Delhi Extends Lockdown ದೆಹಲಿಯಲ್ಲಿ ಮತ್ತೆ ಲಾಕ್‌ಡೌನ್ ವಿಸ್ತರಣೆ, ಕೊವಿಡ್ ಪ್ರಕರಣ ಕಡಿಮೆ ಆದರೆ ಮಾತ್ರ ಮೇ 31ಕ್ಕೆ ಅನ್​ಲಾಕ್: ಅರವಿಂದ ಕೇಜ್ರಿವಾಲ್

|

Updated on: May 23, 2021 | 12:58 PM

Arvind Kejriwal: ದೆಹಲಿ ಸರ್ಕಾರವು ಏಪ್ರಿಲ್ 19 ರಂದು ಆರಂಭಿಕ ಲಾಕ್‌ಡೌನ್ ಅನ್ನು ವಿಧಿಸಿತ್ತು, ಇದನ್ನು ಕೊನೆಯದಾಗಿ ಮೇ 16 ರಂದು ಒಂದು ವಾರ ವಿಸ್ತರಿಸಲಾಯಿತು. ಪ್ರಕರಣಗಳು ಕಡಿಮೆಯಾದರೆ ಮತ್ತು ಜನರು ಈಗಿರುವ ನಿಬಂಧನೆಗಳನ್ನು ಅನುಸರಿಸುತ್ತಿದ್ದರೆ ಮಾತ್ರ  ಮೇ 31 ರಿಂದ ಅನ್​ಲಾಕ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ

Delhi Extends Lockdown ದೆಹಲಿಯಲ್ಲಿ ಮತ್ತೆ ಲಾಕ್‌ಡೌನ್ ವಿಸ್ತರಣೆ, ಕೊವಿಡ್ ಪ್ರಕರಣ ಕಡಿಮೆ ಆದರೆ ಮಾತ್ರ ಮೇ 31ಕ್ಕೆ ಅನ್​ಲಾಕ್: ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us on

ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಈಗಿರುವ ಲಾಕ್‌ಡೌನ್ ಅನ್ನು ಇನ್ನೂ ಒಂದು ವಾರ ವಿಸ್ತರಿಸಿದ್ದಾರೆ. ಪ್ರಕರಣಗಳು ಕಡಿಮೆಯಾದರೆ ಮತ್ತು ಜನರು ಈಗಿರುವ ನಿಬಂಧನೆಗಳನ್ನು ಅನುಸರಿಸುತ್ತಿದ್ದರೆ ಮಾತ್ರ  ಮೇ 31 ರಿಂದ ಅನ್​ಲಾಕ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು  ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ

ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಮತ್ತು ಸಕಾರಾತ್ಮಕ ದರಗಳು ಕಡಿಮೆಯಾಗುತ್ತಿದ್ದರೂ ದೆಹಲಿ ಸರ್ಕಾರವು ನಡೆಯುತ್ತಿರುವ ಲಾಕ್‌ಡೌನ್ ಅನ್ನು ಇನ್ನೂ ಒಂದು ವಾರ ವಿಸ್ತರಿಸುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಶನಿವಾರ ವರದಿ ಮಾಡಿತ್ತು.


ದೆಹಲಿ ಸರ್ಕಾರವು ಏಪ್ರಿಲ್ 19 ರಂದು ಆರಂಭಿಕ ಲಾಕ್‌ಡೌನ್ ಅನ್ನು ವಿಧಿಸಿತ್ತು, ಇದನ್ನು ಕೊನೆಯದಾಗಿ ಮೇ 16 ರಂದು ಒಂದು ವಾರ ವಿಸ್ತರಿಸಲಾಯಿತು.
ಸದ್ಯಕ್ಕೆ, ಮೇ 31 ರಂದು ಬೆಳಿಗ್ಗೆ 5 ಗಂಟೆಯವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ ಮತ್ತು ಅನ್​ಲಾಕ್  ಪ್ರಕ್ರಿಯೆಯು ಸಹ ನಿಧಾನವಾಗಲಿದೆ ಎಂದು  ಕೇಜ್ರಿವಾಲ್ ಹೇಳಿದರು. ನಗರವು ಸಕಾರಾತ್ಮಕ ದರವನ್ನು ತಗ್ಗಿಸಲು ಹೆಣಗಾಡುತ್ತಿರುವಾಗ ಎಚ್ಚರಿಕೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು.

ದೆಹಲಿಯಲ್ಲಿ ಭಾನುವಾರ 1,600 ಕೊವಿಡ್ ಹೊಸ ಪ್ರಕರಣಗಳು ದಾಖಲಾಗಿವೆ .ಇದು ಮಾರ್ಚ್ 1 ರ ನಂತರದ ಕನಿಷ್ಠ ದೈನಂದಿನ ಪ್ರಮಾಣವಾಗಿದೆ. ಪಾಸಿಟಿವಿಟಿ ಪ್ರಮಾಣವು ಮತ್ತಷ್ಟು ಕುಸಿದಿದ್ದು ಈಗ ಅದು ಶೇ 2.5 ರಷ್ಟಿದೆ.

ಎಲ್ಲರಿಗೂ ಲಸಿಕೆ ಹಾಕಿದರೆ ಮೂರನೇ ಅಲೆಯ ಹೊಡೆತಕ್ಕೆ ಹೆದರುವಂತಿಲ್ಲ. ಎಲ್ಲರಿಗೂ ಆದಷ್ಟು ಬೇಗ ಲಸಿಕೆ ಹಾಕಲು ಚಿಂತಿಸುತ್ತಿದ್ದೇವೆ . ಲಸಿಕೆಗಳಿಗೆ ಸಂಬಂಧಿಸಿದಂತೆ ನಾನು ದೇಶದ ಮತ್ತು ವಿದೇಶಿ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ನಮ್ಮ ಬಜೆಟ್‌ನಿಂದ ಖರ್ಚು ಮಾಡಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ ಕೇಜ್ರಿವಾಲ್.

ಶನಿವಾರ, ದೆಹಲಿಯ ಪಾಸಿಟಿವಿಟಿ ದರವು ಶೇಕಡಾ 3.58 ಕ್ಕೆ ಇಳಿದಿದೆ – ಇದು ಏಪ್ರಿಲ್ 1 ರ ನಂತರದ ಅತ್ಯಂತ ಕಡಿಮೆ ದರ ಆಗಿದೆ. ಸತತ ನಾಲ್ಕನೇ ದಿನ ನಗರವು ಪ್ರತಿದಿನ 4,000 ಕ್ಕಿಂತ ಕಡಿಮೆ ಪ್ರಕರಣಗಳನ್ನು ದಾಖಲಿಸಿದೆ. ಶುಕ್ರವಾರ, ದೆಹಲಿಯಲ್ಲಿ 3,009 ಪ್ರಕರಣಗಳು ಮತ್ತು 252 ಸಾವುಗಳು ದಾಖಲಾಗಿದ್ದು, ಸಕಾರಾತ್ಮಕ ಪ್ರಮಾಣವು ಶೇಕಡಾ 4.76 ಕ್ಕಿಂತ ಕಡಿಮೆಯಾಗಿದೆ.


ಇದೀಗ, ಜನರಿಗೆ ಕಡಿಮೆ ಸಮಯದಲ್ಲಿ ಲಸಿಕೆ ನೀಡುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ನಾವು ದೆಹಲಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ ಆದ್ದರಿಂದ ಮೂರು ತಿಂಗಳಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು, ಆದರೆ ಲಸಿಕೆಗಳ ಕೊರತೆಯಿದೆ. ಎಲ್ಲರಿಗೂ ಸಮಯಕ್ಕೆ ಲಸಿಕೆ ಹಾಕಲು ಸಾಧ್ಯವಾದರೆ ನಾವು ಕೊವಿಡ್  ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ 18ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಇಲ್ಲ ಕೊವಿಡ್​ 19 ಲಸಿಕೆ; 24ಗಂಟೆಯಲ್ಲಿ ವಿದೇಶದಿಂದ ತರಿಸಿಕೊಡಿ ಎಂದ ಸಿಎಂ

Published On - 12:43 pm, Sun, 23 May 21