ನವದೆಹಲಿ, ನವೆಂಬರ್ 4: ವೇಗವಾಗಿ ಬಂದ ಡಿಟಿಸಿ ಬಸ್ಸೊಂದು (DTC Bus) ಹಲವು ಕಾರುಗಳು ಮತ್ತು ಸ್ಕೂಟರ್‌ಗಳಿಗೆ ಡಿಕ್ಕಿ ಹೊಡೆದು ಒಬ್ಬ ವ್ಯಕ್ತಿ ಗಾಯಗೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಶನಿವಾರ ಸಂಭವಿಸಿದೆ. ಅದೃಷ್ಟವಶಾತ್, ಸಾವು ಸಂಭವಿಸಿಲ್ಲ. ಆದರೆ, ಘಟನೆಯ ಭೀಕರ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು (CCTV Footage), ಬೆಚ್ಚಿ ಬೀಳಿಸುವಂತಿದೆ. ಡಿಟಿಸಿ ಬಸ್ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಡಿಕ್ಕಿಯಾಗಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ದೆಹಲಿಯ ರೋಹಿಣಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ವಿಡಿಯೋದಲ್ಲಿ ಕಂಡುಬಂದಿರುವಂತೆ, ಬಸ್ ಮೊದಲಿಗೆ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ನಂತರ ಇ-ರಿಕ್ಷಾ ಮತ್ತು ಬೈಕ್‌ಗೆ ಡಿಕ್ಕಿ ಹೊಡೆದು ಅವುಗಳನ್ನು ಎಳೆದುಕೊಂಡು ಹೋಗಿದೆ. ಅಷ್ಟೇ ಅಲ್ಲದೆ, ಪಾದಚಾರಿ ಮಾರ್ಗದ ಬಳಿ ನಿಲ್ಲಿಸಿದ ಹಲವಾರು ಸ್ಕೂಟರ್‌ಗಳಿಗೆ, ಸೈಕಲ್ಗೆ ಡಿಕ್ಕಿ ಹೊಡೆದಿದೆ.
ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಿಯಂತ್ರಣ ತಪ್ಪಿದ ಡಿಟಿಸಿ ಬಸ್ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
दिल्ली के रोहिणी इलाके में डीटीसी की बेकाबू बस ने कई वाहनों में मारी टक्कर, एक शख्स घायल। पूरा हादसा सीसीटीवी में कैद। @indiatvnews @IndiaTVHindi pic.twitter.com/KDb4i5F3uZ
— Abhay parashar (@abhayparashar) November 4, 2023
ಬಸ್ ಏಕಾಏಕಿ ಒಟ್ಟಾರೆ ಚಲಿಸುತ್ತಿರುವದನ್ನು ಕಂಡು ದಿಗ್ಭ್ರಮೆಗೊಂಡ ಸ್ಥಳೀಯರು ದಿಕ್ಕಾಪಾಲಾಗಿ ಓಡಿದ್ದಾರೆ. ಬಸ್ ನಿಂತ ಬಳಿಕ ಅದು ಡಿಕ್ಕಿ ಹೊಡೆದವರನ್ನು ಪರಿಶೀಲಿಸಲು ಸ್ಥಳಕ್ಕೆ ಧಾವಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸಿದೆ.
ಅಪಘಾತದಲ್ಲಿ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ಕೊಚ್ಚಿಯಲ್ಲಿ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಪತನ: ನೌಕಾಪಡೆ ಅಧಿಕಾರಿ ಸಾವು
ಕಳೆದ ತಿಂಗಳು, ಪೂರ್ವ ದೆಹಲಿಯಲ್ಲಿ ಡಿಟಿಸಿ ಬಸ್ ಎರಡು ಇ-ರಿಕ್ಷಾಗಳು ಮತ್ತು ಹಣ್ಣಿನ ಕಾರ್ಟ್ ಎಳೆಯುವವರಿಗೆ ಡಿಕ್ಕಿ ಹೊಡೆದು 36 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ