂದಿದ್ದ ಕಾರಣ , ಮಗನನ್ನು ಕರೆದೊಯ್ಯಲು ಮೆಟ್ರೋ ರೈಲಿನಿಂದ ಹೊರಬಂದಿದ್ದರು. ಆಗ ಮೆಟ್ರೋ ಬಾಗಿಲಿನಲ್ಲಿ ಸೀರೆ ಸಿಲುಕಿಕೊಂಡಿತ್ತು , ಬಾಗಿಲುಗಳನ್ನು ಅಳವಡಿಸಿದ್ದ ಸೆನ್ಸರ್​ ಕೂಡ ಕೆಲಸ ಮಾಡಲಿಲ್ಲ. ಇದರಿಂದಾಗಿ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಬಳಿಕ ಅವರು ಕೆಳಗೆ ಬಿದ್ದಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಚಿಕಿತ್ಸೆಗಾಗಿ ಅಶೋಕ್ ವಿಹಾರ್‌ನಲ್ಲಿರುವ ದೀಪಚಂದ್ ಬಂಧು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮಹಿಳಾ ರೋಗಿಗೆ ಟ್ಯೂಬ್ ಅಳವಡಿಸುವ ಮೂಲಕ ಆಮ್ಲಜನಕದ ಬೆಂಬಲವನ್ನು ನೀಡಲಾಯಿತು. ಇದಾದ ನಂತರ ಅವರನ್ನು ಲೋಕನಾಯಕ್‌ಗೆ ಮತ್ತು ನಂತರ ಆರ್‌ಎಂಎಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಬಟ್ಟೆ ಸಿಕ್ಕಿಹಾಕಿಕೊಂಡ ನಂತರ ಮೆಟ್ರೋ ಡೋರ್ ಸೆನ್ಸರ್‌ಗಳು ಏಕೆ ಕಾರ್ಯನಿರ್ವಹಿಸಲಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ? ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಹತ್ತಿದಾಗ ಮಾತ್ರ ರೈಲು ಮೆಟ್ರೋ ನಿಲ್ದಾಣದಿಂದ ಹೊರಡುವ ಯಾವುದೇ ವ್ಯವಸ್ಥೆ ಮೆಟ್ರೋ ನಿಲ್ದಾಣಗಳಲ್ಲಿ ಇಲ್ಲ. ಜನದಟ್ಟಣೆಯ ಸಮಯದಲ್ಲಿ ಕೆಲವು ಜನನಿಬಿಡ ನಿಲ್ದಾಣಗಳಲ್ಲಿ ಮಾತ್ರ ಗಾರ್ಡ್‌ಗಳು ಇರುತ್ತಾರೆ. ಇಲ್ಲದಿದ್ದರೆ ಭದ್ರತಾ ಸಿಬ್ಬಂದಿ ಕೂಡ ಸ್ಟೇಷನ್​ಗಳಲ್ಲಿ ಇರುವುದಿಲ್ಲ.

ಸಾಮಾನ್ಯವಾಗಿ ಮೆಟ್ರೋದ ಬಾಗಿಲುಗಳ ನಡುವೆ 15 ಎಂಎಂ ಗಾತ್ರದ ಯಾವುದೇ ವಸ್ತು ಅಡ್ಡ ಬಂದರೆ ಬಾಗಿಲು ಮುಚ್ಚುವುದಿಲ್ಲ. ಪ್ರಯಾಣಿಕರು ಸಡಿಲವಾದ ಬಟ್ಟೆಗಳನ್ನು ಧರಿಸಿ ಬಾಗಿಲುಗಳ ಬಳಿ ನಿಲ್ಲಬಾರದು ಎಂದು ಘೋಷಿಸಲಾಗಿದೆ. ಬಾಗಿಲು ಮುಚ್ಚುವಾಗ ಅಥವಾ ತೆರೆಯುವಾಗ ಮೆಟ್ರೋವನ್ನು ಹತ್ತಲು ಅಥವಾ ಡಿಬೋರ್ಡ್ ಮಾಡಲು ಪ್ರಯತ್ನಿಸಬಾರದು ಡಿಎಂಆರ್​ಸಿ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ