ದೆಹಲಿ: ಆಪ್ ನಾಯಕ ಹಾಗೂ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮನೆಯ ಮೇಲೆ ಇಂದು ಕೆಲ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ದುಷ್ಕರ್ಮಿಗಳು ದಾಳಿ ನಡೆಸುವಾಗ ಮನೀಷ್ ಸಿಸೋಡಿಯಾ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಅವರಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಈ ದಾಳಿಯನ್ನು ಬಿಜೆಪಿಯವರೇ ಮಾಡಿದ್ದಾರೆ ಎನ್ನುವ ಆರೋಪ ಮಾಡಿರುವ ಅರವಿಂದ್ ಕೇಜ್ರಿವಾಲ್, ಇದಕ್ಕೆ ದೆಹಲಿ ಪೊಲೀಸರ ಕುಮ್ಮಕ್ಕು ಕೂಡ ಇದೆ ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಇಲ್ಲದಿರುವಾಗ ಗೂಂಡಾಗಳು ಮನೆಗೆ ಪ್ರವೇಶಿಸಿದ್ದಾರೆ. ಅಲ್ಲಿ ಪೊಲೀಸರು ಕೂಡ ಇದ್ದರು. ದೆಹಲಿಯಲ್ಲಿ ಬಿಜೆಪಿ ದಿನದಿಂದ ದಿನಕ್ಕೆ ಏಕೆ ಹತಾಶವಾಗುತ್ತಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
I strongly condemn the systematic, organised and violent attack on Dy CM Sh Manish Sisodia’s home. The goons entered his house in police presence when he was away.
Why is BJP getting so desperate by the day in Delhi?
— Arvind Kejriwal (@ArvindKejriwal) December 10, 2020
ಬಹುತೇಕ ಆಪ್ ನಾಯಕರು ಇದೇ ಮಾದರಿಯ ಆರೋಪ ಮಾಡಿದ್ದಾರೆ. ಈ ಘಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಆಪ್ ವಕ್ತಾರ ಸೌರಭ್ ಭಾರದ್ವಾಜ್, ಸಿಸೋಡಿಯಾ ಮನೆಗೆ ಬಿಜೆಪಿ ಕಾರ್ಯಕರ್ತರು ಪ್ರವೇಶಿಸುವುದನ್ನು ಪೊಲೀಸರು ತಡೆದಿಲ್ಲ. ಬ್ಯಾರಿಕೇಡ್ಗಳನ್ನು ಪೊಲೀಸರೇ ತೆಗೆದು ಹಾಕಿದ್ದರು ಎನ್ನುವ ಆರೋಪ ಹೊರಿಸಿದ್ದಾರೆ.
6 ಜನರ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೆ, 6 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರು ಬಿಜೆಪಿ ಕೈಗೊಂಬೆ ಎಂದು ಆಪ್ ಸರ್ಕಾರ ಈ ಮೊದಲಿನಿಂದಲೂ ಆರೋಪಿಸುತ್ತಲೇ ಬರುತ್ತಿದೆ. ಇದೇ ಆರೋಪವನ್ನು ಇಂದು ಕೂಡ ಮುಂದುವರಿಸಿದೆ. ಆದರೆ, ಇದು ಸುಳ್ಳು ಎಂದು ದೆಹಲಿ ಪೊಲೀಸ್ ಸ್ಪಷ್ಟನೆ ನೀಡಿದೆ.
ದೆಹಲಿಯಲ್ಲಿ ಐದು ಶಂಕಿತ ಉಗ್ರರ ಬಂಧನ; ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ, ತಪ್ಪಿದ ದುರಂತ