ನವದೆಹಲಿ, ಜನವರಿ 11: ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ಅನುರಾಗ್ ಠಾಕೂರ್, ದೆಹಲಿಯಲ್ಲಿ ಶಾಲೆಯ ಬದಲು ಬಾರ್ ತೆರೆದಿದ್ದಾರೆ ಎಂದು ಟೀಕಿಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿ ಮದ್ಯ ಹಗರಣದಿಂದ 2,026 ಕೋಟಿ ರೂಪಾಯಿ ನಷ್ಟವಾಗಿದ ಎಂಬುದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. ಪೊರಕೆಯೊಂದಿಗೆ ಅಧಿಕಾರಿಕ್ಕೆ ಬಂದವರು ಪಾಠಶಾಲಾಗಳಿಗೆ ಬದಲಾಗಿ ಮಧುಶಾಲಾ (ಮದ್ಯಂಗಡಿಗಳನ್ನು) ತೆರೆದಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಅಬಕಾರಿ ಹಗರಣದಲ್ಲಿ 8 ಮಂದಿ ಸಚಿವರು ಮತ್ತು 15 ಮಂದಿ ಶಾಸಕರು ಜೈಲಿಗೆ ಹೋದರು. ಸ್ವತಃ ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋಗಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಅವರು ಮಾಡಿದ ಪಾಪಗಳು ಬಹಳ ದೊಡ್ಡವು ಎಂದು ಅನುರಾಗ್ ಠಾಕೂರ್ ಹೇಳಿದರು.
ಸಿಎಜಿ ವರದಿಯು ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ 10 ವಿಚಾರಗಳನ್ನು ಬಹಿರಂಗಪಡಿಸಿದೆ. 2026 ಕೋಟಿ ರೂ. ಹಗರಣದ ದೊರೆ ಅರವಿಂದ್ ಕೇಜ್ರಿವಾಲ್. ಹಗರಣದಿಂದ ರಾಜ್ಯಕ್ಕೆ ನಷ್ಟವಾಗಿದೆ. ಅರವಿಂದ್ ಕೇಜ್ರಿವಾಲ್ ಅವರೇ, ಇದರ ಲಾಭ ಯಾರಿಗೆ ಬಂತು ಹೇಳಿ? ಎಎಪಿ ನಾಯಕರೆಲ್ಲ ಜೈಲಿಗೆ ಹೋಗಿದ್ದಾರೆ. ಅವರ ಪಕ್ಷದಲ್ಲಿ ಒಬ್ಬ ಪ್ರಾಮಾಣಿಕ ವ್ಯಕ್ತಿಯೂ ಉಳಿದಿಲ್ಲ ಎಂದು ಠಾಕೂರ್ ವಾಗ್ದಾಳಿ ನಡೆಸಿದರು.
Shri @ianuragthakur addresses a press conference at BJP headquarters in New Delhi. https://t.co/JFCI9QxCxu
— BJP Delhi (@BJP4Delhi) January 11, 2025
ದೆಹಲಿಯಲ್ಲಿ ಎಎಪಿ ಅಧಿಕಾರದಿಂದ ತೊಲಗಬೇಕಾದ್ದು ಅನಿವಾರ್ಯವಾಗಿದೆ. ಕೊರೊನಾ ಅವಧಿಯಲ್ಲಿ ಸೌಲಭ್ಯಗಳ ಕೊರತೆಯಿದ್ದಾಗ ಆಮ್ ಆದ್ಮಿ ಪಕ್ಷವು ಮದ್ಯದ ಹಗರಣದ ಬಟ್ಟೆಯನ್ನು ನೇಯುವಲ್ಲಿ ನಿರತವಾಗಿತ್ತು ಮತ್ತು ಸಾರ್ವಜನಿಕರು ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದರು. ಇಂತಹ ಸರಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ದೆಹಲಿಯ ಆಮ್ ಆದ್ಮಿ ಸರ್ಕಾರ 10 ವರ್ಷಗಳಲ್ಲಿ ಕೇವಲ ಹಗರಣಗಳನ್ನು ಮಾತ್ರ ಮಾಡಿದೆ. ಸಾರ್ವಜನಿಕರ ಬಗ್ಗೆ ಏನೂ ಯೋಚಿಸಿಲ್ಲ ಎಂದು ಅವರು ಕಿಡಿ ಕಾರಿದರು.
ಆಮ್ ಆದ್ಮಿ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಅನುರಾಗ್ ಠಾಕೂರ್ ಪ್ರಶ್ನಿಸಿದ್ದಾರೆ. ಅತಿಶಿ ಅವರನ್ನು ಮುಖ್ಯಮಂತ್ರಿ ಎಂದು ಪರಿಗಣಿಸುವುದಿಲ್ಲ. ನಿಮ್ಮಲ್ಲಿ ಪ್ರಾಮಾಣಿಕ ನಾಯಕರಿಲ್ಲ. ಹೀಗಾಗಿ ಈಗ ನಿಮ್ಮನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ದೆಹಲಿಯ ಜನ ಮನಸ್ಸು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನಾನೂ ಮನುಷ್ಯನೇ ವಿನಃ ದೇವರಲ್ಲ, ತಪ್ಪಾಗುವುದು ಸಹಜ; ಪ್ರಧಾನಿ ಮೋದಿ ಹೀಗಂದಿದ್ದೇಕೆ?
ದೆಹಲಿಯ ಜನರು ಡಬಲ್ ಎಂಜಿನ್ ಸರ್ಕಾರವನ್ನು ಬಯಸುತ್ತಾರೆ, ಆದ್ದರಿಂದ ಈ ಬಾರಿ ಬಿಜೆಪಿ ಬಹುಮತದಿಂದ ಗೆಲ್ಲುತ್ತದೆ. ದೆಹಲಿಯ ಜನರು ಕೇಂದ್ರದ ಯೋಜನೆಗಳ ಲಾಭವನ್ನು ಪಡೆಯಬೇಕೆಂದು ಬಯಸುತ್ತಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಠಾಕೂರ್ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ