ದೆಹಲಿ: ದೆಹಲಿ (Delhi) ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal)ಸೋಮವಾರ ದೆಹಲಿ ಸಾರಿಗೆ ನಿಗಮದ (ಡಿಟಿಸಿ) ಮೊದಲ ಎಲೆಕ್ಟ್ರಿಕ್ ಬಸ್‌ಗೆ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರ ಸಮ್ಮುಖದಲ್ಲಿ ಚಾಲನೆ ನೀಡಿದರು. ಏಪ್ರಿಲ್ ವೇಳೆಗೆ ಇನ್ನೂ 300 ಎಲೆಕ್ಟ್ರಿಕ್ ಬಸ್‌ಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇ-44 ಸಂಖ್ಯೆಯ, 12 ಮೀಟರ್ ಉದ್ದದ, ಲೋ ಫ್ಲೋರ್ ಎಸಿ ಬಸ್ ಸೋಮವಾರ ಐಪಿ ಡಿಪೋ ಮತ್ತು ಪ್ರಗತಿ ಮೈದಾನದ ನಡುವೆ ಸಂಚರಿಸಿತು. ಇದು ಸಿಸಿಟಿವಿ ಮತ್ತು ಪ್ಯಾನಿಕ್ ಬಟನ್‌ನಂತಹ ಇತರ ಸೌಲಭ್ಯಗಳ ಜೊತೆಗೆ ಅಂಗವಿಕಲರಿಗಾಗಿ ರಾಂಪ್ ಅನ್ನು ಹೊಂದಿದೆ. “ಇದು ದೆಹಲಿಯಲ್ಲಿ ಕಾರ್ಯಾಚರಿಸುತ್ತಿರುವ ಮೊದಲ ಎಲೆಕ್ಟ್ರಿಕ್ ಬಸ್ ಆಗಿದೆ. ಇದು ಹಲವು ವಿಧಗಳಲ್ಲಿ ಮುಖ್ಯವಾಗಿದೆ. ದೆಹಲಿಯಲ್ಲಿ ಸಾರಿಗೆ ಕ್ಷೇತ್ರದಲ್ಲಿ ಇದು ಹೊಸ ಯುಗಕ್ಕೆ ನಾಂದಿಯಾಗಿದೆ ಎಂದು ಕೇಜ್ರಿವಾಲ್ ಸಮಾರಂಭದಲ್ಲಿ ಹೇಳಿದರು. “ಹಳೆಯ ಬಸ್‌ಗಳನ್ನು ಕ್ರಮೇಣವಾಗಿ ಎಲೆಕ್ಟ್ರಿಕ್ ಬಸ್‌ಗಳು ಬದಲಾಯಿಸುತ್ತವೆ ಎಂದು ನಾನು ನಂಬುತ್ತೇನೆ. ನಗರದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಇದು ಶಬ್ದ-ಮುಕ್ತವಾಗಿದೆ ಮತ್ತು ಶೂನ್ಯ ಮಾಲಿನ್ಯ ಹೊರಸೂಸುವಿಕೆಯನ್ನು ಹೊಂದಿದೆ. ಏಪ್ರಿಲ್ ವೇಳೆಗೆ, ದೆಹಲಿಗೆ ಇನ್ನೂ 300 ಬಸ್‌ಗಳು ತಲುಪುವ ನಿರೀಕ್ಷೆಯಿದೆ. ಮುಂಬರುವ ವರ್ಷಗಳಲ್ಲಿ ಸುಮಾರು 2,000 ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.
2011 ರಿಂದ ಡಿಟಿಸಿ ಫ್ಲೀಟ್‌ಗೆ ಸೇರ್ಪಡೆಗೊಂಡ ಮೊದಲ ಬಸ್ ಇದಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. “ಇನ್ನೊಂದು ಪ್ರಮುಖ ಬೆಳವಣಿಗೆಯೆಂದರೆ 2011 ರಿಂದ, ಡಿಟಿಸಿ ಫ್ಲೀಟ್‌ನಲ್ಲಿ ಒಂದೇ ಒಂದು ಹೊಸ ಬಸ್ ಅನ್ನು ಸೇರಿಸಲಾಗಿಲ್ಲ.ನಾವು ಪ್ರಯತ್ನಿಸಿದಾಗಲೆಲ್ಲಾ ನಾವು ಕೆಲವು ಸಮಸ್ಯೆಗೆ ಸಿಲುಕಿದ್ದೇವೆ. . ಇಂದು, ಈ ಬಸ್ ಅನ್ನು ಅಂತಿಮವಾಗಿ ಫ್ಲೀಟ್‌ಗೆ ಸೇರಿಸಲಾಗಿದೆ. ಹೆಚ್ಚಿನ ಬಸ್‌ಗಳನ್ನು ಫ್ಲೀಟ್‌ಗೆ ಸೇರಿಸುವ ಭರವಸೆಯಿಂದ ಕೆಲವೊಂದು ಕೆಟ್ಟ ನಂಬಿಕೆಗಳನ್ನು ಹೋಗಲಾಡಿಸಲು ‘ಹವನ’ ನಡೆಸಲಾಗಿದೆ ಎಂದು ಅವರು ಹೇಳಿದರು.
“ವೇಗದ ಚಾರ್ಜಿಂಗ್ ಪ್ರಕಾರ ಬಸ್ ಸಂಪೂರ್ಣವಾಗಿ ಚಾರ್ಜ್ ಮಾಡಲು 1-1.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಒಂದು ಸಂಪೂರ್ಣ ಚಾರ್ಜ್‌ನಲ್ಲಿ, ಇದು 120 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಬಹುದು. ಎಲ್ಲ ಡಿಪೋಗಳಲ್ಲಿ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗುತ್ತಿದೆ,” ಎಂದು ಹೇಳಿದರು.
ಆದಾಗ್ಯೂ, ಕಳೆದ ಏಳು ವರ್ಷಗಳಲ್ಲಿ ಕೇವಲ ಒಂದು ಎಲೆಕ್ಟ್ರಿಕ್ ಬಸ್ ಅನ್ನು ಡಿಟಿಸಿ ಫ್ಲೀಟ್‌ಗೆ ಸೇರಿಸಿದ್ದಕ್ಕಾಗಿ ಬಿಜೆಪಿ ಸಂಸದ ಮನೋಜ್ ತಿವಾರಿ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು. ಸೋಮವಾರದ ಸಮಾರಂಭವು ಕೇವಲ ” ಪ್ರಚಾರಕ್ಕಾಗಿ” ಎಂದು ಆರೋಪಿಸಿದ ತಿವಾರಿ, “ದೆಹಲಿ 11,000 ಬಸ್‌ಗಳನ್ನು – 6,000 ಇ-ಬಸ್‌ಗಳು ಮತ್ತು 5,000 ಸಿಎನ್‌ಜಿ ಚಾಲಿತ ಬಸ್‌ಗಳನ್ನು ಖರೀದಿಸಿದ್ದರೆ ನಾಗರಿಕರಿಗೆ ಉಸಿರಾಡಲು ಶುದ್ಧ ಗಾಳಿ ಇರುತ್ತಿತ್ತು ಎಂದಿದ್ದಾರೆ.
सभी दिल्लीवासियों को बधाई।
आज से दिल्ली की सड़कों पर पहली इलेक्ट्रिक बस चलनी शुरू हो गई है। DTC के बेड़े में जल्द ही 300 इलेक्ट्रिक बसें जुड़ेंगी।
आप भी अपने वाहन को इलेक्ट्रिक में स्विच कर प्रदूषण के ख़िलाफ़ इस जंग में अपना योगदान ज़रूर दें। pic.twitter.com/7M2nTuvnsc
— Arvind Kejriwal (@ArvindKejriwal) January 17, 2022
ಬಸ್ ಗೆ ಚಾಲನೆ ನೀಡಿದ ಫೋಟೊಗಳನ್ನು ಟ್ವೀಟ್ ಮಾಡಿದ ಕೇಜ್ರಿವಾಲ್, ಎಲ್ಲಾ ದೆಹಲಿ ನಿವಾಸಿಗಳಿಗೆ ಶುಭಾಶಯಗಳು. ಇಂದಿನಿಂದ ದೆಹಲಿಯ ರಸ್ತೆಗಳಲ್ಲಿ ಮೊದಲ ಎಲೆಕ್ಟ್ರಿಕ್ ಬಸ್ ಓಡಾಟ ಆರಂಭಿಸಿದೆ. 300 ಎಲೆಕ್ಟ್ರಿಕ್ ಬಸ್‌ಗಳನ್ನು ಶೀಘ್ರದಲ್ಲೇ ಡಿಟಿಸಿಯ ಫ್ಲೀಟ್‌ಗೆ ಸೇರಿಸಲಾಗುವುದು. ನಿಮ್ಮ ವಾಹನವನ್ನು ಎಲೆಕ್ಟ್ರಿಕ್‌ಗೆ ಬದಲಾಯಿಸುವ ಮೂಲಕ ಮಾಲಿನ್ಯದ ವಿರುದ್ಧದ ಈ ಯುದ್ಧದಲ್ಲಿ ನೀವು ಸಹ ಕೊಡುಗೆ ನೀಡಬೇಕು ಎಂದಿದ್ದಾರೆ.
ಇದನ್ನೂ ಓದಿ: Drone Attacks In Abu Dhabi ಅಬುಧಾಬಿಯಲ್ಲಿ ಡ್ರೋನ್ ದಾಳಿ: ಇಬ್ಬರು ಭಾರತೀಯರು, ಓರ್ವ ಪಾಕ್ ಪ್ರಜೆ ಸಾವು