
ನವದೆಹಲಿ, ಅಕ್ಟೋಬರ್ 06: ಬ್ರಾಹ್ಮಣ(Brahmin)ರು ಸಮಾಜದಲ್ಲಿ ಜ್ಞಾನದ ಬೆಳಕನ್ನು ಬೆಳಗಿಸುವ ಕೆಲಸ ಮಾಡುತ್ತಾರೆ, ಎಲ್ಲಾ ಸರ್ಕಾರಗಳು ಸಮುದಾಯದ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು ಎನ್ನುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಹೇಳಿಕೆ ತೀವ್ರ ವಿವಾದದ ಅಲೆ ಎಬ್ಬಿಸಿದೆ. ದೆಹಲಿಯ ಪಿತಾಂಪುರದಲ್ಲಿ ಬ್ರಾಹ್ಮಣ ಸಭಾ ಆಯೋಜಿಸಿದ್ದ ಅಖಿಲ ಭಾರತ ಬ್ರಾಹ್ಮಣ ಸಮ್ಮೇಳನದಲ್ಲಿ ರೇಖಾ ಗುಪ್ತಾ ಈ ಹೇಳಿಕೆ ನೀಡಿದ್ದಾರೆ. ಬ್ರಾಹ್ಮಣ ಸಮುದಾಯವು ಧರ್ಮಗ್ರಂಥಗಳನ್ನು ಪೂಜಿಸುವುದಷ್ಟೇ ಅಲ್ಲದೆ ಆಯುಧಗಳನ್ನು ಕೂಡ ಗೌರವಿಸುತ್ತಾರೆ.
ಸಮುದಾಯವು ಯಾವಾಗಲೂ ಧರ್ಮ, ಜ್ಞಾನ ಮತ್ತು ಸದ್ಭಾವನೆಯನ್ನು ಉತ್ತೇಜಿಸುವ ಮೂಲಕ ಸಮಾಜದ ಒಳಿತಿಗಾಗಿ ಕೆಲಸ ಮಾಡಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಅದು ಬ್ರಾಹ್ಮಣ ಸಮುದಾಯದ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದರು.
ದೆಹಲಿಯಲ್ಲಿ ಬ್ರಾಹ್ಮಣ ಸಮುದಾಯವು ಕಳೆದ 27 ವರ್ಷಗಳಿಂದ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಈಗ ರಾಜಧಾನಿಯಲ್ಲಿ ಉತ್ತಮ ಆಡಳಿತ, ಅಭಿವೃದ್ಧಿಗಾಗಿ ಬ್ರಾಹ್ಮಣ ಸಮುದಾಯವು ತಮ್ಮ ಸಲಹೆಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಮತ್ತಷ್ಟು ಓದಿ: Rekha Gupta Attacked: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ
ದೆಹಲಿಯನ್ನು ಮುನ್ನಡೆಸಲು ನಿಮ್ಮೆಲ್ಲರ ಸಲಹೆಗಳನ್ನು ನೀಡುವುದನ್ನು ಮುಂದುವರಿಸಬೇಕೆಂದು ನಾನು ವಿನಂತಿಸುತ್ತೇನೆ. ಹಲವು ಹಳೆಯ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ. ಕಳೆದ 27 ವರ್ಷಗಳಿಂದ ದೆಹಲಿಯ ಪ್ರಗತಿ ನಿಧಾನವಾಗಿದೆ, ಆದರೆ ಈಗ ಈ ವೇಗವನ್ನು ಹೆಚ್ಚಿಸುವ ಸಮಯ.
#WATCH | Delhi | Addressing the All India Brahmin Conference organised by Shri Brahmin Sabha in Pitampura, CM Rekha Gupta says, “… If anyone is igniting the flame of knowledge in society, it is our Brahmin community. They worship not only scriptures but also weapons. Only… pic.twitter.com/NwiPpMIzkX
— ANI (@ANI) October 5, 2025
ನಾವೆಲ್ಲರೂ ದೆಹಲಿ ಮತ್ತು ಅದರ ಜನರಿಗಾಗಿ ಒಟ್ಟಾಗಿ ಕೆಲಸ ಮಾಡಿದರೆ, ನಾವು ದೆಹಲಿಯನ್ನು ಅಭಿವೃದ್ಧಿ ಹೊಂದಿದ ನಗರವನ್ನಾಗಿ ಮಾಡಬಹುದು” ಎಂದು ರೇಖಾ ಗುಪ್ತಾ ಹೇಳಿದರು.
ರೇಖಾ ಗುಪ್ತಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ಸಂಜೀವ್ ಝಾ, ಅವರ ಹೇಳಿಕೆಯಿಂದ ಆಘಾತಕ್ಕೊಳಗಾಗಿದ್ದೇನೆ, ಏಕೆಂದರೆ ಅದು ಜನರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದರು . ಏತನ್ಮಧ್ಯೆ, ಅಕ್ಟೋಬರ್ 25 ರಿಂದ 28 ರವರೆಗೆ ನಡೆಯಲಿರುವ ಛಠ್ ಪೂಜೆಯ ಸಿದ್ಧತೆಗಳನ್ನು ಮುಖ್ಯಮಂತ್ರಿ ರೇಖಾ ಗುಪ್ತಾ ಪರಿಶೀಲಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ